PPF: ಸಂಬಳ ಪಡೆಯುವ ನೌಕರರಿಗೆ ಪಿಪಿಎಫ್ ಹೂಡಿಕೆ ಅಗತ್ಯವಾ? ಬೇರೆ ಉತ್ತಮ ಆಯ್ಕೆಗಳೇನು?

Disadvantages of Public Provident Fund: ಪಿಪಿಎಫ್ ಸ್ಕೀಮ್​ನಲ್ಲಿ ಆಕರ್ಷಣೆ ಕಡಿಮೆ ಮಾಡುವ ಅಂಶಗಳೂ ಇವೆ. ಇದಕ್ಕಿಂತ ಬೇರೆ ಉತ್ತಮ ಆಯ್ಕೆಗಳಿರುವುದರಿಂದ ಪಿಪಿಎಫ್ ಅನಿವಾರ್ಯ ಎಂಬಂತಿಲ್ಲ. ಪಿಪಿಎಫ್ ದೀರ್ಘಾವಧಿಗೆ ಉತ್ತಮ ಉಳಿತಾಯ ಯೋಜನೆಯಾದರೂ ಕೆಲ ಋಣಾತ್ಮಕ ಸಂಗತಿಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ

PPF: ಸಂಬಳ ಪಡೆಯುವ ನೌಕರರಿಗೆ ಪಿಪಿಎಫ್ ಹೂಡಿಕೆ ಅಗತ್ಯವಾ? ಬೇರೆ ಉತ್ತಮ ಆಯ್ಕೆಗಳೇನು?
ಪಿಪಿಎಫ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 11, 2023 | 7:03 PM

ಸರ್ಕಾರದ ಹಲವು ಸೇವಿಂಗ್ ಸ್ಕೀಮ್​ಗಳಲ್ಲಿ ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಒಂದು. ದೀರ್ಘಾವಧಿ ಹೂಡಿಕೆ ಮತ್ತು ಸುರಕ್ಷಿತವಾಗಿ ಹೂಡಿಕೆ ಮಾಡಬಯಸುವವರಿಗೆ ಪಿಪಿಎಫ್ ಉತ್ತಮ ಆಯ್ಕೆಯೇನೋ ಹೌದು. ತೆರಿಗೆ ಲಾಭವೂ ಸಿಗುತ್ತದೆ. ಆದರೆ, ಪಿಪಿಎಫ್ ಸ್ಕೀಮ್​ನಲ್ಲಿ ಆಕರ್ಷಣೆ ಕಡಿಮೆ ಮಾಡುವ ಅಂಶಗಳೂ ಇವೆ. ಇದಕ್ಕಿಂತ ಬೇರೆ ಉತ್ತಮ ಆಯ್ಕೆಗಳಿರುವುದರಿಂದ ಪಿಪಿಎಫ್ ಅನಿವಾರ್ಯ ಎಂಬಂತಿಲ್ಲ. ಪಿಪಿಎಫ್ ದೀರ್ಘಾವಧಿಗೆ ಉತ್ತಮ ಉಳಿತಾಯ ಯೋಜನೆಯಾದರೂ (Long Term Investment Scheme) ಕೆಲ ಋಣಾತ್ಮಕ ಸಂಗತಿಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ:

ಸಂಬಳದಾರರಿಗೆ ಪಿಪಿಎಫ್ ಆಕರ್ಷಕ ಸ್ಕೀಮ್ ಅಲ್ಲ; ಬೇರೆ ಆಯ್ಕೆ ಇದೆ

ಪಿಪಿಎಫ್ ಶೇ. 7.1ರಷ್ಟು ವಾರ್ಷಿಕ ಬಡ್ಡಿ ಆಫರ್ ಮಾಡುತ್ತದೆ. ಇದಕ್ಕೆ ಹೋಲಿಸಿದರೆ ಇಪಿಎಫ್​ನಲ್ಲಿರುವ ನಮ್ಮ ಹಣಕ್ಕೆ ಶೇ. 8.15ರಷ್ಟು ಬಡ್ಡಿ ಸಿಗುತ್ತದೆ. ಹೀಗಾಗಿ, ಸಂಬಳ ಪಡೆಯುವ ವರ್ಗದವರು ಪಿಪಿಎಫ್ ಬದಲು ವಾಲಂಟರಿ ಪ್ರಾವಿಡೆಂಟ್ ಫಂಡ್ ಅಥವಾ ವಿಪಿಎಫ್​ಗೆ ಹಣ ಹೂಡಿಕೆ ಮಾಡಬಹುದು. ಇದರಿಂದ ಬಡ್ಡಿಯೂ ಹೆಚ್ಚು ಸಿಗುತ್ತದೆ, ತೆರಿಗೆಯ ಲಾಭವೂಇರುತ್ತದೆ.

ಸಂಬಳದ ಆದಾಯ ಇಲ್ಲದ ಐಟಿ ಪಾವತಿದಾರರಿಗೆ ಪಿಪಿಎಫ್ ಮೇಲಿನ ಹೂಡಿಕೆ ಉತ್ತಮ ಆಯ್ಕೆ ಆಗಬಹುದು.

ಇದನ್ನೂ ಓದಿInspiring: 11ನೇ ವಯಸ್ಸಿನಲ್ಲಿ ಕೇಳಿದ್ದು ಅಪ್ಪ ಕೊಡಿಸಲಿಲ್ಲ; ಹಣ ಸಂಪಾದಿಸುವ ಹುಚ್ಚು ಹಿಡಿದವ 22ನೇ ವಯಸ್ಸಿಗೆ ಕೋಟ್ಯಾಧಿಪತಿಯಾಗಿ ನಿವೃತ್ತನಾದ ಕಥೆ

ಕಿರು ಅವಧಿಯ ಹೂಡಿಕೆ ಮಾಡಬಯಸುವವರಿಗೆ ಪಿಪಿಎಫ್ ಬೇಡ

ಪಿಪಿಎಫ್ ಖಾತೆ ತೆರೆದರೆ 15 ವರ್ಷದವರೆಗೂ ಪಾಲಿಸಬೇಕಾಗುತ್ತದೆ. ಹೀಗಾಗಿ, ದೀರ್ಘಾವಧಿ ಹೂಡಿಕೆ ಮಾಡಬಯಸುವವರಿಗೆಂದು ಈ ಯೋಜನೆ ರೂಪಿಸಲಾಗಿದೆ. ಆದರೆ, ಕಿರು ಅವಧಿಗೆ, ಅಂದರೆ ಐದು ವರ್ಷದೊಳಗೆ ಹೂಡಿಕೆ ಮಾಡಬಯಸುವವರಿಗೆ ಪಿಪಿಎಫ್ ಅನನುಕೂಲವೆನಿಸುತ್ತದೆ. ಅವರು ಎಸ್​ಐಪಿ, ಆರ್​ಡಿ, ಎಫ್​ಡಿ ಇತ್ಯಾದಿ ಯೋಜನೆಗಳಿಗೆ ಮೊರೆಹೋಗಬಹುದು.

ಅವಧಿಗೆ ಮುನ್ನ ಪಿಪಿಎಫ್ ಖಾತೆ ಮುಚ್ಚಲು ಆಗಲ್ಲ

ನೀವು ಒಮ್ಮೆ ಪಿಪಿಎಫ್ ಖಾತೆ ತೆರೆದರೆ 15 ವರ್ಷ ಕಟ್ಟುತ್ತಾ ಹೋಗಬೇಕು. ಒಂದು ವೇಳೆ ನಿಮಗೆ ಈ ಹೂಡಿಕೆ ಬೇಡವೆಂದೋ ಅಥವಾ ತುರ್ತಾಗಿ ಹಣ ಬೇಕಾಗಿ ಬಂತೋ ಆಗ ಅವಧಿಗೆ ಮುನ್ನ ನಿಮಗೆ ಬೇಕಾದಾಗ ಹಿಂಪಡೆಯಲು ಆಗಲ್ಲ. ಐದು ವರ್ಷದ ಬಳಿಕ ಹೂಡಿಕೆ ಹಿಂಪಡೆಯಲು ಅವಕಾಶ ಇದೆಯಾದರೂ ಅದು ತಲೆನೋವು ಕೊಡುವ ಷರತ್ತುಗಳಿವೆ.

ಇದನ್ನೂ ಓದಿಸುರಕ್ಷಿತ ಹಣ ಹೂಡಿಕೆಗೆ ಸಲಹೆಗಳು: ಹೆಚ್ಚಿನ ಬಡ್ಡಿಯನ್ನು ನೀಡುವ ಸರ್ಕಾರಿ ಯೋಜನೆಗಳ ಸಂಪೂರ್ಣ ಪಟ್ಟಿ ಇಲ್ಲಿ ನೋಡಿ

ಪ್ರಾಣಾಪಾಯ ತರಬಲ್ಲ ರೋಗ ಇದ್ದರೆ; ಮಕ್ಕಳ ಉನ್ನತ ಶಿಕ್ಷಣ ವೆಚ್ಚ ಇದ್ದರೆ; ಖಾತೆದಾರರು ವಿದೇಶಕ್ಕೆ ಹೋಗುತ್ತಿದ್ದರೆ ಆಗ 5 ವರ್ಷದ ಬಳಿಕ ಪಿಪಿಎಫ್ ಖಾತೆಯನ್ನು ನಿಲ್ಲಿಸಬಹುದು. ಈ ರೀತಿ ಪೂರ್ವಾವಧಿಗೆ ಪಿಪಿಎಫ್ ಖಾತೆ ನಿಲ್ಲಿಸಿದರೆ ಶೇ. 1ರಷ್ಟು ಬಡ್ಡಿ ಮುರಿದುಕೊಳ್ಳಲಾಗುತ್ತದೆ.

ಆದರೆ, ಪಿಪಿಎಫ್​ನಲ್ಲಿ ಒಂದು ಅನುಕೂಲವೆಂದರೆ ವರ್ಷಕ್ಕೆ 1.5 ಲಕ್ಷ ರೂವರೆಗೂ ನಾವು ಠೇವಣಿ ಇಡಬಹುದು. 500 ರೂ ಕೂಡ ಇಡಬಹುದು. ಪಿಪಿಎಫ್ ಮೇಲೆ ಹೂಡಿಕೆ ಸಾಕು ಎಂದನಿಸಿದವರು ಪೂರ್ಣಾವಧಿಯವರೆಗೆ ವರ್ಷಕ್ಕೆ 500 ರೂ ಕಟ್ಟುತ್ತಾ ಅದನ್ನು ಜೀವಂತವಾಗಿಟ್ಟುಕೊಳ್ಳುವ ಅವಕಾಶವೂ ಇದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್