Inspiring: 11ನೇ ವಯಸ್ಸಿನಲ್ಲಿ ಕೇಳಿದ್ದು ಅಪ್ಪ ಕೊಡಿಸಲಿಲ್ಲ; ಹಣ ಸಂಪಾದಿಸುವ ಹುಚ್ಚು ಹಿಡಿದವ 22ನೇ ವಯಸ್ಸಿಗೆ ಕೋಟ್ಯಾಧಿಪತಿಯಾಗಿ ನಿವೃತ್ತನಾದ ಕಥೆ

Money Tips From 22 yr old Millionaire: ಬಹಳ ಚಿಕ್ಕ ವಯಸ್ಸಿನಲ್ಲೇ ಹಣ ಸಂಪಾದನೆಯ ಮಹತ್ವ ಅರಿತುಕೊಂಡ ಅಮೆರಿಕದ ಹೇಡನ್ ಬೌಲ್ಸ್ ಇದೀಗ 22 ರ ವಯಸ್ಸಿನಲ್ಲಿ ಕೋಟಿಕೋಟಿ ಹಣ ಸಂಪಾದಿಸಿ ಆರಾಮ ಜೀವನ ನಡೆಸುತ್ತಿದ್ದಾನೆ. ಈತ ಹಣ ಸಂಪಾದನೆಗೆ ಕೊಟ್ಟಿರುವ 2 ಸರಳ ಸಲಹೆಗಳು ಎಲ್ಲರ ಗಮನ ಸೆಳೆದಿವೆ.

Inspiring: 11ನೇ ವಯಸ್ಸಿನಲ್ಲಿ ಕೇಳಿದ್ದು ಅಪ್ಪ ಕೊಡಿಸಲಿಲ್ಲ; ಹಣ ಸಂಪಾದಿಸುವ ಹುಚ್ಚು ಹಿಡಿದವ 22ನೇ ವಯಸ್ಸಿಗೆ ಕೋಟ್ಯಾಧಿಪತಿಯಾಗಿ ನಿವೃತ್ತನಾದ ಕಥೆ
ಹೇಡನ್ ಬೌಲ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 11, 2023 | 1:18 PM

ಅಮೆರಿಕದ 22 ವರ್ಷದ ಹೇಡನ್ ಬೋಲ್ಸ್ (Hayden Bowles) ಜಾಗತಿಕ ವಿಡಿಯೋ ಪ್ಲಾಟ್​ಫಾರ್ಮ್​ಗಳಲ್ಲಿ ದೊಡ್ಡ ಫ್ಯಾನ್ ಬೇಸ್ ಪಡೆದುಕೊಂಡಿದ್ದಾನೆ. ಈತ ಬಹಳ ಚಿಕ್ಕ ವಯಸ್ಸಿನಲ್ಲೇ ಭರ್ಜರಿ ಹಣ ಸಂಪಾದನೆ ಮಾಡಿ ಎಲ್ಲರ ಗಮನ ಸೆಳೆದಾತ. 17ರ ವಯಸ್ಸಿನಲ್ಲಿ ಸ್ಕೂಲ್ ಡ್ರಾಪೌಟ್ ಆಗಿ ಪೂರ್ಣಪ್ರಮಾಣದಲ್ಲಿ ಹಣ ಸಂಪಾದನೆ ಹಾದಿ ತುಳಿದ ಹೇಡನ್ ಬೌಲ್ಸ್ ಈಗ ಕೋಟಿ ಕೋಟಿ ಹಣದ ಮಾಲೀಕನಾಗಿ ಪೂರ್ಣಾವಧಿ ಕೆಲವನ್ನೇ ಬಿಟ್ಟು ಬಹುತೇಕ ನಿವೃತ್ತ ಬದುಕು ದೂಡುತ್ತಿದ್ದಾನೆ. ಯಾರಿಗಾದರೂ ಇದು ಅಚ್ಚರಿ ಎನಿಸಬಹುದು. 22 ವರ್ಷಕ್ಕೆ ನಿವೃತ್ತಿಯಾಗುವ ಹುಚ್ಚು ಯಾಕೆ ಎಂದು ಕೇಳಬಹುದು. ನಿವೃತ್ತಿ ಎಂದರೆ ನಿವೃತ್ತಿಯೇ ಅಲ್ಲ, ನಮ್ಮ ನಿಮ್ಮ ಹಾಗೆ ಪೂರ್ಣಾವಧಿಯಲ್ಲಿ ಕೆಲಸ ಮಾಡುವುದಿಲ್ಲ. ಇಂತಿಷ್ಟು ಆದಾಯ ತರುವ ಮಾರ್ಗ ಸೃಷ್ಟಿಸಿಕೊಂಡು ಆರಾಮವಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದಾನೆ.

ಈ ಹುಡುಗ ಅಥವಾ ಯುವಕನ ಜೀವನಚರಿತ್ರೆ ಯಾರಿಗಾದರೂ ಬೆಳಕು ತೋರಬಹುದು. 17ರ ವಯಸ್ಸಿಗೆ ಈತ ಆನ್​ಲೈನ್ ಕೋರ್ಸ್ ನೀಡುವ ಇಕಾಮ್​ಸೀಸನ್ (EcommSeason) ಎಂಬ ಕಂಪನಿ ಸ್ಥಾಪಿಸಿದ್ದ. ಆಗಲೇ ಇದು ಭರ್ಜರಿ ಆದಾಯ ತರತೊಡಗಿತ್ತು. 18ರ ವಯಸ್ಸಿಗೆ ಈತನಿಗೆ ಲ್ಯಾಂಬೋರ್ಗಿನಿ ಕಾರು ಕೊಳ್ಳುವಷ್ಟು ಆದಾಯ ಬರತೊಡಗಿತ್ತು. 19ರ ವಯಸ್ಸಿಗೆ ಈತ ಕೋಟ್ಯಾಧಿಪತಿಯಾಗಿದ್ದ. 2022ರಲ್ಲಿ ಈತನ ಆದಾಯ 15 ಮಿಲಿಯನ್ ಡಾಲರ್​ಗೆ ಏರಿತ್ತು. ಇದರ ಜೊತೆಗೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಬಹಳಷ್ಟು ಹೂಡಿಕೆ ಮಾಡಿದ. ಈಗ ಹಣ ಸಂಪಾದನೆಯ ಕಲೆ ಹೇಡನ್ ಬೌಲ್ಸ್​ಗೆ ಕರಗತವಾಗಿ ಹೋಗಿದೆ. ಈಗ ಈತ ಟಿಕ್ ಟಾಕ್ ಮತ್ತು ಯೂಟ್ಯೂಬ್​ಗಳಲ್ಲಿ ಹಣ ಸಂಪಾದನೆ ಬಗ್ಗೆ ವಿಡಿಯೋಗಳನ್ನು ಮಾಡಿ ಬಹಳ ಮಂದಿಗೆ ಸ್ಫೂರ್ತಿ ಕೂಡ ಆಗುತ್ತಿದ್ದಾನೆ.

ಇದನ್ನೂ ಓದಿInspiring Mappillai: ಬಲೂನು ಮಾರುತ್ತಿದ್ದ ವ್ಯಕ್ತಿ ವಿಶ್ವಪ್ರಸಿದ್ಧ ಎಂಆರ್​ಎಫ್ ಒಡೆಯರಾದ ರೋಚಕ ಮತ್ತು ಹೃದಯಸ್ಪರ್ಶಿ ಕಥೆ

ಹೇಡನ್ ಬೌಲ್ಸ್ ಚಿಕ್ಕ ವಯಸ್ಸಿಗೆ ಹಣ ಸಂಪಾದನೆ ಹುಚ್ಚು ಹಿಡಿದಿದ್ದು ಹೇಗೆ?

17ರ ವಯಸ್ಸಿಗೆ ಶಾಲೆ ಬಿಟ್ಟು ಹಣ ಸಂಪಾದಿಸುವ ಹುಚ್ಚು ಹೇಡನ್ ಬೌಲ್ಸ್​ಗೆ ಬಂದಿದ್ದು ಹೇಗೆ ಎಂದನಿಸಬಹುದು. ಅದಕ್ಕೆ ಈತನ ಬಾಲ್ಯದ ಒಂದು ಘಟನೆ ಕಾರಣವಂತೆ. ಹೇಡನ್ ಬೌಲ್ಸ್ ಹೇಳುವ ಪ್ರಕಾರ ಈತ 10 ಅಥವಾ 11ನೇ ವಯಸ್ಸಿನಲ್ಲಿದ್ದಾಗ ಏನೋ ಕೊಳ್ಳಬಯಸಿದ್ದನಂತೆ. ಆದರೆ, ಹಣ ಇಲ್ಲದೇ ಅದು ಸಾಧ್ಯವಾಗಲಿಲ್ಲ. ಈತನ ಅಪ್ಪ ಮತ್ತು ಅಮ್ಮ ಕೂಡ ಅದನ್ನು ಈತನಿಗೆ ಕೊಡಿಸಲಿಲ್ಲ. ಆಗ ಈತನಿಗೆ ತಾನೇ ಖುದ್ದು ಹಣ ಗಳಿಸಬೇಕೆನ್ನುವ ಅರಿವಾಯಿತಂತೆ. ಹಾಗಂತ ಹೇಡನ್ ಬೌಲ್ಸ್ ತನ್ನ ಇನ್ಸ್​ಟಾಗ್ರಾಮ್ ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದಾನೆ.

ಇದನ್ನೂ ಓದಿBusiness Tips: ಬ್ಯುಸಿನೆಸ್ ಆರಂಭಿಸಲು ಯಾವ ವಯಸ್ಸು ಸೂಕ್ತ? ಇಂಟ್ರೆಸ್ಟಿಂಗ್ ಇದೆ ಈ ಮಾಹಿತಿ

ಕೋಟ್ಯಾಧಿಪತಿಯಾಗಲು 2 ಸಿಂಪಲ್ ಸೂತ್ರ ಕೊಟ್ಟ ಬೌಲ್ಸ್

ಹಣ ಸಂಪಾದನೆಯಲ್ಲಿ ಕೋಟ್ಯಾಧಿಪತಿಗಳು ಹೇಗೆ ಯಶಸ್ವಿಯಾಗುತ್ತಾರೆ? ಎರಡು ಅದ್ಭುತ ಓಪನ್ ಸೀಕ್ರೆಟ್​ಗಳನ್ನು ಈ ಯುವಕ ಬಿಚ್ಚಿಡುತ್ತಾನೆ. ಈ ಸೂತ್ರ ಕೇಳಿ ನಿಮಗೂ ಅಚ್ಚರಿ ಎನಿಸಬಹುದು.

ಶೇ. 20ರ ಆದಾಯದೊಳಗೆ ಬದುಕಿ: ನಿಮ್ಮ ಸಂಪಾದನೆಯ ಶೇ. 20ರಷ್ಟು ಹಣದಲ್ಲಿ ಜೀವನದ ಅಗತ್ಯತೆಗಳನ್ನು ಪೂರೈಸಿಕೊಳ್ಳುವಂತಿರಬೇಕು. ನೀವದನ್ನು ಮಾಡಲು ಸಾಧ್ಯವಾದರೆ ಬಹಳಷ್ಟು ಹಣ ಉಳಿಸಿ ಅದನ್ನು ಲಾಭದಾಯಕವಾಗಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಡನ್ ಬೌಲ್ಸ್ ಹೇಳುತ್ತಾನೆ.

ಹಣದ ಮೇಲೆಯೇ ಹೆಚ್ಚು ಗಮನ ಇರಲಿ: ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚು ಗಮನವನ್ನು ನಿಮ್ಮ ಸಂಪಾದನೆಗೆ ಕೊಡಬೇಕು. ಆಗ ಹೆಚ್ಚು ಹಣ ಮಾಡಬಹುದು, ವ್ಯವಹಾರದಲ್ಲಿ ಯಶಸ್ಸು ಕಾಣಬಹುದು ಎನ್ನುತ್ತಾನೆ ಬೌಲ್ಸ್.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್