Go First: ಬೀಸೋ ದೊಣ್ಣೆಯಿಂದ ಪಾರಾದ ಗೋ ಫಸ್ಟ್: ಮೇ 24ರಿಂದ ಮತ್ತೆ ವಿಮಾನ ಹಾರಾಟ ಸಾಧ್ಯತೆ; ಎಂಜಿನ್ ಕಂಪನಿ ಜೊತೆ ತಿಕ್ಕಾಟ ಇನ್ನೂ ಹಳೆಯದು

Bankruptcy Protection Process: ದಿವಾಳಿಯಿಂದ ಪರಿಹಾರ ಕೋರಿ ಗೋ ಫಸ್ಟ್ ಸಲ್ಲಿಸಿದ ಅರ್ಜಿಯನ್ನು ಎಲ್​ಸಿಎಲ್​ಟಿ ಸ್ವೀಕರಿಸಿದ ಬೆನ್ನಲ್ಲೇ ಇದೀಗ ಆ ಏರ್​​ಲೈನ್ಸ್ ಕಂಪನಿ ಮೇ 24ರಿಂದ ವಿಮಾನ ಹಾರಾಟ ಸೇವೆ ಪುನಾರಂಭಿಸಬಹುದು ಎಂಬ ಸುದ್ದಿ ಇದೆ. ಸದ್ಯ 20 ವಿಮಾನಗಳಿಂದ ಹಾರಾಟ ಮೊದಲುಗೊಳ್ಳುವ ಸಾಧ್ಯತೆ ಇದೆ.

Go First: ಬೀಸೋ ದೊಣ್ಣೆಯಿಂದ ಪಾರಾದ ಗೋ ಫಸ್ಟ್: ಮೇ 24ರಿಂದ ಮತ್ತೆ ವಿಮಾನ ಹಾರಾಟ ಸಾಧ್ಯತೆ; ಎಂಜಿನ್ ಕಂಪನಿ ಜೊತೆ ತಿಕ್ಕಾಟ ಇನ್ನೂ ಹಳೆಯದು
ಗೋ ಫಸ್ಟ್
Follow us
|

Updated on: May 11, 2023 | 11:07 AM

ನವದೆಹಲಿ: ದಿವಾಳಿಯಿಂದ ರಕ್ಷಿಸಬೇಕೆಂದು (Bankruptcy Protection) ಮಾಡಿದ ಮನವಿಗೆ ಎನ್​ಸಿಎಲ್​ಟಿ ಸಮ್ಮತಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗೋ ಫಸ್ಟ್ ಏರ್​ಲೈನ್ಸ್ (Go First Airlines) ಸದ್ಯ ಬೀಸೋ ದೊಣ್ಣೆಯಿಂದ ಪಾರಾಗಿದೆ. ಬಹುತೇಕ ಸಮಾಪ್ತಿಯಾಗುವಂತಿದ್ದ ಸಂಸ್ಥೆಗೆ ಮರುಜೀವ ಸಿಕ್ಕಂತಾಗಿದೆ. ಇಂಥ ದಿವಾಳಿ ಪರಿಹಾರ ವಿಚಾರದಲ್ಲಿ ನುರಿತರಾಗಿರುವ ಪರಿಣಿತರೊಬ್ಬರನ್ನು ಎನ್​ಸಿಎಲ್​ಟಿ ನೇಮಿಸಿದೆ. ಇವರು ಗೋ ಫಸ್ಟ್ ಏರ್​ಲೈನ್ಸ್ ಸಂಸ್ಥೆ ಹಾಗು ಅದರ ವಿಮಾನಗಳ ಗುತ್ತಿಗೆದಾರ ಸಂಸ್ಥೆಗಳ ಮಧ್ಯೆ ಮಾತುಕತೆ ನಡೆಸಿ ಒಂದು ಪರಿಹಾರ ಯೋಜನೆಯನ್ನು ರೂಪಿಸುವ ನಿರೀಕ್ಷೆ ಇದೆ. ಅಲ್ಲಿಯವರೆಗೂ ಗೋ ಫಸ್ಟ್ ಸಣ್ಣ ಮಟ್ಟದಲ್ಲಿ ತನ್ನ ವೈಮಾನಿಕ ಸೇವೆಯನ್ನು ಪುನಾರಂಭಿಸಲಿದೆ. ವರದಿಗಳ ಪ್ರಕಾರ ಮೇ 24ರಿಂದ ಗೋ ಫಸ್ಟ್​ನ 20 ವಿಮಾನಗಳು ಓಡಾಟ ನಡೆಸಲಿವೆಯಂತೆ.

ಆರಂಭದಲ್ಲಿ ವಿಮಾನ ಹಾರಾಟವು ವಾರಕ್ಕೆ 1,200 ಫ್ಲೈಟ್​ಗೆ ಸೀಮಿತವಾಗಿರುತ್ತದೆ. ದಿವಾಳಿ ಪರಿಹಾರ ಸಂಬಂಧ ಸಂಧಾನ ಸಕಾರಾತ್ಮಕವಾಗಿ ಸಾಗುತ್ತಿರುವ ಕುರುಹು ಸಿಕ್ಕರೆ ವಿಮಾನ ಹಾರಾಟ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಇರಾದೆಯಲ್ಲಿ ಗೋ ಫಸ್ಟ್ ಇದೆ.

ಇದನ್ನೂ ಓದಿHigh Streets: ಬೆಂಗಳೂರೇ ಬೆಸ್ಟ್..! ಭಾರತದ ಟಾಪ್-10 ಹೈ ಸ್ಟ್ರೀಟ್​ಗಳಲ್ಲಿ ಎಂಜಿ ರೋಡ್ ಸೇರಿ ಬೆಂಗಳೂರಿನ 4 ರಸ್ತೆಗಳು; ಏನಿದು ಹೈ ಸ್ಟ್ರೀಟ್ ಎಂದರೆ?

ಇನ್ಸಾಲ್ವೆನ್ಸಿ ಅರ್ಜಿ ಸಲ್ಲಿಸುವ ಮುಂಚೆಯೇ ಗೋ ಫಸ್ಟ್ ಮತ್ತು ಪಿ ಅಂಡ್ ಡಬ್ಲ್ಯೂ ನಡುವೆ ವ್ಯಾಜ್ಯ

ಗೋ ಫಸ್ಟ್ ತನಗೆ ಹಣಕಾಸು ಸಂಕಷ್ಟ ಉದ್ಭವಿಸಿದ್ದು, ಹಣ ಪಾವತಿಯ ವ್ಯವಸ್ಥೆಯನ್ನು ಸಡಿಲಗೊಳಿಸಿ ಮರುಹೊಂದಿಸಬೇಕು ಎಂದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್​ಸಿಎಲ್​ಟಿ) ಬಳಿ ಅರ್ಜಿ ಸಲ್ಲಿಸಿರುವುದಾಗಿ ಮೇ 2ರಂದು ತಿಳಿಸಿತ್ತು. ತನ್ನ ಈ ಸ್ಥಿತಿಗೆ ಪ್ರಾಟ್ ಅಂಡ್ ವಿಟ್ನಿ (ಪಿ&ಟಿ) ಕಂಪನಿಯ ಎಂಜಿನ್ ವೈಫಲ್ಯವೇ ಕಾರಣ ಎಂದು ದೂರಿತ್ತು. ಎಂಜಿನ್ ವಿಫಲಗೊಂಡು 28 ವಿಮಾನಗಳು ಮೂಲೆಯಲ್ಲಿ ನಿಂತಿವೆ. ಬದಲಿ ಎಂಜಿನ್ ಸರಬರಾಜು ಮಾಡಬೇಕೆಂದು ಕೋರಿದರೂ ಪ್ರಾಟ್ ಅಂಡ್ ವಿಟ್ನಿ ಸ್ಪಂದಿಸುತ್ತಿಲ್ಲ ಎಂದೂ ಗೋ ಫಸ್ಟ್ ಆರೋಪಿಸಿತ್ತು.

ಆದರೆ, ಇದಕ್ಕೂ ಮುನ್ನವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೋಫಸ್ಟ್ ಮತ್ತು ಪಿ ಅಂಡ್ ಟಿ ಮಧ್ಯೆ ಕಾನೂನು ಸಮರ ನಡೆದಿತ್ತು. ಏಪ್ರಿಲ್ 27ರೊಳಗೆ ಗೋ ಫಸ್ಟ್ ಸಂಸ್ಥೆಗೆ ಕನಿಷ್ಠ 10 ಎಂಜಿನ್​ಗಳನ್ನಾದರೂ ಒದಗಿಸುವಂತೆ ಸಿಂಗಾಪುರ್ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್ (ಸಿಐಎಸಿ) ಮಾರ್ಚ್ 30ರಂದೇ ಪಿ ಅಂಡ್ ಡಬ್ಲ್ಯುಗೆ ಆದೇಶ ಮಾಡಿತ್ತು. ಅದಕ್ಕೆ ಪಿ ಅಂಡ್ ಡಬ್ಲ್ಯೂ ಕಡೆಯಿಂದ ಏನೂ ಸ್ಪಂದನೆ ಬರಲಿಲ್ಲ. ಏಪ್ರಿಲ್ 15ರಂದು ಕೋರ್ಟ್ ಮತ್ತೊಮ್ಮೆ ಆದೇಶ ಹೊರಡಿಸಿತು. ಸಿಂಗಾಪುರ್ ಕೋರ್ಟ್ ಕೊಟ್ಟ ಏಪ್ರಿಲ್ 27ರ ಗಡುವು ಮುಗಿದ ಬಳಿಕ ಗೋ ಫಸ್ಟ್ ಸಂಸ್ಥೆ ಏಪ್ರಿಲ್ 28ರಂದು ಅಮೆರಿಕದ ಡೆಲಾವೇರ್ ಫೆಡರಲ್ ಕೋರ್ಟ್ ಮುಂದೆ ತುರ್ತು ಅರ್ಜಿ ದಾಖಲಿಸಿ, ಸಿಂಗಾಪುರ್ ಕೋರ್ಟ್​ನ ಆದೇಶವನ್ನು ಪಾಲಿಸುವಂತೆ ಪಿ ಅಂಡ್ ಡಬ್ಲ್ಯೂಗೆ ನಿರ್ದೇಶನ ನೀಡಬೇಕೆಂದು ಕೋರಿತು. ಅದಾದ ಬಳಿಕ ಭಾರತದ ಕಂಪನಿ ಕಾನೂನು ನ್ಯಾಯಮಂಡಳಿ ಬಳಿ ಇನ್ಸಾಲ್ವೆನ್ಸಿ ರೆಸಲ್ಯೂಷನ್​ಗೆ ಅರ್ಜಿ ಸಲ್ಲಿಸಿತು.

ಇದನ್ನೂ ಓದಿಭಾರತದಲ್ಲಿ 1 ಶತಕೋಟಿ ಡಾಲರ್ ಹೂಡಿಕೆ ಘೋಷಿಸಿದ ಸಿಸ್ಕೋ; ಪ್ರಧಾನಿ ಮೋದಿ ಬಗ್ಗೆ ಚಕ್ ರಾಬಿನ್ಸ್ ಮೆಚ್ಚುಗೆ

ಪಿ ಅಂಡ್ ಡಬ್ಲೂಯಿಂದ 9,000 ಕೋಟಿ ರೂ ಪರಿಹಾರಕ್ಕೆ ಗೋ ಫಸ್ಟ್ ಪ್ರಯತ್ನ

ಪಿ ಅಂಡ್ ಡಬ್ಲ್ಯೂನ ಎಂಜಿನ್ ವೈಫಲ್ಯದಿಂದಾಗಿ ಗೋ ಫಸ್ಟ್​ನ ಅರ್ಧದಷ್ಟು ವಿಮಾನಗಳು ನಿಂತಿವೆ. ಇದರಿಂದ ಏರ್​ಲೈನ್ಸ್ ಸಂಸ್ಥೆ ಪ್ರತೀ ತಿಂಗಳು 200 ಕೋಟಿ ರೂ ನಷ್ಟ ಕಾಣುತ್ತಿತ್ತೆನ್ನಲಾಗಿದೆ. ತನ್ನನ್ನು ಇನ್ನಿಲ್ಲದಂತೆ ಕುಗ್ಗುವಂತೆ ಮಾಡಿರುವ ಪಿ ಅಂಡ್ ಡಬ್ಲ್ಯೂ ಸಂಸ್ಥೆಯಿಂದ 1.1 ಬಿಲಿಯನ್ ಡಾಲರ್ (ಸುಮಾರು 9,000 ಕೋಟಿ ರೂ) ಪರಿಹಾರ ಕೊಡಿಸಬೇಕೆಂದು ಗೋ ಫಸ್ಟ್ ಕೋರಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್