AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ 1 ಶತಕೋಟಿ ಡಾಲರ್ ಹೂಡಿಕೆ ಘೋಷಿಸಿದ ಸಿಸ್ಕೋ; ಪ್ರಧಾನಿ ಮೋದಿ ಬಗ್ಗೆ ಚಕ್ ರಾಬಿನ್ಸ್ ಮೆಚ್ಚುಗೆ

ಡಿಜಿಟಲ್ ಮೂಲಸೌಕರ್ಯದಲ್ಲಿ ಭಾರತ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಮುಂದಿನ ದಶಕದಲ್ಲಿ ಭಾರತ ವೇಗದ ಬೆಳವಣಿಗೆ ಹೊಂದು ಅವಕಾಶ ಹೊಂದಿದೆ ಎಂದು ಅಮೆರಿಕ ಮೂಲದ ಸಿಸ್ಕೋ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಕ್ ರಾಬಿನ್ಸ್ ಹೇಳಿದರು.

ಭಾರತದಲ್ಲಿ 1 ಶತಕೋಟಿ ಡಾಲರ್ ಹೂಡಿಕೆ ಘೋಷಿಸಿದ ಸಿಸ್ಕೋ; ಪ್ರಧಾನಿ ಮೋದಿ ಬಗ್ಗೆ ಚಕ್ ರಾಬಿನ್ಸ್ ಮೆಚ್ಚುಗೆ
ಪ್ರಧಾನಿ ಮೋದಿ ಜತೆ ಚಕ್ ರಾಬಿನ್ಸ್ (ಕೃಪೆ; ಚಕ್ ರಾಬಿನ್ಸ್ ಟ್ವೀಟ್)Image Credit source: Twitter
Ganapathi Sharma
|

Updated on: May 10, 2023 | 10:24 PM

Share

ನವದೆಹಲಿ: ಡಿಜಿಟಲ್ ಮೂಲಸೌಕರ್ಯದಲ್ಲಿ ಭಾರತ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಮುಂದಿನ ದಶಕದಲ್ಲಿ ಭಾರತ ವೇಗದ ಬೆಳವಣಿಗೆ ಹೊಂದು ಅವಕಾಶ ಹೊಂದಿದೆ ಎಂದು ಅಮೆರಿಕ ಮೂಲದ ಸಿಸ್ಕೋ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (Cisco CEO) ಚಕ್ ರಾಬಿನ್ಸ್ (Chuck Robbins) ಹೇಳಿದರು. ಭಾರತದಲ್ಲಿ ರೂಟರ್‌ಗಳು ಮತ್ತು ಸ್ವಿಚ್‌ಗಳಂತಹ ಪರಿಕರಗಳ ಉತ್ಪಾದನಾ ಯೋಜನೆಯನ್ನು ಘೋಷಿಸಿದ ನಂತರ ಮಾತನಾಡಿದ ಅವರು, ಭಾರತದಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ 1 ಶತಕೋಟಿ ಡಾಲರ್ ಹೂಡಿಕೆ ಮಾಡುವ ಘೋಷಣೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದ ಬಳಿಕ ಚಕ್ ರಾಬಿನ್ಸ್ ನಿರ್ಧಾರ ಪ್ರಕಟಿಸಿದರು.

ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವಕ್ಕಾಗಿ ಧನ್ಯವಾದಗಳು. ಭಾರತದಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಬಗ್ಗೆ ಘೋಷಣೆ ಮಾಡಲು ಉತ್ಸುಕನಾಗಿದ್ದೇನೆ. ದೇಶೀಯ ಉತ್ಪಾದನೆ ಮತ್ತು ರಫ್ತು ಕ್ಷೇತ್ರಗಳಲ್ಲಿ 1 ಶತಕೋಟಿ ಡಾಲರ್ ಹೂಡಿಕೆ ಮಾಡಲು ಉತ್ಸುಕರಾಗಿದ್ದೇವೆ ಎಂದು ಚಕ್ ರಾಬಿನ್ಸ್ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಟ್ವೀಟ್ ಮೂಲಕವೇ ಪ್ರತಿಕ್ರಿಯಿಸಿರುವ ಅಶ್ವಿನಿ ವೈಷ್ಣವ್, ಸ್ವಾಗತ ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಗೂಗಲ್ ಸಿಇಒ ಸುಂದರ್ ಪಿಚೈ ಭೇಟಿಯಾದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಜಾಗತಿಕ ಸ್ಥೂಲ ಆರ್ಥಿಕ ಅನಿಶ್ಚಿತತೆಗಳು, ಅಮೆರಿಕದ ಬ್ಯಾಂಕಿಂಗ್ ಬಿಕ್ಕಟ್ಟು ಮತ್ತು ಪ್ರಾದೇಶಿಕ ರಾಜಕೀಯ ಅನಿಶ್ಚಿತತೆಗಳ ನಡುವೆಯೂ ತಂತ್ರಜ್ಞಾನ ಮತ್ತು ಡಿಜಿಟಲೀಕರಣ ಕಾರ್ಯತಂತ್ರದ ಮೌಲ್ಯವು ಕುಂಠಿತವಾಗುವುದಿಲ್ಲ. ಬದಲಿಗೆ ಮುಂದುವರಿಯಲಿದೆ. ಯಾಕೆಂದರೆ ಪ್ರತಿಯೊಂದು ದೇಶದ ಯಶಸ್ಸಿಗೆ ಇವುಗಳು ಅನಿವಾರ್ಯ ಎಂದು ಅವರು ಪ್ರತಿಪಾದಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ