Business Tips: ಬ್ಯುಸಿನೆಸ್ ಆರಂಭಿಸಲು ಯಾವ ವಯಸ್ಸು ಸೂಕ್ತ? ಇಂಟ್ರೆಸ್ಟಿಂಗ್ ಇದೆ ಈ ಮಾಹಿತಿ

Best Age To Start Business: ಯಾರಾದರೂ ಹೊಸ ವ್ಯವಹಾರ ಆರಂಭಿಸಬೇಕಾದರೆ 40 ವರ್ಷದ ಪ್ರಾಯ ದಾಟಿದ್ದರೆ ಅನುಕೂಲ ಎಂದು ತಿಳಿಮಾತು ಹೇಳುವುದನ್ನು ಕೇಳಿರಬಹುದು. ಹೊಸ ಸಾಹಸಕ್ಕಿಳಿಯಲು ಯುವ ಹುಮ್ಮಸ್ಸು ಮುಖ್ಯವಾದರೂ ಮಧ್ಯಪ್ರಾಯದಲ್ಲಿ ವ್ಯವಹಾರ ನಡೆಸುವುದು ಹೆಚ್ಚು ಸೂಕ್ತ ಎನ್ನುವುದೇಕೆ? ಪ್ರಬಲ ಕಾರಣಗಳೇನು?

Business Tips: ಬ್ಯುಸಿನೆಸ್ ಆರಂಭಿಸಲು ಯಾವ ವಯಸ್ಸು ಸೂಕ್ತ? ಇಂಟ್ರೆಸ್ಟಿಂಗ್ ಇದೆ ಈ ಮಾಹಿತಿ
ಬ್ಯುಸಿನೆಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 10, 2023 | 3:53 PM

ಒಂದು ಬ್ಯುಸಿನೆಸ್ ಶುರು ಮಾಡಲು ಇಂಥದ್ದೇ ನಿಯಮ ಎಂಬುದಿಲ್ಲ. ಯಾರು ಬೇಕಾದರೂ ಯಾವಾಗ ಬೇಕಾದರೂ ವ್ಯವಹಾರಕ್ಕಿಳಿಯಬಹುದು. ಇವತ್ತಿನ ಯುಗದಲ್ಲಿ ಯಾವ ವಯಸ್ಸಿನವರೂ ಬ್ಯುಸಿನೆಸ್ ಮಾಡುವಂತಹ ವಾತಾವರಣ, ಅವಕಾಶಗಳಿವೆ. ಯಾರ ತಲೆಗೆ ಹೊಸ ಐಡಿಯಾ (Business Idea) ಹೊಳೆಯುತ್ತೋ ಅವನೇ ಭವಿಷ್ಯದ ಉದ್ಯಮಿ. ಮಾರ್ಕ್ ಜುಕರ್ಬರ್ಗ್ ಕೇವಲ 19ರ ವಯಸ್ಸಿನಲ್ಲಿ ಫೇಸ್​ಬುಕ್ ಆರಂಭಿಸಿದರು. ಇವತ್ತು ಅದು ಲಕ್ಷಲಕ್ಷ ಕೋಟಿ ಮೌಲ್ಯದ ಕಂಪನಿಯಾಗಿ ಬೆಳೆದಿದೆ. 25 ವರ್ಷದ ಅಸುಪಾಸಿನಲ್ಲಿ ಯಶಸ್ವಿ ಉದ್ಯಮಿಗಳಾದವರು ಹಲವರು ಉಂಟು. ಆದರೆ, ಯಾರಾದರೂ ಹೊಸ ವ್ಯವಹಾರ ಆರಂಭಿಸಬೇಕಾದರೆ 40 ವರ್ಷದ ಪ್ರಾಯ ದಾಟಿದ್ದರೆ ಅನುಕೂಲ ಎಂದು ತಿಳಿಮಾತು ಹೇಳುವುದನ್ನು ಕೇಳಿರಬಹುದು. ಹೊಸ ಸಾಹಸಕ್ಕಿಳಿಯಲು ಯುವ ಹುಮ್ಮಸ್ಸು ಮುಖ್ಯವಾದರೂ ಮಧ್ಯಪ್ರಾಯದಲ್ಲಿ ವ್ಯವಹಾರ ನಡೆಸುವುದು ಹೆಚ್ಚು ಸೂಕ್ತ ಎನ್ನುವುದೇಕೆ? ಪ್ರಬಲ ಕಾರಣಗಳೇನು?

ಉದ್ದಿಮೆ ಆರಂಭಿಸಲು ಬೇಕಾದ ಅನುಭವ 40ರ ವಯಸ್ಸಿನಲ್ಲಿ ಇರುತ್ತದೆ

ನೀವು ಯೌವ್ವನ ದಾಟಿ ಮಧ್ಯಪ್ರಾಯಕ್ಕೆ ಬರುವಷ್ಟರಲ್ಲಿ ಕೈಲಾದಷ್ಟು ಲೋಕಜ್ಞಾನ ಸಂಪಾದಿಸಬಹುದು. ನಿಮಗೆ ಯಾವ ಕ್ಷೇತ್ರದಲ್ಲಿ ಬ್ಯುಸಿನೆಸ್ ಮಾಡಬಹುದು ಎಂಬ ತಿಳಿವಳಿಕೆ ಬಂದಿರುತ್ತದೆ. 20ಕ್ಕೂ ಹೆಚ್ಚು ವರ್ಷಗಳ ಅನುಭವದಲ್ಲಿ ಹಲವು ಯಶಸ್ಸು, ವೈಫಲ್ಯಗಳನ್ನು ಕಂಡಿರುತ್ತೇವೆ. ಉದ್ದಿಮೆಯಾಗಿ ಏನು ಮಾಡಬೇಕು, ಏನು ಮಾಡಬಾರದು ಎಂದು ನಿರ್ಧಾರ ತೆಗೆದುಕೊಳ್ಳಲು ಈ ಅನುಭವಗಳೇ ನಮಗೆ ಸಹಾಯಕ್ಕೆ ಬರುತ್ತವೆ.

ಮಧ್ಯಪ್ರಾಯದಲ್ಲಿ ಜನಸಂಪರ್ಕ ಮತ್ತು ಜನಜಾಲ ಬಹಳ ಹೆಚ್ಚು

ಯಾವುದೇ ಕೆಲಸದಲ್ಲಿ ಯಶಸ್ವಿಯಾಗಲು ಸಾಂಘಿಕ ಅಂಶಗಳು ಬಹಳ ಮುಖ್ಯ. ಜನಸಂಪರ್ಕ ಹೆಚ್ಚು ಇದ್ದರೆ ಹೊಸ ವ್ಯವಹಾರ ಆರಂಭಿಸುವುದು ಮತ್ತು ವ್ಯವಹಾರ ವೃದ್ಧಿಸುವುದು ಸುಲಭ. ಮಧ್ಯವಯಸ್ಸಿಗೆ ಬರುವಷ್ಟರಲ್ಲಿ ನಿಮ್ಮ ಪರಿಚಿತರ ವಲಯ ಅಗಾಧವಾಗಿ ಬೆಳೆದಿರುತ್ತದೆ. ಯಾವ ಸಂಪರ್ಕ ಯಾವ ಕೆಲಸಕ್ಕೆ ಲಾಭ ತರುತ್ತೆ ಎಂದು ಕಲ್ಪಿಸಿಕೊಳ್ಳಲು ಆಗೊಲ್ಲ. ನೀವು ಇನ್ನೂ ಯುವಕರಾಗಿದ್ದರೆ ಸಾಧ್ಯವಾದಷ್ಟೂ ಜನಸಂಪರ್ಕ ಬೆಳೆಸಿಕೊಳ್ಳಿ. ಇದರಿಂದ ಹೊಸ ಬ್ಯುಸಿನೆಸ್ ಆರಂಭಿಸಲು ಸಹಾಯಕವಾಗಬಹುದು.

ಇದನ್ನೂ ಓದಿExpensive: ಚುನಾವಣಾ ಖರ್ಚಿನಲ್ಲಿ ಕರ್ನಾಟಕವೇ ನಂ.1; ರಾಜ್ಯದಲ್ಲಿ ಆಗುವ ಎಲೆಕ್ಷನ್ ವೆಚ್ಚ ಎಷ್ಟು? ಚುನಾವಣಾ ಆಯೋಗಕ್ಕೆ ಆಗುವ ಖರ್ಚೆಷ್ಟು? ಇಲ್ಲಿದೆ ಡೀಟೇಲ್ಸ್

ಮಧ್ಯವಯಸ್ಸಿನಲ್ಲಿ ಹಣಕಾಸು ಸ್ಥಿತಿಯಲ್ಲಿ ಸ್ವಾವಲಂಬನೆ

ಚಿಕ್ಕ ವಯಸ್ಸಿನಲ್ಲಿ ಉದ್ದಿಮೆ ಆರಂಭಿಸಬೇಕಾದರೆ ಹಣಕಾಸು ಹೊಂದಿಸುವುದು ಬಹಳ ಕಷ್ಟ. ಸಣ್ಣ ವಯಸ್ಸಿನವರಿಗೆ ಬ್ಯಾಂಕುಗಳು ಅಷ್ಟು ಸುಲಭಕ್ಕೆ ಸಾಲ ಕೊಡುವುದಿಲ್ಲ. ಅದೇ ಮಧ್ಯಪ್ರಾಯಕ್ಕೆ ಬರುವಷ್ಟರಲ್ಲಿ ತಕ್ಕಮಟ್ಟಿಗೆ ಹಣ ಸಂಪಾದನೆ ಮಾಡಿರುವ ಸಾಧ್ಯತೆ ಹೆಚ್ಚು. ಬ್ಯಾಂಕುಗಳಿಂದ ಸಾಲ ಸಿಗುವುದೂ ಕೂಡ ಸುಲಭ ಇರುತ್ತದೆ. ಇದರಿಂದ ಹೆಚ್ಚು ಚಿಂತೆ ಪಡದೆ ಹೊಸ ಉದ್ದಿಮೆ ಆರಂಭಿಸಬಹುದು.

ಯಾವ ವಯಸ್ಸೇ ಆಗಲಿ ಹೊಸ ಬ್ಯುಸಿನೆಸ್ ಆರಂಭಿಸುವ ಮುನ್ನ ಈ ಅಂಶಗಳು ಗಮನದಲ್ಲಿರಲಿ

  • ನೀವು ಯಾವುದೇ ಬ್ಯುಸಿನೆಸ್ ಆರಂಭಿಸುವ ಮೊದಲು ಮಾರ್ಕೆಟ್ ರಿಸರ್ಚ್ ಮಾಡುವುದು ಅತ್ಯಗತ್ಯ. ಆ ಕ್ಷೇತ್ರದಲ್ಲಿರುವ ಬೇರೆ ಬೇರೆ ಸಂಸ್ಥೆಗಳು ಅಥವಾ ವ್ಯಕ್ತಿಗಳು ಯಾವ ರೀತಿ ನಿರ್ವಹಿಸುತ್ತಿದ್ದಾರೆ, ಏನು ತಂತ್ರ ಉಪಯೋಗಿಸುತ್ತಾರೆ, ಎಷ್ಟು ಆದಾಯ ಮಾಡುತ್ತಿದ್ದಾರೆ, ಎಷ್ಟು ಗ್ರಾಹಕರು ಇದ್ದಾರೆ ಎಂಬುದನ್ನೆಲ್ಲಾ ಅವಲೋಕಿಸಬೇಕು. ಈ ಉದ್ಯಮದಲ್ಲಿ ಯಾವ ರೀತಿಯ ಅಪಾಯಕಾರಿ ಅಂಶಗಳಿವೆ, ಅದನ್ನು ಎದುರಿಸಲು ಯಾವ ತಂತ್ರ ಅಳವಡಿಸಿಕೊಳ್ಳಬೇಕು ಎಂಬುದನ್ನೆಲ್ಲಾ ಅಧ್ಯಯನ ಮಾಡುವುದು ಒಳ್ಳೆಯದು.
  • ಮಾರುಕಟ್ಟೆ ಸಮೀಕ್ಷೆ ಬಳಿಕ ಮುಖ್ಯ ಅಂಶವೆಂದರೆ ನಿಮ್ಮ ಬ್ಯುಸಿನೆಸ್​ಗೆ ಹಣಕಾಸು ವ್ಯವಸ್ಥೆ ಹೇಗೆ ಮಾಡುತ್ತೀರಿ ಎಂಬುದು. ನಿಮ್ಮಲ್ಲಿರುವ ಹಣ ಹಾಗೂ ಬ್ಯಾಂಕ್​ನಿಂದ ಸಿಗಬಹುದಾದ ಹಣ ಇವೆಲ್ಲವೂ ಹೊಸ ಬ್ಯುಸಿನೆಸ್ ಸ್ಥಾಪನೆಗೆ ಸಾಕಾಗುತ್ತಾ ಎಂಬುದನ್ನು ಗಮನಿಸಬೇಕು.

ಇದನ್ನೂ ಓದಿPod Taxi: ಭಾರತದ ಮೊದಲ ಚಾಲಕರಹಿತ ಪೋಡ್ ಟ್ಯಾಕ್ಸಿ; ಏನಿದರ ವಿಶೇಷತೆ, ಬೆಂಗಳೂರಿಗೆ ಯಾಕೆ ಬರಲಿಲ್ಲ ಈ ಪ್ರಾಜೆಕ್ಟ್?

  • ನಿಮಗೆ ಬ್ಯುಸಿನೆಸ್ ಐಡಿಯಾ ಚೆನ್ನಾಗಿಯೇ ಇದೆ. ಆದರೆ, ಅದನ್ನು ಕಾರ್ಯಗತಗೊಳಿಸಲು ಬೇಕಾದ ತಂತ್ರಜ್ಞಾನದ ಕೊರತೆ ಕಾಡುತ್ತಿರಬಹುದು. ಹೀಗಾದಲ್ಲಿ ತಂತ್ರಜ್ಞಾನ ಕ್ಷೇತ್ರದ ಪರಿಣಿತರನ್ನು ಪಾರ್ಟ್ನರ್ ಆಗಿ ಮಾಡಿಕೊಳ್ಳುವುದು ಸೂಕ್ತ. ಉದಾಹರಣೆಗೆ, ನೀವು ಹೋಟೆಲ್ ಉದ್ದಿಮೆ ಆರಂಭಿಸುತ್ತೀರಿ, ಆದರೆ, ಅಡುಗೆ ಮನೆ ಜ್ಞಾನ ಇಲ್ಲವೇ ಇಲ್ಲ ಎಂದಾದರೆ ಬಾಣಸಿಗರನ್ನು ದೀರ್ಘಕಾಲ ಉಳಿಸಿಕೊಳ್ಳಲು ಕಷ್ಟವಾಗಬಹುದು. ಅದೇ ಒಳ್ಳೆಯ ಚೆಫ್ ಅನ್ನೇ ನೀವು ಪಾರ್ಟ್ನರ್ ಆಗಿ ಮಾಡಿಕೊಂಡರೆ ಆತ ಹೋಟೆಲ್​ನ ಪ್ರಮುಖ ಭಾಗವಾದ ಅಡುಗೆ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಬಲ್ಲುರು.

ಇವಲ್ಲದೇ ಒಳ್ಳೆಯ ಬ್ಯುಸಿನೆಸ್​ಮ್ಯಾನ್​ನ ಗುಣಲಕ್ಷಣ ಎಂದರೆ ವೈಫಲ್ಯಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದು. ಈ ಮನೋಭಾವ ಅಷ್ಟು ಸುಲಭಕ್ಕೆ ಬರುವುದಿಲ್ಲ. ಒಂದು ವೈಫಲ್ಯದಿಂದ ಒಬ್ಬ ವ್ಯಕ್ತಿ ಮನಸು ಮಾಡಿದರೆ ಬಹಳಷ್ಟು ಪಾಠ ಕಲಿಯಬಹುದು. ಹೀಗಾಗಿ, ಸೋಲನ್ನು ಗೆಲುವಿನ ಮೆಟ್ಟಿಲಾಗಿ ಮಾಡಿಕೊಂಡು ಮೇಲೇರಿದವರ ನಿದರ್ಶನ ಹಲವುಂಟು.

ವಯಸ್ಸಿನ ಚಿಂತೆ ಬಿಡಿ

ಕೆಲವೊಮ್ಮೆ ಯಾರಿಗಾದರೂ ಕೂಡ ಯಾರೂ ಪ್ರಯೋಗಿಸದಂತಹ ವಿನೂತನ ಬ್ಯುಸಿನೆಸ್ ಐಡಿಯಾ ಬರಬಹುದು. ಮಾರ್ಕ್ ಜುಕರ್ಬರ್ಗ್ ಅವರಿಗೆ 19ನೇ ವಯಸ್ಸಿನಲ್ಲಿ ಸೋಷಿಯಲ್ ಮೀಡಿಯಾದ ಐಡಿಯಾ ಹೊಳೆದಿತ್ತು. ತಮ್ಮ ವಯಸ್ಸು ಚಿಕ್ಕದಾಯಿತು, 10 ವರ್ಷ ಬಿಟ್ಟು ಶುರು ಮಾಡೋಣ ಎಂದು ಅವರು ಸುಮ್ಮನಾಗಿದ್ದರೆ ಬೇರೆ ಯಾರಾದರ ತಲೆಗೆ ಆ ಐಡಿಯಾ ಬಂದು ಕಾರ್ಯಗತವಾಗಿರುತ್ತಿತ್ತು. ಫೇಸ್​ಬುಕ್ ಇಷ್ಟು ಅಗಾಧವಾಗಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲವೇನೋಹೀಗಾಗಿ, ಬ್ಯುಸಿನೆಸ್ ಮಾಡುವ ಇಚ್ಛೆ ಇರುವವರು ಕಣ್ಣು, ಕಿವಿ, ಬುದ್ಧಿ ಎಲ್ಲವನ್ನೂ ಜಾಗೃತವಾಗಿಟ್ಟುಕೊಂಡಿರಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ