Pod Taxi: ಭಾರತದ ಮೊದಲ ಚಾಲಕರಹಿತ ಪೋಡ್ ಟ್ಯಾಕ್ಸಿ; ಏನಿದರ ವಿಶೇಷತೆ, ಬೆಂಗಳೂರಿಗೆ ಯಾಕೆ ಬರಲಿಲ್ಲ ಈ ಪ್ರಾಜೆಕ್ಟ್?

India's First Pod Taxi In Uttar Pradesh: ಉತ್ತರಪ್ರದೇಶದ ನೋಯ್ಡಾದಲ್ಲಿ ಭಾರತದ ಮೊದಲ ಪೋಡ್ ಟ್ಯಾಕ್ಸಿ ಯೋಜನೆ ಬರಲಿದೆ. 2025ರಿಂದ ಇಲ್ಲಿ ಪೋಡ್ ಕಾರ್​ಗಳ ಸಂಚಾರ ನಡೆಯಲಿದೆ. ವಿದ್ಯುತ್​ಚಾಲಿತವಾದ ಮತ್ತು ಚಾಲಕರಹಿತವಾದ ಈ ಪೋಡ್ ಕಾರುಗಳ ವಿಶೇಷತೆಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ....

Pod Taxi: ಭಾರತದ ಮೊದಲ ಚಾಲಕರಹಿತ ಪೋಡ್ ಟ್ಯಾಕ್ಸಿ; ಏನಿದರ ವಿಶೇಷತೆ, ಬೆಂಗಳೂರಿಗೆ ಯಾಕೆ ಬರಲಿಲ್ಲ ಈ ಪ್ರಾಜೆಕ್ಟ್?
ಪೋಡ್ ಕಾರು
Follow us
|

Updated on: May 09, 2023 | 4:46 PM

ನವದೆಹಲಿ: ಭಾರತದ ಮೊತ್ತಮೊದಲ ಪೋಡ್ ಕಾರು ಅಥವಾ ಪೋಡ್ ಟ್ಯಾಕ್ಸಿ (Pod Taxi) ಉತ್ತರಪ್ರದೇಶದ ನೋಯ್ಡಾಗೆ ಬರಲಿದೆ. ನೋಯ್ಡಾ ಇಂಟರ್ನ್ಯಾಷನಲ್ ಏರ್​ಪೋರ್ಟ್ ಮತ್ತು ಫಿಲಂ ಸಿಟಿ ಮಧ್ಯೆ ಪೋಡ್ ಟ್ಯಾಕ್ಸಿ ಸಂಚರಿಸಲಿದೆ. ಈ ಯೋಜನೆಯ ಪರಿಷ್ಕೃತ ಬಿಡ್​ಗೆ ಅನುಮೋದನೆ ಸಿಕ್ಕಿದೆ. ಉತ್ತರಪ್ರದೇಶ ಸರ್ಕಾರದಿಂದ ಅಂತಿಮ ಮುದ್ರೆ ಸಿಕ್ಕ ಕೂಡಲೇ ಯೋಜನೆ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಈ ಯೋಜನೆ ಕಾರ್ಯಗತವಾದರೆ ಭಾರತದ ನೆಲದಲ್ಲಿ ಮೊದಲ ಬಾರಿಗೆ ಪೋಡ್ ಟ್ಯಾಕ್ಸಿ ಸಂಚಾರ ನಡೆಸಿದಂತಾಗುತ್ತದೆ. ಸದ್ಯ ಇದು ದುಬೈ, ಸಿಂಗಾಪುರ್, ಲಂಡನ್, ಸೋಲ್ (ಸೌತ್ ಕೊರಿಯಾದ ರಾಜಧಾನಿ) ಮೊದಲಾದ ಕೆಲವೆ ನಗರಗಳಲ್ಲಿ ಅಸ್ತಿತ್ವದಲ್ಲಿದೆ. ಆದರೆ, ನೋಯ್ಡಾದಲ್ಲಿರುವ ಪ್ರಸ್ತಾವಿತ ಮಾರ್ಗವು 12-14ಕಿಮೀ ಉದ್ದದ್ದಾಗಿದೆ. ವಿಶ್ವದಲ್ಲಿ ಬೇರೆಲ್ಲೂ ಇಷ್ಟು ಉದ್ದದ ಮಾರ್ಗ ಪೋಡ್ ಕಾರುಗಳಿಗೆ ಇಲ್ಲ. ಹೀಗಾಗಿ, ನೋಯ್ಡಾದ ಪೋಡ್ ಕಾರ್ ಯೋಜನೆ ಎಲ್ಲರ ಗಮನ ಸೆಳೆಯುತ್ತಿದೆ.

ಸೋಲಾರ್ ಪವರ್, ಡ್ರೈವರ್​ಲೆಸ್ ಕಾರು

ಪೋಡ್ ಟ್ಯಾಕ್ಸಿ ಸಂಚರಿಸಲು ಯಾವುದೇ ರಸ್ತೆಯಲ್ಲಿ ಪ್ರತ್ಯೇಕ ಟ್ರ್ಯಾಕ್ ನಿರ್ಮಿಸಬೇಕು. ಇವು ರಸ್ತೆಯಿಂದ ತುಸು ಉಬ್ಬಿದ ಟ್ರ್ಯಾಕ್​ನಲ್ಲಿ ಸಂಚರಿಸುತ್ತವೆ. ಇದಕ್ಕೆ ಪೆಟ್ರೋಲ್, ಡೀಸೆಲ್ ಬೇಕಿಲ್ಲ. ವಿದ್ಯುತ್ ಚಾಲಿತ ಕಾರ್ ಇದಾಗಿದೆ. ಸೌರಶಕ್ತಿಯಿಂದ ಇದು ಓಡುತ್ತದೆ. ಈ ಕಾರ್​ನಲ್ಲಿ ಚಾಲಕರಿರುವುದಿಲ್ಲ. 6 ಮಂದಿ ಕುಳಿತುಕೊಳ್ಳಲು ಆಸನಗಳಿರುತ್ತವೆ. ಕೆಲವರು ನಿಂತುಕೊಳ್ಳುವಷ್ಟೂ ಸ್ಥಳಾವಕಾಶ ಇದೆ. ಇವು ಗಂಟೆಗೆ ಸಾಮಾನ್ಯವಾಗಿ 40 ಕಿಮೀ ವೇಗದಲ್ಲಿ ಓಡುತ್ತವೆ. ಸೌತ್ ಕೊರಿಯಾದಲ್ಲಿರುವ ಪೋಡ್​ಗಳು ಗಂಟೆಗೆ 70 ಕಿಮೀಯಷ್ಟು ವೇಗದಲ್ಲಿ ಓಡಬಲ್ಲುವು.

ಇದನ್ನೂ ಓದಿPakistan: ಇತಿಹಾಸದಲ್ಲೇ ಮೊದಲ ಬಾರಿಗೆ ಹಜ್ ಕೋಟಾ ಬಿಟ್ಟ ಪಾಕಿಸ್ತಾನ; ಏನು ಕಾರಣ? ಇದರಿಂದ ಉಳಿಯುವ ಹಣ ಎಷ್ಟು?

ನೋಯ್ಡಾದಲ್ಲಿ ನಿರ್ಮಿಸಲಾಗುತ್ತಿರುವ ಪೋಡ್ ಟ್ಯಾಕ್ಸಿ ಯೋಜನೆಗೆ ಅಂದಾಜು 810 ಕೋಟಿ ರೂ ಆಗುವ ಸಾಧ್ಯತೆ ಇದೆ. ವರದಿಗಳ ಪ್ರಕಾರ 2024ರ ಅಂತ್ಯದ ವೇಳೆಗೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ 690 ಪೋಡ್ ಕಾರ್​ಗಳು ಟ್ರ್ಯಾಕ್​ಗೆ ಇಳಿಯುವ ಸಾಧ್ಯತೆ ಇದೆ. ಟ್ರಾಫಿಕ್ ಜಾಮ್ ಹೆಚ್ಚಿರುವ ಮಾರ್ಗಗಳಲ್ಲಿ ಈ ಪೋಡ್ ಕಾರ್​ಗಳು ಅತ್ಯುಪಯುಕ್ತ ಎನಿಸುತ್ತವೆ.

ಬೆಂಗಳೂರಿಗೆ ಬರಬೇಕಿದ್ದ ಪೋಡ್ ಟ್ಯಾಕ್ಸಿಗೆ ಯಾಕೆ ಗುಡ್​ಬೈ ಹೇಳಲಾಯ್ತು?

ಐದಾರು ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ಪೋಡ್ ಟ್ಯಾಕ್ಸಿ ವ್ಯವಸ್ಥೆ ತರಲು ಬಿಬಿಎಂಪಿ ಯೋಜಿಸಿತ್ತು. ಯೋಜನಾ ವರದಿ ಎಲ್ಲವೂ ಆಗಿತ್ತು. ಪ್ರಪಂಚದಲ್ಲಿ ಯಾವುದೇ ನಗರಗಳಲ್ಲಿ ಇಲ್ಲದಂತಹ ವಿಸ್ತೃತವಾದ ಪೋಡ್ ಟ್ರ್ಯಾಕ್​ಗಳನ್ನು ಬೆಂಗಳೂರಿನಲ್ಲಿ ನಿರ್ಮಿಸುವ ಉದ್ದೇಶವಿತ್ತು. ಮೆಟ್ರೋ ನಿಲ್ದಾಣದಿಂದ ಸುತ್ತಮುತ್ತಲ ಪ್ರದೇಶಗಳಿಗೆ ಫೀಡರ್ ಮಾದರಿಯಲ್ಲಿ ಈ ಕಾರುಗಳನ್ನು ಓಡಿಸುವ ಮಹತ್ವಾಕಾಂಕ್ಷಿ ಯೋಜನೆ ಅದು. 2017ರಲ್ಲಿ ಟೆಂಡರ್ ಕೂಡ ಕರೆಯಲಾಗಿತ್ತು. ಒಂದು ಸಂಸ್ಥೆಯಿಂದ ಮಾತ್ರ ಬಿಡ್ ಬಂದಿತ್ತು.

ಇದನ್ನೂ ಓದಿInspiring Mappillai: ಬಲೂನು ಮಾರುತ್ತಿದ್ದ ವ್ಯಕ್ತಿ ವಿಶ್ವಪ್ರಸಿದ್ಧ ಎಂಆರ್​ಎಫ್ ಒಡೆಯರಾದ ರೋಚಕ ಮತ್ತು ಹೃದಯಸ್ಪರ್ಶಿ ಕಥೆ

ಆದರೆ, 2018-19ರಲ್ಲಿ ಈ ಯೋಜನೆಯನ್ನು ಬಿಬಿಎಂಪಿ ಕೈಬಿಟ್ಟಿತು. ಪೋಡ್ ಟ್ಯಾಕ್ಸಿಗಿಂತ ಎಲಿವೇಟೆಡ್ ಕಾರಿಡಾರ್ ಉತ್ತಮ ಎಂಬುದು ಬಿಬಿಎಂಪಿ ನೀಡಿದ ಕಾರಣ. ಒಂದು ವೇಳೆ ಉತ್ತರಪ್ರದೇಶದಲ್ಲಿ ಪೋಡ್ ಟ್ಯಾಕ್ಸಿ ಯೋಜನೆ ಜಾರಿಗೆ ಬಂದು ಯಶಸ್ವಿಯಾದರೆ ಬೇರೆ ನಗರಗಳೂ ಇದನ್ನು ಬರಮಾಡಿಕೊಳ್ಳಬಹುದು. ಬೆಂಗಳೂರಿನಲ್ಲೂ ಮತ್ತೊಮ್ಮೆ ಈ ಯೋಜನೆಯನ್ನು ಪರಿಶೀಲಿಸಿನೋಡುವ ಸಾಧ್ಯತೆ ಇಲ್ಲದಿಲ್ಲ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ