Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಮೊದಲ ಓವರ್​ನಲ್ಲೇ ರೋಹಿತ್ ವಿರುದ್ಧ ಸೇಡು ತೀರಿಸಿಕೊಂಡ ಸಿರಾಜ್; ವಿಡಿಯೋ

IPL 2025: ಮೊದಲ ಓವರ್​ನಲ್ಲೇ ರೋಹಿತ್ ವಿರುದ್ಧ ಸೇಡು ತೀರಿಸಿಕೊಂಡ ಸಿರಾಜ್; ವಿಡಿಯೋ

ಪೃಥ್ವಿಶಂಕರ
|

Updated on: Mar 29, 2025 | 10:15 PM

Mohammed Siraj Bowls Out Rohit Sharma: ಗುಜರಾತ್ ನೀಡಿದ 197 ರನ್​ಗಳ ಗುರಿ ಬೆನ್ನಟ್ಟಲು ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಸಿರಾಜ್ ತಕ್ಕ ತಿರುಗೇಟು ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಿಂದ ತಮ್ಮನ್ನು ಕೈಬಿಟ್ಟಿದ್ದ ರೋಹಿತ್ ಅವರ ವಿರುದ್ಧ ಸಿರಾಜ್ ಸೇಡು ತೀರಿಸಿಕೊಂಡರು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡುವ ವೇಳೆ ವೇಗಿ ಮೊಹಮ್ಮದ್ ಸಿರಾಜ್​ರನ್ನು ತಂಡದಿಂದ ಕೈಬಿಡಲಾಗಿತ್ತು. ಇದಕ್ಕೆ ಕಾರಣ ನೀಡಿದ್ದ ನಾಯಕ ರೋಹಿತ್ ಶರ್ಮಾ, ಸಿರಾಜ್ ಚೆಂಡು ಹಳೆಯದಾಗುತ್ತಿದ್ದಂತೆ ಪರಿಣಾಮಕಾರಿಯಾಗಲ್ಲ. ಹೀಗಾಗಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ ಎಂದಿದ್ದರು. ಇದಕ್ಕೆ ಐಪಿಎಲ್ ಆರಂಭಕ್ಕೂ ಮುನ್ನ ಉತ್ತರಿಸಿದ್ದ ಸಿರಾಜ್ ‘ಕಳೆದ ವರ್ಷ, ಹಳೆಯ ಚೆಂಡಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಹತ್ತು ವೇಗದ ಬೌಲರ್‌ಗಳಲ್ಲಿ ನನ್ನ ಹೆಸರು ಸೇರಿತ್ತು. ಎಕಾನಮಿ ರೇಟ್​ ಕೂಡ ಕಡಿಮೆ ಇದೆ. ಅಂಕಿಅಂಶಗಳೇ ಎಲ್ಲವನ್ನೂ ಹೇಳುತ್ತವೆ. ನಾನು ಹೊಸ ಮತ್ತು ಹಳೆಯ ಚೆಂಡುಗಳೆರಡರಲ್ಲೂ ಉತ್ತಮ ಪ್ರದರ್ಶನ ನೀಡಿದ್ದೇನೆ ಎಂದಿದ್ದರು.

ಸಿರಾಜ್ ಅವರ ಈ ಹೇಳಿಕೆಯ ನಂತರ ಮುಂಬೈ ಹಾಗೂ ಗುಜರಾತ್ ನಡುವಿನ ಕಾಳಗಕ್ಕೆ ಎಲ್ಲರು ಕಾತುರದಿಂದ ಕಾಯುತ್ತಿದ್ದರು. ಏಕೆಂದರೆ ಸಿರಾಜ್ ಹಾಗೂ ರೋಹಿತ್ ಅವರ ಮುಖಾಮುಖಿ ಹೇಗಿರಲಿದೆ ಎಂಬುದು ಎಲ್ಲರಲ್ಲೂ ಕುತೂಹಲ ಕೆರಳಿಸಿತ್ತು. ಅದರಂತೆ ಗುಜರಾತ್ ನೀಡಿದ 197 ರನ್​ಗಳ ಗುರಿ ಬೆನ್ನಟ್ಟಲು ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ ವಿರುದ್ಧ ಮೊದಲ ಓವರ್ ಎಸೆಯುವ ಜವಬ್ದಾರಿಯನ್ನು ಸಿರಾಜ್ ತೆಗೆದುಕೊಂಡಿದ್ದರು. ಅದರಂತೆ ಈ ಓವರ್​ನ 2ನೇ ಮತ್ತು 3ನೇ ಎಸೆತವನ್ನು ಬೌಂಡರಿಗಟ್ಟಿದ ರೋಹಿತ್, ನಂತರದ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಈ ಮೂಲಕ ಸಿರಾಜ್, ಚಾಂಪಿಯನ್ಸ್ ಟ್ರೋಫಿಯನ್ನು ತನ್ನನ್ನು ತಂಡದಿಂದ ಕೈಬಿಟ್ಟಿದ ನಾಯಕ ರೋಹಿತ್​ ಶರ್ಮಾರನ್ನು ಮೊದಲ ಓವರ್​ನಲ್ಲೇ ಪೆವಿಲಿಯನ್​ಗಟ್ಟುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ