Sign In

By signing in or creating an account, you agree with Associated Broadcasting Company's Terms & Conditions and Privacy Policy.

RD Rates: ಆರ್​ಡಿಗೆ ಅತಿಹೆಚ್ಚು ಬಡ್ಡಿ ನೀಡುವ ಬ್ಯಾಂಕುಗಳಿವು; ಅತ್ಯಂತ ಸುಲಭ ಹೂಡಿಕೆ ಆಯ್ಕೆ ಇದು

Know How Good Bank RD's Are: ಆರ್​ಡಿ ಒಂದು ರೀತಿಯಲ್ಲಿ ಎಸ್​ಐಪಿ ಯೋಜನೆಯಾಗಿದೆ. ಎಫ್​ಡಿಗಿಂತಲೂ ಸರಳವಾಗಿ ನಿರ್ವಹಿಸಬಹುದು. ಹಲವು ಉಳಿತಾಯ ಯೋಜನೆಗಳಷ್ಟೇ ಬಡ್ಡಿ ಆರ್​ಡಿಯಿಂದಲೂ ಸಿಗುತ್ತದೆ. ಬಡ್ಡಿ ದರದಲ್ಲಿ ಎಫ್​ಡಿ ದರಕ್ಕೆ ಪೈಪೋಟಿ ನೀಡಬಲ್ಲುದು.

RD Rates: ಆರ್​ಡಿಗೆ ಅತಿಹೆಚ್ಚು ಬಡ್ಡಿ ನೀಡುವ ಬ್ಯಾಂಕುಗಳಿವು; ಅತ್ಯಂತ ಸುಲಭ ಹೂಡಿಕೆ ಆಯ್ಕೆ ಇದು
ಬಡ್ಡಿ ದರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 10, 2023 | 5:38 PM

ಜನಸಾಮಾನ್ಯರು ಹೆಚ್ಚು ಇಷ್ಟಪಡುವ ಹೂಡಿಕೆಗಳು ಯಾವುದು ಎಂದರೆ ಚಿಟ್ ಫಂಡ್ ಅಥವಾ ಚೀಟಿ ಮತ್ತು ರಿಕರಿಂಗ್ ಡೆಪಾಸಿಟ್ (RD- Recurring Deposit) ಅಥವಾ ಆರ್​ಡಿ ಎನ್ನಲಡ್ಡಿ ಇಲ್ಲ. ಆರ್​ಡಿ ಒಂದು ರೀತಿಯಲ್ಲಿ ಎಸ್​ಐಪಿ ಯೋಜನೆಯಾಗಿದೆ. ಎಫ್​ಡಿಗಿಂತಲೂ ಸರಳವಾಗಿ ನಿರ್ವಹಿಸಬಹುದು. ಹಲವು ಉಳಿತಾಯ ಯೋಜನೆಗಳಷ್ಟೇ ಬಡ್ಡಿ ಆರ್​ಡಿಯಿಂದಲೂ ಸಿಗುತ್ತದೆ. ಬಡ್ಡಿ ದರದಲ್ಲಿ ಎಫ್​ಡಿ ದರಕ್ಕೆ ಪೈಪೋಟಿ ನೀಡಬಲ್ಲುದು. ಕೆಲ ಬ್ಯಾಂಕುಗಳಲ್ಲಿ ಆರ್​ಡಿಗೆ ಶೇ. 7.6ರವರೆಗೂ ಬಡ್ಡಿ ಸಿಗುತ್ತದೆ. ಆರ್​ಡಿ ಪರಿಣಾಮಕಾರಿ ಎನಿಸುವುದು ಅದರ ನಿರ್ವಹಣೆಯಲ್ಲಿ. ನೀವು ಬ್ಯಾಂಕಿನಲ್ಲಿ ಆರ್​ಡಿ ತೆರೆದರೆ ಪ್ರತೀ ತಿಂಗಳು ನಿರ್ದಿಷ್ಟ ಮೊತ್ತವನ್ನು ಖಾತೆಯಿಂದಲೇ ನೇರವಾಗಿ ಮತ್ತು ಸ್ವಯಂಚಾಲಿತವಾಗಿ ರವಾನೆಯಾಗುವಂತೆ ಮಾಡಬಹುದು. ನೀವೇ ಖುದ್ದಾಗಿ ಆರ್​​ಡಿಗೆ ಹಣ ಟ್ರಾನ್ಸ್​ಫರ್ ಮಾಡುವ ಅವಶ್ಯಕತೆ ಇರುವುದಿಲ್ಲ. ಹೀಗಾಗಿ, ಆರ್​ಡಿ ಒಂದು ಸಮರ್ಪಕ ಹೂಡಿಕೆ ಯೋಜನೆಯೂ ಹೌದು. 6 ತಿಂಗಳಿಂದ ಹಿಡಿದು 10 ವರ್ಷದವರೆಗೂ ಠೇವಣಿಗಳಿಗೆ ಅವಕಾಶ ಇದೆ.

ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಆರ್​ಡಿಗೆ ಬಡ್ಡಿ ದರ ಎಷ್ಟು?

ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಆರ್​ಡಿಗೆ ಶೇ. 7ರಷ್ಟು ವಾರ್ಷಿಕ ಬಡ್ಡಿ ಕೊಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.5 ಬಡ್ಡಿ ಸಿಗುತ್ತದೆ.

ಇದನ್ನೂ ಓದಿBusiness Tips: ಬ್ಯುಸಿನೆಸ್ ಆರಂಭಿಸಲು ಯಾವ ವಯಸ್ಸು ಸೂಕ್ತ? ಇಂಟ್ರೆಸ್ಟಿಂಗ್ ಇದೆ ಈ ಮಾಹಿತಿ

ಆ್ಯಕ್ಸಿಸ್ ಬ್ಯಾಂಕ್​ನಲ್ಲಿ ಆರ್​ಡಿಗೆ ಬಡ್ಡಿ ದರ ಶೇ. 7.5

ಆ್ಯಕ್ಸಿಸ್ ಬ್ಯಾಂಕ್​ನಲ್ಲಿ 5 ವರ್ಷ ಅವಧಿಯ ಆರ್​ಡಿಗೆ ವಾರ್ಷಿಕವಾಗಿ ಶೇ. 7ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಅರ್ಧಪ್ರತಿಶತದಷ್ಟು ಹೆಚ್ಚು ಬಡ್ಡಿ ಬರುತ್ತದೆ.

ಎಸ್​ಬಿಐನಲ್ಲಿ ಆರ್​ಡಿಗೆ ಎಷ್ಟಿದೆ ಬಡ್ಡಿ ದರ?

ಭಾರತದ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ರಿಕರಿಂಗ್ ಡೆಪಾಸಿಟ್​ಗೆ ಶೇ. 6.8ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಸಿಗುವ ಬಡ್ಡಿ ಶೇ. 7.30 ಇದೆ.

ಕರ್ನಾಟಕ ಬ್ಯಾಂಕ್​ನಲ್ಲಿ ಆರ್​ಡಿಗೆ ಬಡ್ಡಿ ದರ ಹೆಚ್ಚು

ಕರ್ಣಾಟಕ ಬ್ಯಾಂಕ್​ನಲ್ಲಿ ಆರ್​ಡಿ ಠೇವಣಿಗಳಿಗೆ ವಾರ್ಷಿಕ ಶೇ 7.20 ದರದಲ್ಲಿ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.6ರವರೆಗೂ ಬಡ್ಡಿ ಆಫರ್ ಮಾಡಲಾಗಿದೆ.

ಡಿಸಿಬಿ ಬ್ಯಾಂಕ್​ನಲ್ಲಿ ಆರ್​ಡಿಗೆ ಶೇ. 7.6 ಬಡ್ಡಿ

ಡೆವಲಪ್ಮೆಂಟ್ ಕ್ರೆಡಿಟ್ ಬ್ಯಾಂಕ್ ಅಥವಾ ಡಿಸಿಬಿ ಬ್ಯಾಂಕ್​ನಲ್ಲಿ ಶೇ. 7.6ರವರೆಗಿನ ದರದಲ್ಲಿ ಆರ್​ಡಿಗೆ ಬಡ್ಡಿ ಸಿಗುತ್ತದೆ. ಇದು ಸದ್ಯ ಅತ್ಯುತ್ತಮ ಬಡ್ಡಿ ದರ ಕೊಡುವ ಬ್ಯಾಂಕುಗಳ ಸಾಲಿಗೆ ಸೇರುತ್ತದೆ.

ಇದನ್ನೂ ಓದಿMutual Funds: ಮ್ಯೂಚುವಲ್ ಫಂಡ್​ಗೆ ಹಣ ಹಾಕಿ ಆತಂಕಗೊಂಡಿದ್ದೀರಾ? ಹೂಡಿಕೆ ಯಾವಾಗ ನಿಲ್ಲಿಸಬೇಕು? ಇಲ್ಲಿದೆ ಟಿಪ್ಸ್

ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೊದಲಾದ ಹಲವು ಬ್ಯಾಂಕುಗಳು ಆರ್​ಡಿಗೆ ಶೇ. 7ಕ್ಕಿಂತಲೂ ಹೆಚ್ಚು ಬಡ್ಡಿ ಆಫ್ ಮಾಡುತ್ತವೆ.

ಸಾಮಾನ್ಯವಾಗಿ ಗರಿಷ್ಠ ಬಡ್ಡಿ ದರ ಎಲ್ಲಾ ಮೊತ್ತದ ಠೇವಣಿಗಳಿಗೂ ಸಿಗುವುದಿಲ್ಲ. ಕೆಲ ಬ್ಯಾಂಕುಗಳಲ್ಲಿ 2ರಿಂದ 5 ವರ್ಷ ಅವಧಿಯ ಆರ್​ಡಿಗಳಿಗೆ ಅತ್ಯಧಿಕ ಬಡ್ಡಿ ಆಫರ್ ಮಾಡಲಾಗುತ್ತದೆ. ಕೆಲ ಬ್ಯಾಂಕುಗಳು ಆರ್​ಡಿಗೆ ಕನಿಷ್ಠ ಮಾಸಿಕ ಹೂಡಿಕೆ 500 ರೂ ಪಡೆದರೆ, ಇನ್ನೂ ಹಲವು ಬ್ಯಾಂಕುಗಳಲ್ಲಿ ಕನಿಷ್ಠ ಮೊತ್ತ 1,000 ರೂ ಇರುತ್ತದೆ. ನಿರ್ದಿಷ್ಟ ಸಂಖ್ಯೆಯ ತಿಂಗಳು ಆರ್​ಡಿ ಕಟ್ಟದೇ ಹೋದರೆ ಈ ಯೋಜನೆ ಸ್ವಯಂಚಾಲಿತವಾಗಿ ನಿಂತುಹೋಗುತ್ತದೆ. ಆವರೆಗೂ ಕಟ್ಟಲಾದ ಅಷ್ಟೂ ಹಣವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಯಾವ ದಂಡವನ್ನು ವಿಧಿಸಲಾಗುವುದಿಲ್ಲ. ಹೀಗಾಗಿ, ರಿಕರಿಂಗ್ ಡೆಪಾಸಿಟ್ ಎಂಬುದು ಜನರಿಗೆ ಬಹಳ ಸುರಕ್ಷಿತವಾದ ಮತ್ತು ಸರಳವಾದ ಹೂಡಿಕೆ ಯೋಜನೆ ಎನಿಸಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು