AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Insurance Policy Premium: ವಿಮಾ ಪಾಲಿಸಿ ಪ್ರೀಮಿಯಂ ಸಹ ಹೆಚ್ಚಳವಾಗಲಿದೆ, ಕಾರಣ ಇಲ್ಲಿದೆ

personal finance: ಇತ್ತೀಚಿನ ದಿನಗಳಲ್ಲಿ ಜೀವ ಭದ್ರತೆ ಬಯಸಿ ಎಲ್ಲರೂ ವಿಮೆ ತೆಗೆದುಕೊಳ್ಳುತ್ತಿದ್ದಾರೆ. ಜೀವಕ್ಕೆ ಬೆದರಿಕೆ ಹೆಚ್ಚುತ್ತಿರುವುದೂ ಇದಕ್ಕೆ ಕಾರಣವಾಗಿದೆ. ಅದರಲ್ಲೂ ಕೊರೋನಾ ನಂತರ ವಿಮೆ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ!

Insurance Policy Premium: ವಿಮಾ ಪಾಲಿಸಿ ಪ್ರೀಮಿಯಂ ಸಹ ಹೆಚ್ಚಳವಾಗಲಿದೆ, ಕಾರಣ ಇಲ್ಲಿದೆ
ಹೆಚ್ಚಳವಾಗಲಿದೆ ವಿಮಾ ಪಾಲಿಸಿ ಪ್ರೀಮಿಯಂ
ಸಾಧು ಶ್ರೀನಾಥ್​
|

Updated on: May 10, 2023 | 12:40 PM

Share

ಇತ್ತೀಚಿನ ದಿನಗಳಲ್ಲಿ ಜೀವ ಭದ್ರತೆ ಬಯಸಿ ಎಲ್ಲರೂ ವಿಮೆ ತೆಗೆದುಕೊಳ್ಳುತ್ತಿದ್ದಾರೆ (personal finance). ಜೀವಕ್ಕೆ ಬೆದರಿಕೆ ಹೆಚ್ಚುತ್ತಿರುವುದೂ ಇದಕ್ಕೆ ಕಾರಣವಾಗಿದೆ. ಅದರಲ್ಲೂ ಕೊರೋನಾ ನಂತರ ವಿಮಾ ಪಾಲಿಸಿಗಳನ್ನು (Insurance policy) ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ! ಆರೋಗ್ಯ ವಿಮೆಯ ಜೊತೆಗೆ ವಿವಿಧ ರೀತಿಯ ವಿಮಾ ಪಾಲಿಸಿಗಳೂ ಲಭ್ಯವಿವೆ. ಆದರೆ ಮುಂಬರುವ ದಿನಗಳಲ್ಲಿ ಪ್ರೀಮಿಯಂ ಹಣ (premium) ಈಗಿನದ್ದಕ್ಕಿಂತ ಹೆಚ್ಚಾಗುವ ಸಾಧ್ಯತೆಗಳಿವೆ.

ವಿಮಾ ಪಾಲಿಸಿ ಪ್ರೀಮಿಯಂಗಳು 10 % ವರೆಗೆ ಹೆಚ್ಚಾಗುವ ಆತಂಕವಿದೆ. ಆರೋಗ್ಯ, ಮೋಟಾರು, ಆಸ್ತಿ ಮತ್ತು ಇತರ ವಿಧದ ವಿಮಾ ಪಾಲಿಸಿಗಳ ಪ್ರೀಮಿಯಂಗಳು ಸಹ ಹೆಚ್ಚಾಗಬಹುದು. ಮುಂದಿನ ಅವಧಿಯಲ್ಲಿ ಶ್ರೀಸಾಮಾನ್ಯನ ಮೇಲೆ ಹಣದುಬ್ಬರದ ಹೊರೆ ಪರಿಣಾಮ ಮತ್ತಷ್ಟು ಹೆಚ್ಚಾಗಬಹುದು ಎನ್ನುತ್ತಾರೆ ತಜ್ಞರು. ಅಂತಹ ಪಾಲಿಸಿಗಳಿಗೆ ವಿಮಾ ಕಂತುಗಳು 10 % ವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಜಾಗತಿಕ ಮರುವಿಮೆ ಕಂಪನಿಗಳು ಗಮನಾರ್ಹ ನಷ್ಟವನ್ನು ಅನುಭವಿಸಿವೆ. ಇದರೊಂದಿಗೆ, ಈ ಕಂಪನಿಗಳು ಅದಾಗಲೇ ತಮ್ಮ ದರವನ್ನು 40 ರಿಂದ 60% ಹೆಚ್ಚಿಸಿವೆ.

Also Read: LIC Premium Income: ಪ್ರೀಮಿಯಮ್​ಗಳಿಂದ ಎಲ್​ಐಸಿ ಈ ವರ್ಷ ಗಳಿಸಿದ ಆದಾಯ ಎಷ್ಟು? ಖಾಸಗಿ ವಿಮಾ ಕಂಪನಿಗಳದ್ದೆಷ್ಟು?

ಮರುವಿಮೆ ದರಗಳ ಹೆಚ್ಚಳದಿಂದಾಗಿ, ಭಾರತದಲ್ಲಿ ಆರೋಗ್ಯ, ಆಟೋ ಮತ್ತು ಆಸ್ತಿ ಪಾಲಿಸಿಗಳ ಪ್ರೀಮಿಯಂಗಳು 10 % ರಷ್ಟು ಹೆಚ್ಚಾಗುವ ಆತಂಕಗಳಿವೆ. ಇದರರ್ಥ ನೀವು ಮೊದಲು ರೂ 10,000 ಪ್ರೀಮಿಯಂ ಪಾವತಿಸಿದ್ದರೆ, ನಂತರ ನೀವು ರೂ 11,000 ಪಾವತಿಸಬೇಕಾಗಬಹುದು. ವಿಮಾ ಕಂಪನಿಗಳು ಮರು-ವಿಮಾ ಕಂಪನಿಗಳೊಂದಿಗೆ ವಿಮೆಯನ್ನು ಖರೀದಿಸುವ ಮೂಲಕ ತಮ್ಮ ನಷ್ಟವನ್ನು ಭರಿಸುತ್ತವೆ.

ಮರು-ವಿಮಾ ಕಂಪನಿಗಳು ಪ್ರೀಮಿಯಂಗಳನ್ನು ಹೆಚ್ಚಿಸಿದಂತೆ, ಸಾಮಾನ್ಯ ವಿಮಾ ಕಂಪನಿಗಳು ಸಾರ್ವಜನಿಕರಿಗೆ ನೀಡುವ ಪಾಲಿಸಿಗಳಿಗೆ ಪ್ರೀಮಿಯಂಗಳನ್ನು ಹೆಚ್ಚಿಸಬಹುದು. ಇದರೊಂದಿಗೆ, ವಿಮಾ ಕಂಪನಿಗಳು ಪ್ರೀಮಿಯಂಗಳನ್ನು ಶೇಕಡಾ 10 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಈ ಕಾರಣದಿಂದಾಗಿ, ಸಾಮಾನ್ಯ ವಿಮಾ ಪಾಲಿಸಿಗಳು ಹೆಚ್ಚು ದುಬಾರಿಯಾಗುತ್ತವೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ