Sign In

By signing in or creating an account, you agree with Associated Broadcasting Company's Terms & Conditions and Privacy Policy.

Warren Buffett: ಹಣ ಬೇಕು ಎಂದಾಗ ಏನು ಮಾಡಬೇಕು? ಶ್ರೀಮಂತ ವಾರನ್ ಬಫೆಟ್ ಅಷ್ಟ ಸೂತ್ರಗಳಿವು…

Guide To Become Rich and Humane: ಹಣದ ವಿಚಾರದಲ್ಲಿ ಯಾವ ರೀತಿ ವರ್ತಿಸಬೇಕು, ಹಣ ಎಷ್ಟು ಮುಖ್ಯ, ಹಣದ ಉಳಿತಾಯ ಎಷ್ಟು ಮುಖ್ಯ, ಹಣದ ಸಂಪಾದನೆಗೆ ಏನು ಮಾಡಬೇಕು ಎಂಬಿತ್ಯಾದಿ ಸಂಗತಿ ಬಗ್ಗೆ ವಾರನ್ ಬಫೆಟ್ ಆಗಾಗ್ಗೆ ಸಲಹೆಗಳನ್ನು ನಿಡುತ್ತಿರುತ್ತಾರೆ. ಅಂಥ ಅನೇಕ ನುಡಿಮುತ್ತುಗಳಲ್ಲಿ ಕೆಲವು ಇಲ್ಲಿವೆ...

Warren Buffett: ಹಣ ಬೇಕು ಎಂದಾಗ ಏನು ಮಾಡಬೇಕು? ಶ್ರೀಮಂತ ವಾರನ್ ಬಫೆಟ್ ಅಷ್ಟ ಸೂತ್ರಗಳಿವು...
ವಾರನ್ ಬಫೆಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 15, 2023 | 5:16 PM

ವಾರನ್ ಬಫೆಟ್ (Warren Buffett) ವಿಶ್ವ ಕಂಡ ಶ್ರೇಷ್ಠ ಹೂಡಿಕೆದಾರರಲ್ಲಿ ಒಬ್ಬರು. 8.5 ಲಕ್ಷ ಕೋಟಿ ರೂ ಸಂಪತ್ತಿನ ಒಡೆಯರು. ಅವರ ಅನೇಕ ಹೂಡಿಕೆಗಳು ಬಹಳ ಯಶಸ್ಸು ಕಂಡಿವೆ. ಇದರ ಜೊತೆಗೆ ಮಾನವೀಯ ಕಾರ್ಯಗಳನ್ನು ಸಾಕಷ್ಟು ಕೈಗೊಂಡಿದ್ದಾರೆ. ಯುವ ಸಮುದಾಯಕ್ಕೆ ಆಗಾಗ್ಗೆ ಮಾರ್ಗದರ್ಶನ ನೀಡುತ್ತಿರುತ್ತಾರೆ. ಅದರಲ್ಲೂ ಹಣದ ವಿಚಾರದಲ್ಲಿ ಯಾವ ರೀತಿ ವರ್ತಿಸಬೇಕು, ಹಣ ಎಷ್ಟು ಮುಖ್ಯ, ಹಣದ ಉಳಿತಾಯ ಎಷ್ಟು ಮುಖ್ಯ, ಹಣದ ಸಂಪಾದನೆಗೆ ಏನು ಮಾಡಬೇಕು ಎಂಬಿತ್ಯಾದಿ ಸಂಗತಿ ಬಗ್ಗೆ ಸಲಹೆಗಳನ್ನು ನಿಡುತ್ತಿರುತ್ತಾರೆ. ಅಂಥ ಅನೇಕ ನುಡಿಮುತ್ತುಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ಕೊಡಲಾಗಿದೆ. ಇದು ಕೆಲವರಿಗಾದರೂ ಉಪಯೋಗಕ್ಕೆ ಬರಬಹುದು, ಗಮನಿಸಿ ಓದಿ

ವಾರನ್ ಬಫೆಟ್ ಸಲಹೆ 1: ಯಾವತ್ತೂ ಹಣ ಕಳೆದುಕೊಳ್ಳದಿರಿ

ಈ ಎರಡು ರೂಲ್ ತಿಳಿದಿರಿ. ನಂಬರ್ ಒಂದು, ಯಾವತ್ತೂ ಹಣ ಕಳೆದುಕೊಳ್ಳದಿರಿ. ನಂಬರ್ ಎರಡು, ಯಾವತ್ತೂ ಮೊದಲ ರೂಲ್ ಮರೆಯದಿರಿ. ಇದು ವಾರನ್ ಬಫೆಟ್ ತಮ್ಮದೇ ಶೈಲಿಯಲ್ಲಿ ಕೊಡುವ ಪ್ರಮುಖ ಸಲಹೆ. ಎಷ್ಟು ಸರಳ ಅಲ್ಲವಾ? ನಮಗೆ ಬರುವ ದುಡ್ಡನ್ನು ಕೈಬಿಟ್ಟರೆ ಆ ಲಕ್ಷ್ಮೀ ನಮ್ಮಿಂದ ದೂರವಾಗುತ್ತಾಳೆ ಅಂತ ದೊಡ್ಡವರು ಹೇಳೋದು ಇದೇ ಸತ್ಯ ಅಲ್ಲವಾ?

ವಾರನ್ ಬಫೆಟ್ ಸಲಹೆ 2: ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಸೂತ್ರ

ವಾರನ್ ಬಫೆಟ್ ಷೇರುಪೇಟೆ ಹೂಡಿಕೆಗಳಿಂದ ವಿಶ್ವಖ್ಯಾತರಾಗಿದ್ದಾರೆ. ಇವರ ಪ್ರಕಾರ ಸರಿಯಾದ ಹೂಡಿಕೆ ವಿಧಾನ ಎಂದರೆ ಬಹಳ ಕಡಿಮೆ ಬೆಲೆ ಇಂಡೆಕ್ಸ್ ಫಂಡ್​ಗಳಲ್ಲಿ ಹೆಚ್ಚು ಹೂಡಿಕೆ ಮಾಡಬೇಕೆನ್ನುವುದು. ‘ಕಿರು ಅವಧಿಯ ಸರ್ಕಾರಿ ಬಾಂಡ್​ಗಳಲ್ಲಿ ಶೇ. 10, ಕಡಿಮೆ ಬೆಲೆಯ ಎಸ್ ಅಂಡ್ ಪಿ 500 ಇಂಡೆಕ್ಸ್ ಫಂಡ್​ನಲ್ಲಿ ಶೇ. 90ರಷ್ಟು ಹಣವನ್ನು ಹಾಕಿರಿ’ ಎಂದು 2013ರಲ್ಲಿ ವಾರನ್ ಬಫೆಟ್ ಹೇಳಿದ್ದರು.

ಇದನ್ನೂ ಓದಿInfosys: ಇನ್ಫೋಸಿಸ್ ಉದ್ಯೋಗಿಗಳಿಗೆ ಷೇರುಭಾಗ್ಯ; ಬೋನಸ್ ಜೊತೆಗೆ ಸಿಕ್ಕಿದೆ ಕಂಪನಿ ಷೇರು

ವಾರನ್ ಬಫೆಟ್ ಸಲಹೆ 3: ಸಾಲದ ಸುಳಿಗೆ ಸಿಲುಕದಿರಿ

ನಮ್ಮ ಹಿರಿಯರು ಸಾಲವನ್ನು ಶೂಲಕ್ಕೆ ಹೋಲಿಸುತ್ತಾರೆ. ವಾರನ್ ಬಫೆಟ್ ಕೂಡ ಇದನ್ನೇ ಹೇಳುತ್ತಾರೆ. ನೀವು ಈ ಪ್ರಪಂಚದಲ್ಲಿ ಸಾಲ ಮಾಡುವಂಥದ್ದೇನೂ ಇರುವುದಿಲ್ಲ. ನೀವು ಜಾಣರಾಗಿದ್ದರೆ ಸಾಲ ಮಾಡುವುದಿಲ್ಲ, ಸಾಕಷ್ಟು ಹಣವನ್ನೂ ಸಂಪಾದಿಸುತ್ತೀರಿ ಎಂಬುದು ಅವರ ಅನಿಸಿಕೆ. ವಾರನ್ ಬಫೆಟ್ ಅವರು ಕ್ರೆಡಿಟ್ ಕಾರ್ಡ್ ವಿಚಾರದಲ್ಲಂತೂ ಯುವಕರಿಗೆ ಬಹಳ ಎಚ್ಚರದಿಂದ ಇರುವಂತೆ ಸಲಹೆ ನೀಡುತ್ತಾರೆ.

ವಾರನ್ ಬಫೆಟ್ ಸಲಹೆ 4: ಕೈಯಲ್ಲಿ ನಗದು ಹಣ ಇರಲಿ

ಯಾರೇ ಆಗಲೀ ಯಾವ ಕಾಲಕ್ಕೂ ಇಂತಿಷ್ಟು ಎಂದು ಹಣ ಸಿದ್ಧವಾಗಿಟ್ಟುಕೊಳ್ಳಬೇಕು. ಕ್ಯಾಷ್ ಹಣ ಸದಾ ಜೇಬಲ್ಲಿರಬೇಕು. ಯಾವಾಗ ಯಾವ ಬಿಲ್ ಕಟ್ಟಬೇಕಾಗಿ ಬರುತ್ತದೋ ಗೊತ್ತಿಲ್ಲ ಎಂಬುದು ವಾರನ್ ಬಫೆಟ್ ಸಲಹೆ. ಆದರೆ, ಹಣವನ್ನು ಜೇಬಲ್ಲಿ ಇಟ್ಟುಕೊಳ್ಳಬೇಕೆಂದಿಲ್ಲ. ಈಗ ಸ್ಮಾರ್ಟ್​ಫೋನ್, ಯುಪಿಐ ಕಾಲವಾದ್ದರಿಂದ ಖಾತೆಯಲ್ಲಿ ಹಣ ಇದ್ದರಾಯ್ತು.

ವಾರನ್ ಬಫೆಟ್ ಸಲಹೆ 5: ಕಡಿಮೆ ಬೆಲೆಗೆ ಅಧಿಕ ಮೌಲ್ಯ ಪಡೆಯಿರಿ

‘ನೀವು ಕೊಡುವುದು ಹಣ, ನಿಮಗೆ ಸಿಗುವುದು ಮೌಲ್ಯ’ಇದು 2008ರಲ್ಲಿ ವಾರನ್ ಬಫೆಟ್ ಹೇಳಿದ ಇನ್ನೊಂದು ಜಾಣನುಡಿ. ಅಂದರೆ, ಒಂದು ವಸ್ತುವಿನ ಮೌಲ್ಯಕ್ಕಿಂತ ಹೆಚ್ಚು ಬೆಲೆ ಕೊಟ್ಟು ಖರೀದಿಸಬಾರದು. ವಾರನ್ ಬಫೆಟ್ ಹೇಳುವುದೇನೆಂದರೆ ಅವರು ಸಾಕ್ಸಾಗಲೀ ಸ್ಟಾಕ್ ಆಗಲೀ ಒಳ್ಳೆಯ ಗುಣಮಟ್ಟದ ವಸ್ತು ಬೆಲೆ ಕಡಿಮೆಗೊಂಡಾಗ ಖರೀದಿಸುತ್ತಾರಂತೆ.

ಇದನ್ನೂ ಓದಿSalary: ಹುಷಾರಿಲ್ಲ ಎಂದು ರಜೆ ತಗೊಂಡು 15 ವರ್ಷ ಆಯ್ತು; 55 ಲಕ್ಷ ರೂ ಸಂಬಳ ಸಾಲದು ಎಂದು ಕಂಪನಿ ಮೇಲೆಯೇ ಕೇಸು ಹಾಕಿದ ಐಬಿಎಂ ಉದ್ಯೋಗಿ

ವಾರನ್ ಬಫೆಟ್ ಸಲಹೆ 6: ನಿಮ್ಮ ಮೇಲೆಯೇ ಹೂಡಿಕೆ ಮಾಡಿ

ನಿಮ್ಮ ಬಳಿ ಇರುವ ಅತಿದೊಡ್ಡ ಆಸ್ತಿ ನೀವೇ ಆಗಿರುತ್ತೀರಿ. ನಿಮ್ಮ ಮೇಲೆ ಹೆಚ್ಚು ಹೂಡಿಕೆ ಮಾಡಿ ಎಂಬುದು ಬಫೆಟ್ ಅವರ ಇನ್ನೊಂದು ಸಲಹೆ. ನಿಮಗಿರುವ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುವುದೋ, ಹೊಸ ಕೌಶಲ್ಯ ಪಡೆಯುವುದೋ ಹೀಗೆ ಏನೇ ಆಗಿರಬಹುದು. ಹೊಸ ಕೋರ್ಸ್ ಕಲಿಯಬಹುದು. ಪುಸ್ತಕ ಓದಿ ಜ್ಞಾನಾರ್ಜನೆ ಮಾಡಬಹುದು. ಇಂಥದ್ದು ಮಾಡಿದಷ್ಟೂ ನಿಮಗೆ 10 ಪಟ್ಟು ಲಾಭ ಸಿಗುತ್ತದೆ ಎಂಬುದು ಈ ಹಿರಿಯರ ಸೂತ್ರ.

ವಾರನ್ ಬಫೆಟ್ ಸಲಹೆ 7: ದೀರ್ಘಾವಧಿಗೆ ಯೋಚಿಸಿ

ನೀವು ಹೂಡಿಕೆ ಮಾಡಿದಾಕ್ಷಣ ಲಾಭ ಮಾಡಬೇಕೆನ್ನುವ ಮನಸ್ಥಿತಿ ಬಿಡಿ. ಹಣವನ್ನು ದೀರ್ಘಾವಧಿಗೆ ಯೋಚಿಸಿ. ನಿಮ್ಮ ಹೂಡಿಕೆ ದೀರ್ಘಾವಧಿಗೆ ಇರಲಿ. ಮಾರುಕಟ್ಟೆ ಅಲುಗಾಡುತ್ತಿದೆ ಎಂದು ಹೂಡಿಕೆ ಹಿಂಪಡೆಯುವ ಗೋಜಿಗೆ ಹೋಗದಿರಿ. ಇದು ನಿಮ್ಮಲ್ಲಿ ಸದಾ ಕಾಲಕ್ಕೂ ಹಣಕಾಸು ಭದ್ರತೆ ತರಬಲ್ಲುದು ಎಂದು ವಾರನ್ ಬಫೆಟ್ ಹೇಳುತ್ತಾರೆ.

ವಾರನ್ ಬಫೆಟ್ ಸಲಹೆ 8: ಕೆರೆಯ ನೀರನ್ನು ಕೆರೆಗೆ ಚೆಲ್ಲಿ

ನೀವು ಶ್ರೀಮಂತರಾಗಿದ್ದೀರೆಂದರೆ ಶೇ. 1ರಷ್ಟಿರುವ ವರ್ಗಕ್ಕೆ ಸೇರಿದ್ದೀರಿ. ಉಳಿದ ಶೇ. 99ರಷ್ಟು ಮಂದಿ ಬಗ್ಗೆ ಮಾನವೀಯತೆ ತೋರಬೇಡವೇ? ನಿಮ್ಮ ಬಳಿ ಶ್ರೀಮಂತಿಕೆ ಇದ್ದರೆ ಬಡವರಿಗೆ ಮತ್ತು ಅಸಹಾಯಕರಿಗೆ ನೆರವು ಒದಗಿಸಿ ಹೃದಯ ಶ್ರೀಮಂತಿಕೆಯನ್ನೂ ತೋರಿರಿ ಎನ್ನುವುದು ವಾರನ್ ಬಫೆಟ್ ಅವರ ಮಗದೊಂದು ಸಲಹೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಭಾರತಕ್ಕೆ ಆಗಮಿಸಿದ ದುಬೈ ಪ್ರಿನ್ಸ್ ಶೇಖ್ ಹಮ್ದಾನ್​ಗೆ ಚಂಡೆ ವಾದ್ಯದ ಸ್ವಾಗತ
ಭಾರತಕ್ಕೆ ಆಗಮಿಸಿದ ದುಬೈ ಪ್ರಿನ್ಸ್ ಶೇಖ್ ಹಮ್ದಾನ್​ಗೆ ಚಂಡೆ ವಾದ್ಯದ ಸ್ವಾಗತ