AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salary: ಹುಷಾರಿಲ್ಲ ಎಂದು ರಜೆ ತಗೊಂಡು 15 ವರ್ಷ ಆಯ್ತು; 55 ಲಕ್ಷ ರೂ ಸಂಬಳ ಸಾಲದು ಎಂದು ಕಂಪನಿ ಮೇಲೆಯೇ ಕೇಸು ಹಾಕಿದ ಐಬಿಎಂ ಉದ್ಯೋಗಿ

IBM Employee Sick Leave: 2008ರಿಂದಲೂ ಸಿಕ್ ಲೀವ್​ನಲ್ಲಿದ್ದು, ನಿಯಮಿತವಾಗಿ ಸಂಬಳ ಪಡೆಯುತ್ತಿರುವ ಐಬಿಎಂ ಉದ್ಯೋಗಿಯೊಬ್ಬರು, ತನಗೆ ಇಷ್ಟು ವರ್ಷಗಳಿಂದ ಸಂಬಳ ಹೆಚ್ಚಳ ಮಾಡದೇ ತಾರತಮ್ಯ ಮಾಡಲಾಗಿದೆ ಎಂದು ಕಂಪನಿ ವಿರುದ್ಧ ದೂರಿತ್ತಿದ್ದಾರೆ. ಆದರೆ, ನ್ಯಾಯಾಲಯವು ಈ ಉದ್ಯೋಗಿಯ ವಾದ ಪುರಸ್ಕರಿಸಿಲ್ಲ.

Salary: ಹುಷಾರಿಲ್ಲ ಎಂದು ರಜೆ ತಗೊಂಡು 15 ವರ್ಷ ಆಯ್ತು; 55 ಲಕ್ಷ ರೂ ಸಂಬಳ ಸಾಲದು ಎಂದು ಕಂಪನಿ ಮೇಲೆಯೇ ಕೇಸು ಹಾಕಿದ ಐಬಿಎಂ ಉದ್ಯೋಗಿ
ಐಬಿಎಂ ಉದ್ಯೋಗಿಗಳು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 15, 2023 | 3:04 PM

Share

ಇದು ಸಾಕಷ್ಟು ಅಚ್ಚರಿ, ಕುತೂಹಲ ಮೂಡಿಸುವ ಒಂದು ಸುದ್ದಿ. ಜಾಗತಿಕ ಐಟಿ ದೈತ್ಯ ಕಂಪನಿ ಐಬಿಎಂನ ಉದ್ಯೋಗಿಯಾದ (IBM Employee) ಈತ 2008ರಲ್ಲಿ ಅನಾರೋಗ್ಯಗೊಂಡು ಸಿಕ್ ಲೀವ್ ಪಡೆದು ರಜೆ ಹೋಗಿದ್ದವರು. ಆಗಿನಿಂದಲೂ ಈವರೆಗೂ ಸಿಕ್ ಲೀವ್​ನಲ್ಲಿಯೇ ಇದ್ದಾರೆ. ಇವರಿಗೆ ಐಬಿಎಂ ಕಂಪನಿ ವರ್ಷಕ್ಕೆ 54,028 ಪೌಂಡ್ (ಸುಮಾರು 55.31 ಲಕ್ಷ ರುಪಾಯಿ) ಸಂಬಳ ತಪ್ಪದೇ ಪಾವತಿಸುತ್ತಿದೆ. ಇವರು ಹೆಚ್ಚೂಕಡಿಮೆ ವೈದ್ಯಕೀಯವಾಗಿ ನಿವೃತ್ತಿಯೇ ಆಗಿದ್ದಾರೆ. ಆದರೂ ಇವರಿಗೆ 65 ವರ್ಷ ಆಗುವವರೆಗೂ 55 ಲಕ್ಷ ರೂ ಸಂಬಳ ಪ್ರತೀ ವರ್ಷವೂ ತಪ್ಪದೇ ಪಾವತಿಯಾಗುತ್ತಿರುತ್ತದೆ. ಈಗ ಸುದ್ದಿ ಏನೆಂದರೆ ಅಮೆರಿಕದ ಇಯಾನ್ ಕ್ಲಿಫಾರ್ಡ್ (Ian Clifford) ಎಂಬ ಈ ಐಬಿಎಂ ಉದ್ಯೋಗಿ ತನ್ನ ಸಂಬಳವನ್ನು ಕಂಪನಿ ಹೆಚ್ಚುತ್ತಿಲ್ಲ ಎಂದು ದೂರಿ ಉದ್ಯೋಗ ನ್ಯಾಯಮಂಡಳಿಯ ಮೆಟ್ಟಿಲೇರಿದ್ದು.

ಐಬಿಎಂ ಕಂಪನಿ ಕಳೆದ 15 ವರ್ಷಗಳಿಂದಲೂ ಅದೇ ಸಂಬಳ ಕೊಡುತ್ತಿದೆ. ಒಮ್ಮೆಯೂ ಸಂಬಳ ಹೆಚ್ಚಳ ಮಾಡಿಲ್ಲ. ಹಣದುಬ್ಬರ ಎಷ್ಟೊಂದು ಏರಿಕೆ ಆಗಿದೆ. ದೈಹಿಕ ಊನತೆ ಸಂಬಂಧ ತಾರತಮ್ಯ ಮಾಡಲಾಗುತ್ತಿದೆ ಎಂದು ನ್ಯಾಯಮಂಡಳಿ ಬಳಿ ಇಯಾನ್ ಕ್ಲಿಫಾರ್ಡ್ ದೂರಿತ್ತಿದ್ದರು.

ಇದನ್ನೂ ಓದಿViral Video: ಈತನಲ್ಲೂ ಇದೆ ಅದ್ಭುತ ಪ್ರತಿಭೆ ಆದ್ರೆ ಕಳ್ಳನಾಗಬಾರದಿತ್ತು, ಸ್ಪೈಡರ್​ಮ್ಯಾನ್​ ರೀತಿ 4 ಅಂತಸ್ತಿನ ಕಟ್ಟಡವನ್ನು 50 ಸೆಕೆಂಡುಗಳಲ್ಲಿ ಏರಿದ ಕಳ್ಳ

ಆದರೆ, ನ್ಯಾಯಾಲಯವು ಕ್ಲಿಫಾರ್ಡ್ ವಾದವನ್ನು ಪುರಸ್ಕರಿಸಲಿಲ್ಲ. ಸಕ್ರಿಯ ಉದ್ಯೋಗಿಯಾಗಿದ್ದರೆ ಸಂಬಳ ಹೆಚ್ಚಳ ಪಡೆಯಬಹುದು. ನಿಷ್ಕ್ರಿಯವಾಗಿರುವ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ ಆಗಬೇಕೆನ್ನುವುದು ತರವಲ್ಲ. ನಿಮಗೆ ಅನ್ಯಾಯ ಆಗಿಲ್ಲ. ಬದಲಾಗಿ ನಿಮಗೆ ಹೆಚ್ಚು ಅನುಕೂಲವಾಗಿರುವುದು. ನಿಮ್ಮ ವಾದವನ್ನು ಒಪ್ಪಲು ಆಗುವುದಿಲ್ಲ ಎಂದು ಎಂಪ್ಲಾಯ್ಮೆಂಟ್ ಟ್ರಿಬ್ಯೂನಲ್​ನ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಹೇಳಿದರು ಎಂದು ದಿ ಟಿಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.

ಸಿಕ್ ಲೀವ್​ನಲ್ಲಿದ್ದ ವ್ಯಕ್ತಿಗೆ ಐಬಿಎಂ ಎಷ್ಟು ವರ್ಷ ಸಂಬಳ ಕೊಡುತ್ತೆ?

ಪಾಶ್ಚಿಮಾತ್ಯ ಐಟಿ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಒಳ್ಳೆಯ ಸೌಲಭ್ಯಗಳಿರುತ್ತವೆ. ಐಬಿಎಂನಲ್ಲಿ ತುರ್ತು ಅನಾರೋಗ್ಯಕ್ಕೆ ತುತ್ತಾದ ಉದ್ಯೋಗಿಗೆ ಸಂಬಳ ಇತ್ಯಾದಿ ನೆರವು ನಿರಂತರವಾಗಿರುತ್ತದೆ. ವಿಶೇಷ ಸಂದರ್ಭದಲ್ಲಿ ಅನಾರೋಗ್ಯದಲ್ಲಿರುವ ಉದ್ಯೋಗಿಯನ್ನು ಕಂಪನಿಯ ಹೆಲ್ತ್ ಪ್ಲಾನ್​ಗೆ ಒಳಪಡಿಸಿದ್ದೇ ಆದಲ್ಲಿ ಆ ವ್ಯಕ್ತಿ ಚೇತರಿಸಿಕೊಳ್ಳುವವರೆಗೂ ಅಥವಾ 65 ವರ್ಷ ಆಗುವವರೆಗೂ ನಿರ್ದಿಷ್ಟ ಮೊತ್ತದ ಸಂಬಳ ನೀಡುತ್ತಿರಲಾಗುತ್ತದೆ. ಈ ಪ್ಲಾನ್ ಪ್ರಕಾರ ವ್ಯಕ್ತಿಯ ಸಂಬಳದ ಶೇ. 75ರಷ್ಟು ಹಣವನ್ನು ಸಂಬಳವಾಗಿ ನೀಡಲಾಗುತ್ತದೆ.

ಇದನ್ನೂ ಓದಿSuccess: ಮಣಿಪಾಲದಲ್ಲಿ ಓದಿದ್ದೇ ಟರ್ನಿಂಗ್ ಪಾಯಿಂಟ್; ವಿಜ್ಞಾನಿ ಮುರಳಿ ದಿವಿ 1.3 ಲಕ್ಷ ಕೋಟಿ ಕಂಪನಿ ಒಡೆಯರಾದ ಕಥೆ

ಇಯಾನ್ ಕ್ಲಿಫಾರ್ಡ್ 2008ರಲ್ಲಿ ಅನಾರೋಗ್ಯದಿಂದ ಸಿಕ್ ಲೀವ್ ಪಡೆದು ರಜೆಯಲ್ಲಿದ್ದರು. ಆಗ ಅವರಿಗೆ ವಾರ್ಷಿಕ ಸಂಬಳ 72,037 ಪೌಂಡ್ ಇತ್ತು. 2013 ಆದರೂ ಅವರ ಆರೋಗ್ಯದಲ್ಲಿ ಚೇತರಿಕೆ ತೋರಲಿಲ್ಲ. ಈತ ತನ್ನ ಆರೋಗ್ಯ ಸ್ಥಿತಿ ಬಗ್ಗೆ ಕಂಪನಿ ಬಳಿ ದೂರು ಕೊಟ್ಟಿದ್ದರು. ಆಗ ಐಬಿಎಂ ಸಂಸ್ಥೆ ಕ್ಲಿಫಾರ್ಡ್ ಅವರನ್ನು ಡಿಸಬಿಲಿಟಿ ಪ್ಲಾನ್​ಗೆ ಒಳಪಡಿಸಿತು. ಈ ಪ್ಲಾನ್​ಗೆ ಒಳಪಟ್ಟ ಉದ್ಯೋಗಿ ಕೆಲಸ ಮಾಡದಿದ್ದರೂ ಕಂಪನಿಯ ಉದ್ಯೋಗಿಯಾಗಿ ಮುಂದುವರಿಯುತ್ತಾನೆ. ಅಂತೆಯೇ, ಕ್ಲಿಫಾರ್ಡ್ ಅವರಿಗೆ ಅವರ ಸಂಬಳದ ಶೇ. 75ರಷ್ಟು ಹಣವನ್ನು, ಅಂದರೆ 54,028 ಪೌಂಡ್ ಅನ್ನು ಸಂಬಳವಾಗಿ ನೀಡಲು ನಿರ್ಧರಿಸಲಾಯಿತು.

ಆಗ ಇಯಾನ್ ಕ್ಲಿಫಾರ್ಡ್ ವಯಸ್ಸು 30ರ ಆಸುಪಾಸಿನಲ್ಲಿತ್ತು. 65 ವರ್ಷ ವಯಸ್ಸಾಗುವವರೆಗೂ ಇದೇ ರೀತಿ ಕೊಡುತ್ತಾ ಹೋಗುವುದೆಂದು ತೀರ್ಮಾನಿಸಲಾಗಿತ್ತು. ಇಲ್ಲಿಯವರೆಗೂ ಪ್ರತೀ ವರ್ಷ ಕ್ಲಿಫಾರ್ಡ್​ಗೆ ಅಷ್ಟು ಸಂಬಳ ತಪ್ಪದೇ ಬರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ