ಅದಾನಿ ಗ್ರೂಪ್ ವಿರುದ್ಧ ಹಿಂಡನ್‌ಬರ್ಗ್ ಮಾಡಿರುವ ಆರೋಪ ಆಧಾರರಹಿತ; ಸುಪ್ರೀಂ ಕೋರ್ಟ್‌ಗೆ ಸೆಬಿ
ಅದಾನಿ ಸಮೂಹದ ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ಮಾಡಿರುವ ಆರೋಪ ಆಧಾರರಹಿರ ಎಂದು ಸುಪ್ರೀಂ ಕೋರ್ಟ್‌ಗೆ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ಸೋಮವಾರ ತಿಳಿಸಿದೆ.
ನವದೆಹಲಿ: ಅದಾನಿ ಸಮೂಹದ (Adani Group) ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ಮಾಡಿರುವ ಆರೋಪ ಆಧಾರರಹಿರ ಎಂದು ಸುಪ್ರೀಂ ಕೋರ್ಟ್‌ಗೆ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಸೋಮವಾರ ತಿಳಿಸಿದೆ. ಈ ವಿಚಾರವಾಗಿ ವಕೀಲ, ಆರ್ಟಿಐ ಹೋರಾಟಗಾರ ಶ್ಯಾಮ್ ಕುಮಾರ್ ವಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಹಿಂಡನ್‌ಬರ್ಗ್ ವರದಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ಮಾಡಿರುವ ಆರೋಪಗಳು ವಾಸ್ತವವಾಗಿ ಆಧಾರರಹಿತ ಎಂದು ಸೆಬಿ ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಅದಾನಿ ಸಂಘಟನೆಯ ವಿರುದ್ಧ ಹಿಂಡನ್‌ಬರ್ಗ್ ವರದಿಯಲ್ಲಿ ಮಾಡಿರುವ ಆರೋಪದ ಬಗ್ಗೆ ತನಿಖೆಯಲ್ಲಿ ಯಾವುದೇ ವಾಸ್ತವವನ್ನು ಕಂಡುಹಿಡಿಯಲಾಗಲಿಲ್ಲ ಎಂದು ಸೆಬಿಯ ಅಫಿಡವಿಟ್ ಹೇಳಿದೆ ಎಂದು ಅವರು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
SEBI informed the Supreme Court today that allegations against Adani Group in Hindenburg Report are “factually baseless”. SEBI’s affidavit stated that its investigation could not find any substance in the allegation raised in the Hindenburg report against the Adani conglomerate. pic.twitter.com/hUNFk3OmZd
— Syam Kumar V (@Syamkumarnair) May 15, 2023
ಅದಾನಿ ಸಮೂಹದ ವಿರುದ್ಧ ನಡೆಸುತ್ತಿರುವ ತನಿಖೆಯನ್ನು ಪೂರ್ಣಗೊಳಿಸಲು ಇನ್ನೂ ಆರು ತಿಂಗಳ ಸಮಯಾವಕಾಶ ಬೇಕು ಎಂದು ಸೆಬಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಜತೆಗೆ, 2016ರಿಂದಲೂ ತಾನು ಅದಾನಿ ಸಮೂಹದ ಕುರಿತು ತನಿಖೆ ನಡೆಸುತ್ತಿದ್ದೇನೆ ಎಂಬುದು ವಾಸ್ತವಕ್ಕೆ ದೂರವಾದುದು ಎಂದು ಹೇಳಿದೆ.
ಇದನ್ನೂ ಓದಿ: Business Ideas: 70 ಸಾವಿರ ಖರ್ಚು ಮಾಡಿ 3-4 ಲಕ್ಷ ರೂ. ಆದಾಯ ಗಳಿಸಿ!
ಹಿಂಡನ್‌ಬರ್ಗ್ ರಿಸರ್ಚ್‌ನ ಆರೋಪಗಳ ಬಗ್ಗೆ ತನಿಖೆಗೆ ಕೋರಿರುವ ಕೆಲವು ಅರ್ಜಿದಾರರು ಆರೋಪಿಸಿರುವಂತೆ, 2016 ರಿಂದ ಯಾವುದೇ ಅದಾನಿ ಗ್ರೂಪ್ ಕಂಪನಿಗಳನ್ನು ತನಿಖೆ ಮಾಡಿಲ್ಲ ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ಹೇಳಿದೆ.
ಅದಾನಿ ಸಮೂಹವು ಷೇರುಗಳ ಮೌಲ್ಯ ತಿರುಚುವಿಕೆಯಲ್ಲಿ ತೊಡಗಿಕೊಂಡಿರುವುದಲ್ಲದೆ ದಶಕಗಳಿಂದ ಲೆಕ್ಕಪತ್ರ ವಂಚನೆ ಎಸಗಿದೆ ಎಂದು ಹಿಂಡನ್‌ಬರ್ಗ್ ರಿಸರ್ಚ್ ಆರೋಪಿಸಿತ್ತು. ಈ ವಿಚಾರವಾಗಿ ಹಿಂಡನ್‌ಬರ್ಗ್ ರಿಸರ್ಚ್ ಸುಮಾರು ಎರಡು ವರ್ಷಗಳಿಂದ ತನಿಖೆ ನಡೆಸುತ್ತಿತ್ತು ಎನ್ನಲಾಗಿತ್ತು. ಈ ಆರೋಪ ದೇಶದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ