Sign In

By signing in or creating an account, you agree with Associated Broadcasting Company's Terms & Conditions and Privacy Policy.

Work From Home: ವರ್ಕ್ ಫ್ರಮ್ ಹೋಮ್ ಮಾಡುವವರು ಸ್ವಾರ್ಥಿಗಳು, ನಿಮ್ಮಿಂದ ಎಷ್ಟು ಜನರಿಗೆ ನಷ್ಟ ಗೊತ್ತಾ?

ಸಿಡ್ನಿಯ ಕಂಪನಿಯೊಂದರ ಸಿಇಒ ಹೇಳುತ್ತಿದ್ದಾರೆ. ಹೌದು ವರ್ಕ್ ಫ್ರಮ್ ಹೋಮ್ ಮಾಡುವವರನ್ನು ಸ್ವಾರ್ಥಿಗಳು ಎಂದು ಕರೆದಿದ್ದಾರೆ.

Work From Home: ವರ್ಕ್ ಫ್ರಮ್ ಹೋಮ್ ಮಾಡುವವರು ಸ್ವಾರ್ಥಿಗಳು, ನಿಮ್ಮಿಂದ ಎಷ್ಟು ಜನರಿಗೆ ನಷ್ಟ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: May 16, 2023 | 6:07 PM

ಕೊರೊನಾ ಸಮಯದಲ್ಲಿ ವರ್ಕ್ ಫ್ರಮ್ ಹೋಮ್ ಎಂಬುದು ಒಂದು ಟ್ರೆಂಡ್​​ ಆಗಿತ್ತು, ಆದರೆ ಇದು ನಂತರದಲ್ಲಿ ದಿನಗಳಲ್ಲಿ ಒಂದು ಅಭ್ಯಾಸವಾಗಿದೆ, ಕೆಲವರು ಮನೆಯಿಂದ ಕೆಲಸ ಮಾಡುವುದು ಒಂದು ಆರಾಮದಾಯಕ ಸ್ಥಿತಿ ಎಂದುಕೊಂಡಿದ್ದಾರೆ. ಅದಕ್ಕಾಗಿಯೇ ವರ್ಕ್ ಫ್ರಮ್ ಹೋಮ್​​ಗೆ ಹೊಂದಿಕೊಂಡಿದ್ದಾರೆ. ಈ ಕಾರಣಕ್ಕೆ ದೈತ್ಯ ಕಂಪನಿಗಳಲ್ಲಿ ವರ್ಕ್ ಫ್ರಮ್ ಹೋಮ್​​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಆದರೆ ಇದು ತಪ್ಪು ಎಂದು ನಾವು ಹೇಳುತ್ತಿಲ್ಲ. ಸಿಡ್ನಿಯ ಕಂಪನಿಯೊಂದರ ಸಿಇಒ ಹೇಳುತ್ತಿದ್ದಾರೆ. ಹೌದು ವರ್ಕ್ ಫ್ರಮ್ ಹೋಮ್ ಮಾಡುವವರನ್ನು ಸ್ವಾರ್ಥಿಗಳು ಎಂದು ಕರೆದಿದ್ದಾರೆ.

ಸೋಮವಾರ ವಾಣಿಜ್ಯ ರೇಡಿಯೊ ಸ್ಟೇಷನ್‌ ಸಂದರ್ಶನವೊಂದರಲ್ಲಿ ಸಿಆರ್ ಕಮರ್ಷಿಯಲ್ ಪ್ರಾಪರ್ಟಿ ಗ್ರೂಪ್‌ನ ಸಿಇಒ ನಿಕೋಲ್ ಡಂಕನ್, ಇಂದಿನ ಯುವಪೀಳಿಗೆ ತುಂಬಾ ಸ್ವಾರ್ಥಿಗಳು, ಯುವಕರು ವರ್ಕ್ ಫ್ರಮ್ ಹೋಮ್ ಮೂಡ್​​ನಿಂದ ಹೊರಗೆ ಬರುತ್ತಿಲ್ಲ, ನಮ್ಮಲ್ಲಿ ಎಷ್ಟೊ ಜನ ಸಾರ್ವಜನಿಕ ಆಸ್ತಿಗಳನ್ನು ಅಥವಾ ಸಾರಿಗೆಗಳನ್ನು ಈ ಕಾರಣದಿಂದ ಬಳಸುತ್ತಿಲ್ಲ. ವರ್ಕ್ ಫ್ರಮ್ ಹೋಮ್ ಬಗ್ಗೆ ಅನೇಕರಿಗೆ ಒಲವು ಹೆಚ್ಚು, ಆದರೆ ಇದು ತಪ್ಪು ಎಂದಲ್ಲ, ಆದರೆ ಅದನ್ನೇ ಅಭ್ಯಾಸ ಮಾಡಿಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ.

ನಮ್ಮ ಕಾಲದಲ್ಲಿ ನಾವು ಕೆಲಸಕ್ಕೆ ಹೋಗುತ್ತಿದ್ದಾಗ ತುಂಬಾ ಉತ್ಸಾಹಕತೆ ಇತ್ತು, ಆ ಸಮಯದಲ್ಲಿ ಬಸ್ಸು, ರೈಲು, ದೋಣಿ ಎಂದು 3 ಗಂಟೆಗಳ ಕಾಲ ಪ್ರಯಾಣಿಸುತ್ತಿದ್ದೇವು, ನಮಗೆ ಯಾವುದು ತಿಳಿದಿಲ್ಲ, ಅದನ್ನು ಕಚೇರಿಯಲ್ಲಿ ತಿಳಿದುಕೊಳ್ಳಬಹುದು, ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಕೆಲಸ ಮಾಡಬಹುದು. ಈ ಬಗ್ಗೆ ದೈತ್ಯ ಕಂಪನಿಗಳ ಸಿಇಒಗಳು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ:Work From Home Rules: ವರ್ಕ್ ಫ್ರಂ ಹೋಂ ಕುರಿತು ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ

ನಿಮ್ಮ ವರ್ಕ್ ಫ್ರಮ್ ಹೋಮ್​​ನಿಂದ ಎಷ್ಟು ಜನ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಗೊತ್ತಾ? ನಿಮ್ಮಿಂದ ಎಷ್ಟು ಜನರಿಗೆ ನಷ್ಟ ಗೊತ್ತಾ? ಹೌದು ನೀವು ವರ್ಕ್ ಫ್ರಮ್ ಹೋಮ್​​ನಲ್ಲಿದ್ದರೆ ಸಾರ್ವಜನಿಕ ವ್ಯವಸ್ಥೆಗಳು ಹೆಚ್ಚು ಉಪಯೋಗ ಆಗುವುದಿಲ್ಲ, ಇದರಿಂದ ಸರ್ಕಾರಕ್ಕೆ ಎಷ್ಟು ನಷ್ಟ, ನಿಮ್ಮ ವರ್ಕ್ ಫ್ರಮ್ ಹೋಮ್​​ನಿಂದ ಕ್ಯಾಂಟೀನ್​​ಗಳಿಗೂ ನಷ್ಟ, ನೀವು ಇಲ್ಲ ಎಂದರೆ ಯಾರಿಗೆ ಊಟ, ತಿಂಡಿ, ಕಾಫಿ, ನೀವು ನಿಜವಾಗಿಯು ಸ್ವಾರ್ಥಿಗಳು ನಿಮ್ಮ ಲಾಭವನ್ನು ಮಾತ್ರ ನೋಡಿಕೊಳ್ಳತ್ತೀರ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!