AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Work From Home Rules: ವರ್ಕ್ ಫ್ರಂ ಹೋಂ ಕುರಿತು ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ

ಎಲ್ಲಾ ಆರ್ಥಿಕ ವಲಯಗಳಲ್ಲಿ ದೇಶಾದ್ಯಂತ ಏಕರೂಪದ ವರ್ಕ್‌ ಫ್ರಮ್‌ ಹೋಂ (WFH) ನೀತಿಯನ್ನು ಪರಿಚಯಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಅಧಿಸೂಚನೆಯನ್ನು ಹೊರಡಿಸಿದೆ.

Work From Home Rules: ವರ್ಕ್ ಫ್ರಂ ಹೋಂ ಕುರಿತು ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ
ಸಾಂದರ್ಭಿಕ ಚಿತ್ರImage Credit source: bbc
TV9 Web
| Edited By: |

Updated on: Jul 20, 2022 | 9:02 AM

Share

ನವದೆಹಲಿ: 2 ವರ್ಷಗಳ ಕಾಲ ಕೊವಿಡ್​ ಹಾವಳಿಯಿಂದ ಎಲ್ಲರ ಜೀವನಶೈಲಿಯೂ ಬದಲಾವಣೆಯಾಗಿದೆ. ಮಾಸ್ಕ್, ಗ್ಲೌಸ್​, ಸ್ಯಾನಿಟೈಸರ್​ ಜೀವನಕ್ಕೆ ಒಗ್ಗಿಕೊಂಡಿರುವ ನಮ್ಮ ಅಗತ್ಯತೆಗಳೂ ಬದಲಾಗಿವೆ. ಉದ್ಯೋಗಿಗಳಿಗೆ 2 ವರ್ಷಗಳಿಂದ ವರ್ಕ್ ಫ್ರಂ ಹೋಂ ಸೌಲಭ್ಯ ಸಿಕ್ಕಿರುವುದರಿಂದ ಈಗ ಆಫೀಸ್​ ಶುರುವಾದರೂ ಯಾರೂ ಆಫೀಸ್​ಗೆ ಹೋಗಲು ಮನಸು ಮಾಡುತ್ತಿಲ್ಲ. ವರ್ಕ್ ಫ್ರಂ ಹೋಂ ಆಯ್ಕೆಯಿರುವ ಉದ್ಯೋಗಕ್ಕೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಇದರ ನಡುವೆ ಕೇಂದ್ರ ಸರ್ಕಾರ ಹೊಸ ಘೋಷಣೆಯನ್ನು ಮಾಡಿದ್ದು, ವಿಶೇಷ ಆರ್ಥಿಕ ವಲಯಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಲು ಸೂಚಿಸಿದೆ.

ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವಾಲಯ ಮಂಗಳವಾರ ಅನುಮತಿ ನೀಡಿದ್ದು, ವಿಶೇಷ ಆರ್ಥಿಕ ವಲಯದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಹೊಸ ವರ್ಕ್‌ ಫ್ರಮ್‌ ಹೋಮ್‌ ನಿಯಮವನ್ನು ಪ್ರಕಟಿಸಿದೆ. ಎಲ್ಲಾ ಆರ್ಥಿಕ ವಲಯಗಳಲ್ಲಿ ದೇಶಾದ್ಯಂತ ಏಕರೂಪದ ವರ್ಕ್‌ ಫ್ರಮ್‌ ಹೋಂ (WFH) ನೀತಿಯನ್ನು ಪರಿಚಯಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಅಧಿಸೂಚನೆಯನ್ನು ಹೊರಡಿಸಿದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ವಿಭಾಗಗಳೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿ, ಈ ನಿರ್ಧಾರಕ್ಕೆ ಬರಲಾಗಿದೆ.

ಇದನ್ನೂ ಓದಿ: Wipro: ವಿಪ್ರೋ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಅಂತ್ಯ; ನಾಳೆಯಿಂದಲೇ ಆಫೀಸ್​ನಿಂದ ಕೆಲಸ ಶುರು

ಕೇಂದ್ರ ಸರ್ಕಾರದ ನೂತನ ನಿಯಮಗಳ ಪ್ರಕಾರ, ಗುತ್ತಿಗೆ ಆಧಾರಿತ (ಕಾಂಟ್ರಾಕ್ಟ್​) ಉದ್ಯೋಗಿಗಳನ್ನು ಒಳಗೊಂಡಂತೆ ಒಟ್ಟ ಪ್ರಮಾಣದ ಶೇ. 50ರಷ್ಟು ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಆಯ್ಕೆ ನೀಡಬಹುದು. ಶೇ. 50ಕ್ಕಿಂತಲೂ ಅಧಿಕ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ನೀಡುವ ಅಧಿಕಾರವನ್ನು ಸ್ಪೆಷಲ್‌ ಎಕಾನಮಿಕ್‌ ಝೋನ್‌ನ ಅಭಿವೃದ್ಧಿ ಆಯುಕ್ತರಿಗೆ ನೀಡಲಾಗಿದೆ. ಈ ರೀತಿ ಶೇ. 50ಕ್ಕಿಂತ ಹೆಚ್ಚು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕಾದರೆ ಅದಕ್ಕೆ ಸಂಬಂಧಪಟ್ಟ ಸೂಕ್ತ ಕಾರಣವನ್ನು ಲಿಖಿತವಾಗಿ ನೀಡಬೇಕಾಗುತ್ತದೆ.

ನೂತನ ನಿಯಮದ ಪ್ರಕಾರ ಮುಂದಿನ ಒಂದು ವರ್ಷದವರೆಗೆ ವಿಶೇಷ ಆರ್ಥಿಕ ವಲಯದ ಉದ್ಯೋಗಿಗಳು ವರ್ಕ್‌ ಫ್ರಮ್‌ ಹೋಂ ಸೌಲಭ್ಯವನ್ನು ನೀಡಬಹುದು. ಅದಕ್ಕಿಂತಲೂ ಹೆಚ್ಚಿನ ಸಮಯ ವರ್ಕ್‌ ಫ್ರಮ್‌ ಹೋಂ ನೀಡುವ ಅಧಿಕಾರ ಆ ಘಟಕದ ಡಿಸಿಯುಗೆ ಇರುತ್ತದೆ. ಅವರು ಒಪ್ಪಿಗೆ ನೀಡಿದರೆ ವರ್ಕ್ ಫ್ರಂ ಹೋಂ ಆಯ್ಕೆಯನ್ನು ಮತ್ತೆ ಒಂದು ವರ್ಷ ವಿಸ್ತರಿಸಬಹುದಾಗಿದೆ.

ಇದನ್ನೂ ಓದಿ: Migraine: ವರ್ಕ್ ಫ್ರಂ ಹೋಮ್ ಒತ್ತಡಕ್ಕೆ ಶುರುವಾಯ್ತಾ ಮೈಗ್ರೇನ್? ಇದರಿಂದ ಹೊರಬರಲು ಈ ವಿಧಾನಗಳನ್ನು ಅನುಸರಿಸಿ

ಭಾರತದಲ್ಲಿ ಈ ವಿಶೇಷ ಆರ್ಥಿಕ ವಲಯ (ಎಸ್‌ಇಝಡ್‌) ಘಟಕ ಸ್ಥಾಪಿಸುವ ವ್ಯವಹಾರಗಳಿಗೆ ಪ್ರೋತ್ಸಾಹ ಧನ ದೊರಕುತ್ತದೆ. ಉಚಿತ ವಿದ್ಯುತ್‌, ನೀರು ಸರಬರಾಜು, ಭೂಮಿ ಬೆಲೆಯಲ್ಲಿ ಇಳಿಕೆ ಇತ್ಯಾದಿಗಳು ಇರುತ್ತವೆ. ಕೇಂದ್ರ ವಾಣಿಜ್ಯ ಸಚಿವಾಲಯ ವಿಶೇಷ ಆರ್ಥಿಕ ವಲಯಗಳ ನಿಯಮಗಳು, 2006ರಲ್ಲಿ ವರ್ಕ್ ಫ್ರಂ ಹೋಮ್​ಗಾಗಿ ಹೊಸ ನಿಯಮ 43A ಅನ್ನು ಸೂಚಿಸಿತ್ತು.

ಎಲ್ಲಾ ವಿಶೇಷ ಆರ್ಥಿಕ ವಲಯಗಳಲ್ಲಿ (SEZs) ದೇಶಾದ್ಯಂತ ಏಕರೂಪದ ವರ್ಕ್ ಫ್ರಂ ಹೋಂ ನೀತಿಗೆ ನಿಬಂಧನೆಯನ್ನು ಮಾಡಲು ಉದ್ಯಮದ ಬೇಡಿಕೆಯ ಮೇರೆಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಇವರಲ್ಲಿ IT/ ITeS, SEZ ಘಟಕಗಳ ಉದ್ಯೋಗಿಗಳು ಕೂಡ ಸೇರಿದ್ದಾರೆ.

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ