Wipro: ವಿಪ್ರೋ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಅಂತ್ಯ; ನಾಳೆಯಿಂದಲೇ ಆಫೀಸ್ನಿಂದ ಕೆಲಸ ಶುರು
ಬರೋಬ್ಬರಿ 18 ತಿಂಗಳ ವರ್ಕ್ ಫ್ರಂ ಹೋಂ ಮುಗಿಸಿ ವಿಪ್ರೋ ಉದ್ಯೋಗಿಗಳು ಸೆ. 13ರಿಂದ ಆಫೀಸಿಗೆ ಬರಲಿದ್ದಾರೆ. ನಾಳೆಯಿಂದ ವಿಪ್ರೋದ ಉದ್ಯೋಗಿಗಳು ನಾಳೆಯಿಂದ ವಾರದಲ್ಲಿ ಎರಡು ದಿನ ಆಫೀಸಿಗೆ ಬಂದು ಕೆಲಸ ಮಾಡಬೇಕು.
ಬೆಂಗಳೂರು: ಕೊರೊನಾದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಬಹುತೇಕ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ (Work From Home) ನೀಡಲಾಗಿತ್ತು. ಇದೀಗ ಕೊರೊನಾ ಆರ್ಭಟ (Covid Pandemic) ಕೊಂಚ ಕಡಿಮೆಯಾಗುತ್ತಿರುವುದರಿಂದ ಮತ್ತೆ ಉದ್ಯೋಗಿಗಳನ್ನು ಆಫೀಸಿಗೆ ಬರಲು ಸೂಚಿಸಲಾಗಿದೆ. ಭಾರತದ ಬೃಹತ್ ಕಂಪನಿಗಳಲ್ಲಿ ಒಂದಾದ ವಿಪ್ರೋ (Wipro) ತನ್ನ ಉದ್ಯೋಗಿಗಳಿಗೆ ನಾಳೆಯಿಂದ ಅಂದರೆ ಸೋಮವಾರದಿಂದ ಆಫೀಸಿಗೆ ಬರಲು ಸೂಚಿಸಿದೆ. ಬರೋಬ್ಬರಿ 18 ತಿಂಗಳ ವರ್ಕ್ ಫ್ರಂ ಹೋಂ ಮುಗಿಸಿ ವಿಪ್ರೋ ಉದ್ಯೋಗಿಗಳು ಸೆ. 13ರಿಂದ ಆಫೀಸಿಗೆ ಬರಲಿದ್ದಾರೆ.
ಎರಡೂ ಡೋಸ್ ಕೊರೊನಾ ಲಸಿಕೆಗಳನ್ನು ಪಡೆದ ವಿಪ್ರೋ ಉದ್ಯೋಗಿಗಳಿಗೆ ಮಾತ್ರ ಆಫೀಸಿಗೆ ಬರಲು ಸೂಚಿಸಲಾಗಿದೆ. ಹಾಗಂತ ವಾರಪೂರ್ತಿ ಅವರು ಆಫೀಸಿಗೆ ಬರಬೇಕೆಂದೇನೂ ಇಲ್ಲ. ವಿಪ್ರೋದ ಉದ್ಯೋಗಿಗಳು ನಾಳೆಯಿಂದ ವಾರದಲ್ಲಿ ಎರಡು ದಿನ ಆಫೀಸಿಗೆ ಬಂದು ಕೆಲಸ ಮಾಡಬೇಕು. ಆದರೆ, ಆ ಉದ್ಯೋಗಿಗಳು ಎರಡು ಡೋಸ್ ಕೊವಿಡ್ ಲಸಿಕೆ ಹಾಕಿಸಿಕೊಂಡಿರುವುದು ಕಡ್ಡಾಯ.
After 18 long months, our leaders @Wipro are coming back to the office starting tomorrow (twice a week). All fully vaccinated, all ready to go – safely and socially distanced! We will watch this closely. pic.twitter.com/U8YDs2Rsyo
— Rishad Premji (@RishadPremji) September 12, 2021
ಈ ಬಗ್ಗೆ ವಿಪ್ರೋ ಚೇರ್ಮನ್ ರಿಷದ್ ಪ್ರೇಮ್ಜಿ ಮಾಹಿತಿ ನೀಡಿದ್ದು, 18 ತಿಂಗಳ ಬಳಿಕ ವಿಪ್ರೋದ ಉದ್ಯೋಗಿಗಳು ಆಫೀಸಿಗೆ ಬರುತ್ತಿದ್ದಾರೆ. ನಾಳೆಯಿಂದ ಆಫೀಸ್ ಆರಂಭವಾಗಲಿದ್ದು, ವಾರದಲ್ಲಿ ಎರಡು ದಿನ ಆಫೀಸಿನಿಂದ ಕೆಲಸ ಮಾಡಲಿದ್ದಾರೆ. ಉಳಿದ ಮೂರು ದಿನ ವರ್ಕ್ ಫ್ರಂ ಹೋಂ ಇರಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಕೊವಿಡ್ ಲಸಿಕೆಯನ್ನೂ ಹಾಕಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇಷ್ಟೇ ಅಲ್ಲದೆ, ವಿಪ್ರೋ ಆಫೀಸ್ಗಳಲ್ಲಿ ಕೊವಿಡ್ ನಿಯಮಾವಳಿಗಳನ್ನು ಯಾವ ರೀತಿ ಜಾರಿಗೊಳಿಸಲಾಗಿದೆ ಎಂಬುದರ ಬಗ್ಗೆ ವಿಡಿಯೋವನ್ನು ಕೂಡ ರಿಷದ್ ಪ್ರೇಮ್ಜಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Wipro market capitalisation: 3 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳ ದಾಖಲಿಸಿದ 14ನೇ ಕಂಪೆನಿ ವಿಪ್ರೋ; ಏನಿದು ಸಾಧನೆ?
(Wipro Work from home ends for Wipro employees back to office from Monday after 18 months says Rishad Premji)
Published On - 5:09 pm, Sun, 12 September 21