Wipro market capitalisation: 3 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳ ದಾಖಲಿಸಿದ 14ನೇ ಕಂಪೆನಿ ವಿಪ್ರೋ; ಏನಿದು ಸಾಧನೆ?

ವಿಪ್ರೋ ಕಂಪೆನಿ ಜೂನ್ 3ನೇ ತಾರೀಕಿನ ಗುರುವಾರ ಮಾರುಕಟ್ಟೆ ಬಂಡವಾಳ 3 ಲಕ್ಷ ಕೋಟಿ ಮುಟ್ಟುವ ಮೂಲಕ ಈ ಸಾಧನೆ ಮಾಡಿದ ಭಾರತದ 14ನೇ ಕಂಪೆನಿ ಎನಿಸಿಕೊಂಡಿತು. ಏನಿದು ಮಾರುಕಟ್ಟೆ ಬಂಡವಾಳ ಮೌಲ್ಯ ವಿವರ ಇಲ್ಲಿದೆ.

Wipro market capitalisation: 3 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳ ದಾಖಲಿಸಿದ 14ನೇ ಕಂಪೆನಿ ವಿಪ್ರೋ; ಏನಿದು ಸಾಧನೆ?
ವಿಪ್ರೋ (ಸಾಂದರ್ಭಿಕ ಚಿತ್ರ)
Follow us
Srinivas Mata
|

Updated on:Jun 03, 2021 | 5:50 PM

ಬೆಂಗಳೂರು ಮೂಲದ ಐ.ಟಿ. ಕಂಪೆನಿ ವಿಪ್ರೋ 3 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ತಲುಪುವ ಮೂಲಕ ಹೊಸ ದಾಖಲೆ ಬರೆಯಿತು. ಆದರೆ ದಿನದ ಅಂತ್ಯಕ್ಕೆ ಅಲ್ಲಿಂದ ಕೆಳಗೆ ಇಳಿಯಿತು. ಈ ತನಕ ಆ ಪಟ್ಟಿಯಲ್ಲಿ ಇದ್ದ ಇತರ ಎರಡು ಐ.ಟಿ. ಕಂಪೆನಿಗಳೆಂದರೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಇನ್ಫೋಸಿಸ್. ಇಂದಿನ ವಹಿವಾಟಿನಲ್ಲಿ (ಜೂನ್ 3, 2021) ಆರಂಭದಲ್ಲೇ ವಿಪ್ರೋ ಷೇರು ಸಾರ್ವಕಾಲಿಕ ದಾಖಲೆ ಮಟ್ಟವಾದ ರೂ. 550 ಮುಟ್ಟಿತು. ಹಿಂದಿನ ದಿನದ ಮುಕ್ತಾಯ ಅವಧಿಯಲ್ಲಿ ರೂ. 543.05ಕ್ಕೆ ವ್ಯವಹಾರ ಮುಗಿಸಿತ್ತು. 2020ರ ಜೂನ್ 12ನೇ ತಾರೀಕಿನಂದು ವಿಪ್ರೋ ಷೇರಿನ ಬೆಲೆ ವಾರ್ಷಿಕ ಕನಿಷ್ಠ ಮಟ್ಟವಾದ ರೂ. 206.40 ತಲುಪಿತ್ತು. ಆ ಹಂತದಿಂದ ಷೇರಿನ ಬೆಲೆ ಮತ್ತೆ ಪುಟಿದೆದ್ದಿದೆ. ಇವತ್ತಿನ ವ್ಯವಹಾರದಲ್ಲಿ 1.56 ಲಕ್ಷ ವಿಪ್ರೋ ಕಂಪೆನಿ ಷೇರುಗಳು ಕೈ ಬದಲಾಗಿ, ರೂ. 8.47 ಕೋಟಿ ವಹಿವಾಟು ನಡೆಸಿದೆ.

ಕಂಪೆನಿ ಮಾರುಕಟ್ಟೆ ಬಂಡವಾಳ ಅಂದರೆ ಏನು ಅನ್ನೋ ಕುತೂಹಲ ಸಹಜವಾಗಿ ಇರುತ್ತದೆ. ಅದನ್ನು ವಿವರಿಸುವ ಪ್ರಯತ್ನ ಇಲ್ಲಿ ಮಾಡಲಾಗುವುದು. ಒಂದು ಕಂಪೆನಿಗೆ ಬಂಡವಾಳ ಸಂಗ್ರಹಿಸುವ ವೇಳೆಯಲ್ಲಿ ಒಟ್ಟು ಮೊತ್ತವನ್ನು ಷೇರುಗಳಾಗಿ ವಿಂಗಡಿಸಲಾಗುತ್ತದೆ. ಹಾಗೆ ವಿಂಗಡಿಸಿ ನೋಡುವಾಗ ಸದ್ಯಕ್ಕೆ ವಿಪ್ರೋ ಕಂಪೆನಿಯದು ಒಟ್ಟಾರೆ 547,91,38,555 (547.91 ಕೋಟಿ) ಷೇರುಗಳಿವೆ. 2021ರ ಮಾರ್ಚ್ 31ಕ್ಕೆ ವಿಪ್ರೋ ಕಂಪೆನಿ ಷೇರಿನ ಮಾಲೀಕತ್ವ ಈ ಕೆಳಕಂಡಂತೆ ಇದೆ.

ಪ್ರವರ್ತಕರು (ಪ್ರಮೋಟರ್ಸ್)- ಶೇ 73.02 ಎಫ್​ಐಐ (ವಿದೇಶೀ ಸಾಂಸ್ಥಿಕ ಹೂಡಿಕೆ)- ಶೇ 9.21 ಡಿಐಐ (ದೇಶೀ ಸಾಂಸ್ಥಿಕ ಹೂಡಿಕೆ)- ಶೇ 6.15 ಸಾರ್ವಜನಿಕರು – ಶೇ 11.25 ಇತರರು- ಶೇ 0.37

ಹೀಗೆ 547.91 ಕೋಟಿ ಷೇರುಗಳು ವಿವಿಧ ವರ್ಗದಡಿಯಲ್ಲಿ ಬರುವವರ ಬಳಿ ಇವೆ. ಗುರುವಾರ ಬೆಳಗ್ಗೆ ಷೇರಿನ ಬೆಲೆ ಒಂದಕ್ಕೆ 550 ರೂಪಾಯಿ ಮುಟ್ಟಿತಲ್ಲ, ಆಗ ಇಷ್ಟೂ ಷೇರಿನ ಬೆಲೆಯಲ್ಲೂ ಏರಿಕೆ ಆಗುತ್ತದೆ. ಷೇರಿನ ದರ 1 ರೂಪಾಯಿ ಹೆಚ್ಚಾದರೆ ವಿಪ್ರೋದ ಮಾರುಕಟ್ಟೆ ಬಂಡವಾಳ 547.91 ಕೋಟಿಯಷ್ಟು ಜಾಸ್ತಿಯಾದಂತೆ. ಅಂಥದ್ದರಲ್ಲಿ ಕಳೆದ ವರ್ಷ ಜೂನ್​ನಲ್ಲಿ ಇದ್ದ 206.40 ರೂಪಾಯಿಯ ಕನಿಷ್ಠ ಮಟ್ಟದಿಂದ 343.60 ರೂಪಾಯಿ ಏರಿಕೆ ಕಂಡಿದೆ ವಿಪ್ರೋ ಷೇರಿನ ಬೆಲೆ. ಅಲ್ಲಿಗೆ ಮಾರುಕಟ್ಟೆಯ ಬಂಡವಾಳ ಎಷ್ಟು ಲಕ್ಷ ಕೋಟಿ ಹೆಚ್ಚಾಗಿದೆ ಎಂಬುದನ್ನು ಊಹಿಸಿಕೊಳ್ಳಬಹುದು. ಯಾವುದೇ ಕಂಪೆನಿಯ ಮಾರುಕಟ್ಟೆ ಬಂಡವಾಳ ಹೆಚ್ಚಾಗಿದೆ ಅಂದರೆ, ಅದರರ್ಥ ಅದರ ಷೇರು ಹೂಡಿಕೆದಾರರ ಸಂಪತ್ತಿನಲ್ಲಿ ಹೆಚ್ಚಳ ಆಗಿದೆ ಅಂತಲೇ. ಇದರ ಜತೆಗೆ ಕಂಪೆನಿಯಿಂದ ಡಿವಿಡೆಂಡ್ ಸಹ ನೀಡಲಾಗುತ್ತದೆ. ಇದು ಕೂಡ ಲಾಭವೇ.

ಇದಕ್ಕೆ ಸೂತ್ರ ಹಾಕಿ ಹೇಳುವುದಾದರೆ, ಕಂಪೆನಿಯ ಒಟ್ಟು ಷೇರುಗಳು X ಸದ್ಯದ ಮಾರುಕಟ್ಟೆ ಬೆಲೆ = ಕಂಪೆನಿಯ ಮಾರುಕಟ್ಟೆ ಬಂಡವಾಳ ಆಗುತ್ತದೆ. ವಿಪ್ರೋ ಕಂಪೆನಿಯ ಒಟ್ಟು ಷೇರುಗಳು 547,91,38,555 X ಗುರುವಾರದ ದಿನದ ಕೊನೆಗೆ ವಿಪ್ರೋ ಷೇರಿನ ಬೆಲೆ ಒಂದಕ್ಕೆ 539.05 = ಮಾರುಕಟ್ಟೆ ಬಂಡವಾಳ ಮೌಲ್ಯ 2,95,35,296,38,072.75 ಆಗುತ್ತದೆ. ಅಂದರೆ 2.95 ಲಕ್ಷ ಕೋಟಿಗೂ ಹೆಚ್ಚು. ದಿನದ ಆರಂಭದಲ್ಲಿ 550 ರೂಪಾಯಿ ತಲುಪಿದ್ದ ಷೇರಿನ ಬೆಲೆಯು ಕೊನೆಗೆ 10.95 ರೂಪಾಯಿ ಕಡಿಮೆ ಆಗಿದ್ದರಿಂದ 3 ಲಕ್ಷ ಕೋಟಿ ರೂಪಾಯಿಯ ಮಾರುಕಟ್ಟೆ ಬಂಡವಾಳ ಮೌಲ್ಯದಿಂದ ಕೆಳಗೆ ಇಳಿಯಿತು.

ಭಾರತದಲ್ಲಿ ಈ ತನಕ 13 ಕಂಪೆನಿಗಳು 3 ಲಕ್ಷ ಕೋಟಿ ರೂಪಾಯಿಯ ಮಾರುಕಟ್ಟೆ ಬಂಡವಾಳ ದಾಟಿದ ಸಾಧನೆ ಮಾಡಿವೆ. ವಿಪ್ರೋ ಈಗ 14ನೇ ಕಂಪೆನಿಯಾಗಿದೆ. ಈ ಪಟ್ಟಿಯಲ್ಲಿ 14 ಲಕ್ಷ ಕೋಟಿ ರೂಪಾಯಿಯೊಂದಿಗೆ ರಿಲಯನ್ಸ್ ಮೊದಲ ಸ್ಥಾನದಲ್ಲಿದ್ದರೆ, ಟಿಸಿಎಸ್ ಕಂಪೆನಿ 11.58 ಲಕ್ಷ ಕೋಟಿ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ 8.33 ಲಕ್ಷ ಕೋಟಿಯೊಂದಿಗೆ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Wipro FY21 Q4 results: ಜನವರಿಯಿಂದ ಮಾರ್ಚ್ ತ್ರೈಮಾಸಿಕಕ್ಕೆ ವಿಪ್ರೋ ಲಾಭ ರೂ. 2972 ಕೋಟಿ

(Bengaluru based Wipro become 14th company crossed Rs 3 lakh crore market capitalisation on June 3rd, 2021)

Published On - 5:49 pm, Thu, 3 June 21

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ