SBI customer alert: ಪ್ಯಾನ್ ಕಾರ್ಡ್- ಆಧಾರ್ ಕಾರ್ಡ್ ಜೂನ್ 30ರೊಳಗೆ ಲಿಂಕ್ ಆಗದಿದ್ದರೆ ಬ್ಯಾಂಕಿಂಗ್ ಸೇವೆಗಳು ಸಿಗಲ್ಲ

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದಿಂದ ಗ್ರಾಹಕರಿಗೆ ಅಲರ್ಟ್ ನೀಡಿದ್ದು, ಜೂನ್ 30, 2021ರೊಳಗೆ ಪ್ಯಾನ್ ಕಾರ್ಡ್ ಜತೆಗೆ ಆಧಾರ್ ಜೋಡಣೆ ಆಗದಿದ್ದಲ್ಲಿ ಬ್ಯಾಂಕಿಂಗ್ ಸೇವೆ ದೊರೆಯುವುದರಲ್ಲಿ ವ್ಯತ್ಯಯ ಆಗಲಿದೆ ಎಂದು ತಿಳಿಸಲಾಗಿದೆ.

SBI customer alert: ಪ್ಯಾನ್ ಕಾರ್ಡ್- ಆಧಾರ್ ಕಾರ್ಡ್ ಜೂನ್ 30ರೊಳಗೆ ಲಿಂಕ್ ಆಗದಿದ್ದರೆ ಬ್ಯಾಂಕಿಂಗ್ ಸೇವೆಗಳು ಸಿಗಲ್ಲ
ಸಾಂದರ್ಭಿಕ ಚಿತ್ರ

ಬ್ಯಾಂಕ್​ ವ್ಯವಹಾರಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ಇದು. ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಈ ಮಾಹಿತಿಯನ್ನು ಗ್ರಾಹಕರ ಜತೆಗೆ ಹಂಚಿಕೊಂಡಿದೆ. ಅದೇನು ಅಂದರೆ, ಯಾರು ಜೂನ್ 30, 2021ರೊಳಗೆ ಈ ನಿಯಮವನ್ನು ಪೂರ್ಣಗೊಳಿಸುವುದಿಲ್ಲವೋ ಅಂಥವರ ಬ್ಯಾಂಕಿಂಗ್ ಚಟುವಟಿಕೆ ಮೇಲೆ ಪರಿಣಾಮ ಆಗುತ್ತದೆ. ಪ್ಯಾನ್ ಅನ್ನು ಆಧಾರ್ ಜತೆಗೆ ಜೂನ್ 30ನೇ ತಾರೀಕಿನೊಳಗೆ ಜೋಡಣೆ ಮಾಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ತಿಳಿಸಿದೆ. ಆ ಮೂಲಕ ಭವಿಚ್ಯದಲ್ಲಿ ಯಾವುದೇ ಅನನುಕೂಲ ಆಗದಂತೆ ತಡೆಯಬಹುದು ಎಂದು ತಿಳಿಸಲಾಗಿದೆ. ಪ್ರತಿಯೊಬ್ಬರು ಪ್ಯಾನ್- ಆಧಾರ್ ಜೋಡಣೆ ಮಾಡಲೇಬೇಕು. ಯಾವುದೇ ಅಡೆತಡೆ ಇಲ್ಲದೆ ಬ್ಯಾಂಕಿಂಗ್ ಸೇವೆಗಳು ದೊರೆಯಬೇಕು ಎಂದಾದಲ್ಲಿ ಆಧಾರ್ ಜತೆ ಪ್ಯಾನ್ ಜೋಡಣೆ ಮಾಡುವಂತೆ ಬ್ಯಾಂಕ್ ತಿಳಿಸಿದೆ.

ಯಾವುದೇ ಸಮಸ್ಯೆ ಆಗಬಾರದು ಹಾಗೂ ಜತೆಗೆ ಆರಾಮದಾಯಕ ಬ್ಯಾಂಕಿಂಗ್ ಸೇವೆಗಳನ್ನು ಪಡೆಯುವುದಕ್ಕಾಗಿ ತಮ್ಮ ಪ್ಯಾನ್ ಜತೆಗೆ ಆಧಾರ್ ಜೋಡಣೆ ಮಾಡುವಂತೆ ನಮ್ಮ ಗ್ರಾಹಕರಿಗೆ ಸಲಹೆ ಮಾಡುತ್ತೇವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟ್ವೀಟ್ ಮಾಡಿದೆ. ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೋಡಣೆಗೆ ಜೂನ್ 30, 2021 ಕೊನೆ ದಿನವಾಗಿದೆ. ಒಂದು ವೇಳೆ ಈ ದಿನವನ್ನು ಮೀರಿದರೆ ವಿಳಂಬ ಶುಲ್ಕ ಕೂಡ ಪಾವತಿಸಬೇಕಾಗಬಹುದು. ಈ ಹಿಂದೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಜೋಡಣೆಗೆ ಮಾರ್ಚ್ 31, 2021 ಅಂತಿಮ ಗಡುವಾಗಿತ್ತು. ಆ ನಂತರ ಸಿಬಿಡಿಟಿಯಿಂದ ಗಡುವನ್ನು ಜೂನ್ 30ರ ತನಕ ವಿಸ್ತರಿಸಲಾಯಿತು.

ಪ್ಯಾನ್ ಕಾರ್ಡ್​ದಾರರು ಜೂನ್ 30ರೊಳಗೆ ಆಧಾರ್​ಗೆ ಜೋಡಣೆ ಮಾಡದಿದ್ದಲ್ಲಿ ಪ್ಯಾನ್​ ಕಾರ್ಡ್ ಕಾರ್ಯ ನಿರ್ವಹಿಸುವುದಿಲ್ಲ. ಅಷ್ಟೇ ಅಲ್ಲ, 1000 ರೂಪಾಯಿ ದಂಡ ಕೂಡ ಹಾಕಲಾಗುತ್ತದೆ. ಈ ನಿರ್ದಿಷ್ಟ ಮೊತ್ತವನ್ನು ಸರ್ಕಾರ ನಿರ್ಧರಿಸುತ್ತದೆ. ಆದರೆ ಆ ಮೊತ್ತವು ರೂ. 1000 ದಾಟುವಂತಿಲ್ಲ. ಅಂದಹಾಗೆ ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಎಂಬುದು 10 ಅಂಕಿಯ ವಿಶಿಷ್ಟ ಅಲ್ಫಾನ್ಯೂಮರಿಕ್ ಸಂಖ್ಯೆಯಾಗಿದೆ. ಇದನ್ನು ಆದಾಯ ತೆರಿಗೆ ಇಲಾಖೆಯಿಂದ ವಿತರಿಸಲಾಗುತ್ತದೆ. ಲ್ಯಾಮಿನೇಟ್ ಆಗಿರುವ ಪ್ಲಾಸ್ಟಿಕ್ ಕಾರ್ಡ್ ಜನಪ್ರಿಯವಾಗಿ ಪ್ಯಾನ್ ಕಾರ್ಡ್ ಎಂಬ ಹೆಸರು ಪಡೆದಿದ್ದು, ಇದು ಬಹಳ ಮುಖ್ಯವಾದ ಹಣಕಾಸು ದಾಖಲೆಯಾಗಿದೆ.

ಇದನ್ನೂ ಓದಿ: ಡಿಜಿಟಲ್​ ಪೇಮೆಂಟ್​ನಲ್ಲಿ ಕ್ಯೂಆರ್​ ಕೋಡ್​ ಸ್ಕ್ಯಾನ್ ಮಾಡಲೇಬೇಡಿ; ಗ್ರಾಹಕರನ್ನು ಎಚ್ಚರಿಸಿದ ಎಸ್​ಬಿಐ

ಇದನ್ನೂ ಓದಿ: SBI KYC: ಆನ್​ಲೈನ್​ನಲ್ಲಿ ಎಸ್​ಬಿಐ ಕೆವೈಸಿ ಅಪ್​ಡೇಟ್​ ಮಾಡಲು ಆಗದಿದ್ದಲ್ಲಿ ದೂರು ಸಲ್ಲಿಸುವುದು ಹೇಗೆ?

(SBI alert it’s customers regarding PAN car link with Aadhaar within June 30, 2021. Otherwise possibility of penalty of up to Rs 1000 and PAN card will become inoperative)

Read Full Article

Click on your DTH Provider to Add TV9 Kannada