SBI KYC: ಆನ್​ಲೈನ್​ನಲ್ಲಿ ಎಸ್​ಬಿಐ ಕೆವೈಸಿ ಅಪ್​ಡೇಟ್​ ಮಾಡಲು ಆಗದಿದ್ದಲ್ಲಿ ದೂರು ಸಲ್ಲಿಸುವುದು ಹೇಗೆ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಕೆವೈಸಿ ನಿಯಮಾವಳಿಗಳ ಅಪ್​ಡೇಟ್​ಗೆ ನೋಂದಾಯಿತ ಇಮೇಲ್ ಐಡಿ ಅಥವಾ ಪೋಸ್ಟ್ ಮೂಲಕ ಮಾಡಲು ಅವಕಾಶ ನೀಡಲಾಗಿದೆ.

SBI KYC: ಆನ್​ಲೈನ್​ನಲ್ಲಿ ಎಸ್​ಬಿಐ ಕೆವೈಸಿ ಅಪ್​ಡೇಟ್​ ಮಾಡಲು ಆಗದಿದ್ದಲ್ಲಿ ದೂರು ಸಲ್ಲಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 10, 2021 | 5:31 PM

ಭಾರತದಲ್ಲಿ ಕೋವಿಡ್- 19 ಪರಿಸ್ಥಿತಿ ತೀವ್ರವಾಗಿರುವುದರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ನಿಂದ ಕೆವೈಸಿ (ನೋ ಯುವರ್ ಕಸ್ಟಮರ್) ದಾಖಲಾತಿಯನ್ನು ಪೋಸ್ಟ್ ಅಥವಾ ನೋಂದಾಯಿತ ಇ-ಮೇಲ್ ಐ.ಡಿ. ಮೂಲಕ ಸಲ್ಲಿಸುವಂತೆ ಗ್ರಾಹಕರಿಗೆ ತಿಳಿಸಲಾಗಿದೆ. ಕೆವೈಸಿ ಮಾಹಿತಿಯನ್ನು ಅಪ್​ಡೇಟ್ ಮಾಡುವುದಕ್ಕೋಸ್ಕರ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು ಅಂತೇನಿಲ್ಲ ಎಂದು ಎಸ್​ಬಿಐ ಈ ಹಿಂದೆಯೇ ತಿಳಿಸಿದೆ. ಆನ್​ಲೈನ್​ನಲ್ಲಿ ಕೆವೈಸಿ ಮಾಹಿತಿಯನ್ನು ಅಪ್​ಡೇಟ್ ಮಾಡುವುದಕ್ಕೆ ಪಾಸ್​ಪೋರ್ಟ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ನರೇಗಾ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಈ ಪೈಕಿ ಯಾವುದಾದರೂ ಒಂದು ದಾಖಲಾತಿಯನ್ನು ಸಲ್ಲಿಸುವಂತೆ ತಿಳಿಸಿದೆ.

ಇನ್ನು ಶಾಖೆಯ ಮೇಲ್ ಐ.ಡಿ.ಗೆ ಗ್ರಾಹಕರು ತಮ್ಮ ನೋಂದಾಯಿತ ಇಮೇಲ್ ಐ.ಡಿ.ಯಿಂದ ದಾಖಲಾತಿಗಳನ್ನು ಕಳುಹಿಸಬಹುದು. “ಒಂದು ವೇಳೆ ನಿಮ್ಮ ಕೆವೈಸಿ ಅಪ್​ಡೇಷನ್ ಬಾಕಿ ಇದ್ದಲ್ಲಿ ಕೆವೈಸಿ ದಾಖಲಾತಿಗಳನ್ನು ಸ್ಕ್ಯಾನ್​ ಮಾಡಿ, ಶಾಖೆಯ ಮೇಲ್ ಐಡಿಗೆ ಕಳುಹಿಸಬಹುದು. ಗಮನದಲ್ಲಿರಲಿ, ಬ್ಯಾಂಕ್​ ಖಾತೆಯ ಜತೆಗೆ ನೋಂದಾಯಿಸಲಾದ ಇ-ಮೇಲ್ ಐ.ಡಿ.ಯಿಂದ ಮಾತ್ರ ಇಮೇಲ್ ಕಳುಹಿಸಿ,” ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟ್ವೀಟ್ ಮಾಡಿದೆ.

ಯಾವ ಗ್ರಾಹಕರಿಗೆ ತಮ್ಮ ಕೆವೈಸಿ ಮಾಹಿತಿ ಅಪ್​ಡೇಟ್ ಮಾಡುವುದಕ್ಕೆ ಸಮಸ್ಯೆ ಆಗುತ್ತಿದೆಯೋ ಅಂಥವರು crcf.sbi.co.in/ccf/ ಇಲ್ಲಿ ದೂರು ನೋಂದಾಯಿಸಬಹುದು. ಇನ್ನು ಎಸ್​ಬಿಐ ಹೆಲ್ಪ್​ಲೈನ್ ನಂಬರ್ 1800112211 (ಟೋಲ್-ಫ್ರೀ), 18004253800 (ಟೋಲ್-ಫ್ರೀ) ಅಥವಾ ಬೆಳಗ್ಗೆ 8ರಿಂದ ರಾತ್ರಿ 8ರ ಮಧ್ಯೆ 080-26599990ನಲ್ಲಿ ದೂರು ನೋಂದಾಯಿಸಬಹುದು.

10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಲ್ಲಿ ಯಾರು ಖಾತೆಯನ್ನು ನಿರ್ವಹಿಸುತ್ತಾರೋ ಅವರು ಬ್ಯಾಂಕ್​ಗೆ ಐ.ಡಿ. ಪುರಾವೆ ನೀಡಬೇಕು. ತಾವೇ ಖಾತೆ ನಿರ್ವಹಿಸುವ ಅಪ್ರಾಪ್ತರು ಯಾವುದಾದರೂ ಐ.ಡಿ. ಮತ್ತು ವಿಳಾಸ ದೃಢೀಕರಣ ನೀಡಬೇಕು. ಎನ್​ಆರ್​ಐಗಳು (ಅನಿವಾಸಿ ಭಾರತೀಯರು) ಪಾಸ್​ಪೋರ್ಟ್ ಅಥವಾ ರೆಸಿಡೆನ್ಸ್ ವೀಸಾದ ನಕಲು ನೀಡಬೇಕು. ರೆಸಿಡೆನ್ಸ್ ವೀಸಾದ ನಕಲಿಗೆ ವಿದೇಶೀ ಕಚೇರಿಯಲ್ಲಿ, ನೋಟರಿ, ಭಾರತ ರಾಯಭಾರ ಕಚೇರಿ ಸಹಿ ಆಗಿರಬೇಕು. ಆಯಾ ಬ್ಯಾಂಕಿನ ಅಧಿಕಾರಿಗಳು ಅಧಿಕೃತವಾಗಿ ಎಸ್​ಬಿಐ ಶಾಖೆಯಲ್ಲಿ ಸಹಿಯನ್ನು ಪರಿಶೀಲನೆ ಮಾಡುತ್ತಾರೆ.

ಯಾವ ಗ್ರಾಹಕರು ಕೆವೈಸಿ ಸಲ್ಲಿಸಲು ಸಾಧ್ಯವಾಗುವುದಿಲ್ಲವೋ ಅಂಥವರ ಮೇಲೆ ಯಾವುದೇ ಕಠಿಣ ಕ್ರಮ ಕೈಗೊಳ್ಳಬೇಡಿ ಎಂದು ಬ್ಯಾಂಕ್​ಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶನ ನೀಡಿದೆ. “ಭಾರತದ ಹಣಕಾಸು ವ್ಯವಸ್ಥೆಯಲ್ಲಿ ಡಿಜಿಟೈಸೇಷನ್ ಕಡೆಗೆ, ಅದರಲ್ಲೂ ನಿಯೋ ಬ್ಯಾಂಕಿಂಗ್ ಕಡೆಗೆ ಅತಿ ದೊಡ್ಡ ಹೆಜ್ಜೆ ಇದು. ಭೌತಿಕವಾದ ಕೆವೈಸಿ ಅಗತ್ಯಗಳ ಕಾರಣಕ್ಕೆ ನಾನಾ ತಿಕ್ಕಾಟಗಳು ಇದ್ದವು ಮತ್ತು ಈಗಿನ ವ್ಯವಸ್ಥೆಯೊಂದಿಗೆ ಶೀಘ್ರವಾದ, ಕಾಗದರಹಿತವಾದ 5 ನಿಮಿಷದ ಪ್ರಕ್ರಿಯೆ ಆಗಲಿದೆ,” ಎಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತಿ ಮುಖ್ಯ ಹುದ್ದೆಯಲ್ಲಿ ಇರುವವರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Shaktikanta Das Speech: ಕೊರೊನಾ ಲಸಿಕೆ ತಯಾರಕರು, ವೈದ್ಯಕೀಯ ಸೌಲಭ್ಯಕ್ಕಾಗಿ ಸಾಲ ನೀಡಲು 50 ಸಾವಿರ ಕೋಟಿ ರೂ.

(How to complain about SBI KYC online update issue? Here is the details)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್