AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GOQiiನಿಂದ ಫಿಟ್​ನೆಸ್​ ಟ್ರ್ಯಾಕರ್ Vital 4​ ಭಾರತದಲ್ಲಿ ಬಿಡುಗಡೆ; ಬೆಲೆ 4999 ರೂಪಾಯಿ, ಏನೇನಿದೆ ವೈಶಿಷ್ಟ್ಯ?

GOQii ​Vital 4 ಭಾರತದಲ್ಲಿ ಬಿಡುಗಡೆ ಆಗಿದ್ದು, ಇದರ ಬೆಲೆ ರೂ. 4999. ಇದೊಂದು ಫಿಟ್​ನೆಸ್​ ಟ್ರ್ಯಾಕರ್ ವಾಚ್. ಏನೆಲ್ಲ ಫೀಚರ್​ ಇದೆ, ಡಿಸೈನ್​ ಹೇಗಿದೆ ಎಂಬುದನ್ನು ತಿಳಿಯಿರಿ.

GOQiiನಿಂದ ಫಿಟ್​ನೆಸ್​ ಟ್ರ್ಯಾಕರ್ Vital 4​ ಭಾರತದಲ್ಲಿ ಬಿಡುಗಡೆ; ಬೆಲೆ 4999 ರೂಪಾಯಿ, ಏನೇನಿದೆ ವೈಶಿಷ್ಟ್ಯ?
ಪ್ರಾತಿನಿಧಿಕ ಚಿತ್ರ (ಚಿತ್ರ ಕೃಪೆ: https://store.goqii.com)
Srinivas Mata
| Updated By: Digi Tech Desk|

Updated on:May 11, 2021 | 9:07 AM

Share

ಭಾರತದಲ್ಲಿ GOQiiನಿಂದ ಫಿಟ್​ನೆಸ್​ ಟ್ರ್ಯಾಕರ್ Vital 4​ ಅನ್ನು ಪರಿಚಯಿಸಲಾಗಿದೆ. ಇದರಲ್ಲಿ SPO2, ರಕ್ತದೊತ್ತಡ ಮತ್ತು ಹೃದಯ ಬಡಿತದ ನಿಗಾ ಮಾಡುವುದು ಸೇರಿದಂತೆ ಇತರ ಫೀಚರ್​ಗಳಿವೆ. ಇನ್ನು ಈ ಫಿಟ್​ನೆಸ್​ ಟ್ರ್ಯಾಕರ್ IP68 ದೂಳು ಮತ್ತು ವಾಟರ್ ರೆಸಿಸ್ಟೆನ್ಸ್​ನೊಂದಿಗೆ ಬರುತ್ತದೆ. ಇದರ ಜತೆಗೆ ಏಳು ದಿನಗಳ ಬ್ಯಾಟರಿ ಲೈಫ್ ಕೂಡ ಇರುತ್ತದೆ. GOQiiನ Vital 4​ ರಚನೆಯು ಅದರ ಹಿಂದಿನದ್ದರಂತೆಯೇ ಇರಲಿದೆ. ಈ ಫಿಟನೆಸ್​ ಟ್ರ್ಯಾಕರ್​ನ ವೈಶಿಷ್ಟ್ಯದ ವಿಚಾರಕ್ಕೆ ಬಂದರೆ, ಆಯತಾಕಾರದ OLED ಡಿಸ್​ಪ್ಲೇ 120X120 ಪಿಕ್ಸೆಲ್ ಹೊಂದಿದೆ. ಈ ಸಾಧನದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹಲವು ವೈಶಿಷ್ಟ್ಯಗಳಿವೆ. ಹೃದಯ ಬಡಿತ, ರಕ್ತದೊತ್ತಡ, ಆಮ್ಲಜನಕದ ಮಟ್ಟ, ದೇಹದ ಉಷ್ಣಾಂಶ, ನಿದ್ದೆಯ ಪ್ರಮಾಣ ಇತ್ಯಾದಿಗಳನ್ನು ನಿಗಾ ಮಾಡುತ್ತದೆ.

ಇದರ ಜತೆಗೆ ನಡಿಗೆ, ಓಟ, ವರ್ಕೌಟ್, ಸೈಕ್ಲಿಂಗ್, ವಾಲಿಬಾಲ್, ಟೆನಿಸ್, ಟೇಬಲ್ ಟೆನಿಸ್, ಡ್ಯಾನ್ಸ್, ಬ್ಯಾಸ್ಕೆಟ್ ಬಾಲ್, ಕ್ರಿಕೆಟ್, ಯೋಗ, ವಿರಾಮ, ಸಿಟ್​ ಅಪ್ಸ್, ಸಾಕರ್, ಕ್ಲೈಂಬಿಂಗ್, ಏರೋಬಿಕ್ಸ್, ಜಂಪಿಂಗ್ ರೋಪ್ಸ್ ಇಂಥದ್ದೆಲ್ಲವನ್ನೂ ಟ್ರ್ಯಾಕ್ ಮಾಡುತ್ತದೆ. ಇನ್ನೂ ಹೆಚ್ಚಾಗಿ ಫೋನ್ ಹುಡುಕುವುದು, ಸಂಗೀತ ಹುಡುಕುವುದು, ಮತ್ತು ಮೆಸೇಜ್​ಗಳು, ಕರೆಗಳು, ಚಾಟ್​ ಅಪ್ಲಿಕೇಷನ್​ಗಳ ಕರೆಗಳ ನೋಟಿಫಿಕೇಷನ್​ಗಳನ್ನು Vital 4 ಹೊಂದಿದೆ.

GOQii 7 ದಿನಗಳ ತನಕ ಬ್ಯಾಟರಿ ಬರುತ್ತದೆ ಎಂದು ಹೇಳಿಕೊಂಡಿದೆ. ಎಲ್ಲ ಫಂಕ್ಷನ್​ಗಳನ್ನೂ ಬಳಕೆ ಮಾಡಿದಲ್ಲಿ ಮೂರರಿಂದ ನಾಲ್ಕು ದಿನಗಳ ಕಾಲ ಬರುತ್ತದೆ. ನಿರಂತರ ಹೃದಯ ಬಡಿತ ಮತ್ತು ಉಷ್ಣಾಂಶ ನಿಗಾ ಮಾಡುವ ಫೀಚರ್ ಸ್ವಿಚ್ಚ್ ಆಫ್ ಮಾಡಿದಲ್ಲಿ ಏಳರಿಂದ ಎಂಟು ದಿನಗಳ ಕಾಲ ಬರುತ್ತದೆ. GOQii Vital 4 ಸಾಧನವು GOQii ಆನ್​ಲೈನ್ ಸ್ಟೋರ್​ನಲ್ಲಿ ಮತ್ತು ಅಮೆಜಾನ್​ನಲ್ಲಿ ಲಭ್ಯ ಇದೆ. ಬೆಲೆ 4999 ರೂಪಾಯಿ. ಕಪ್ಪು, ನೇರಳೆ ಹಾಗೂ ಕೆಂಪು ಹೀಗೆ ಮೂರು ಬಣ್ಣದ ಸ್ಟ್ರಾಪ್​ನೊಂದಿಗೆ ಬರುತ್ತದೆ.

5 ಸಾವಿರ ರೂಪಾಯಿಯೊಳಗೆ ಫಿಟ್​ನೆಸ್​ ಟ್ರ್ಯಾಕರ್ ಅಂತ ಹುಡುಕಿದರೆ Honor ವಾಚ್ ES, ಅಮೇಜ್​ಫಿಟ್ ಬಿಪ್ ಯು ಪ್ರೋ, ರಿಯಲ್​ಮಿ ವಾಚ್ ಎಸ್​, ನಾಯ್ಸ್ ಕಲರ್​ಫಿಟ್ ಪ್ರೋ 3 ಇನ್ನೂ ಸಾಕಷ್ಟಿವೆ. ಅಂಥದ್ದರಲ್ಲಿ GOQii ​Vital 4 ಅದರ ಪ್ರತಿಸ್ಪರ್ಧಿಗಳಿಗಿಂತ ಹೇಗೆ ಭಿನ್ನವಾಗಿ ನಿಲ್ಲುತ್ತದೆ ನೋಡಬೇಕಿದೆ.

ಇದನ್ನೂ ಓದಿ: RE modified interceptor 650: MIG- 21 ಅವತಾರದಲ್ಲಿ ರಾಯಲ್​ ಎನ್​ಫೀಲ್ಡ್ ಮಾಡಿಫೈಡ್ ಇಂಟರ್​ಸೆಪ್ಟರ್ 650 ಹೇಗಿದೆ?

(GOQii ​Vital 4 fitness tracker watch introduced in india. Price, specs, colour, design, availability and other details here)

Published On - 11:44 pm, Mon, 10 May 21

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ