RE modified interceptor 650: MIG- 21 ಅವತಾರದಲ್ಲಿ ರಾಯಲ್​ ಎನ್​ಫೀಲ್ಡ್ ಮಾಡಿಫೈಡ್ ಇಂಟರ್​ಸೆಪ್ಟರ್ 650 ಹೇಗಿದೆ?

ರಾಯಲ್ ಎನ್​ಫೀಲ್ಡ್ ಬೈಕ್ ಇಂಟರ್​ಸೆಪ್ಟರ್ 650 ಬೈಕ್​ ಅನ್ನು ಮಾರ್ಪಾಟು ಮಾಡಿ ಮಿಗ್ 21 ಯುದ್ಧ ವಿಮಾನದಿಂದ ಸ್ಫೂರ್ತಿಗೊಂಡು ಹೇಗೆ ರೂಪಿಸಲಾಗಿದೆ ನೋಡಿ.

RE modified interceptor 650: MIG- 21 ಅವತಾರದಲ್ಲಿ ರಾಯಲ್​ ಎನ್​ಫೀಲ್ಡ್ ಮಾಡಿಫೈಡ್ ಇಂಟರ್​ಸೆಪ್ಟರ್ 650 ಹೇಗಿದೆ?
ಇಂಟರ್​ಸೆಪ್ಟರ್ 650 ಮಾಡಿಫೈಡ್ ಬೈಕ್ (ಚಿತ್ರಕೃಪೆ: ಇಂಡಿಯನ್ ಆಟೋಸ್ ಬ್ಲಾಗ್)
Follow us
Srinivas Mata
|

Updated on:May 10, 2021 | 7:08 PM

ರಾಯಲ್​ ಎನ್​ಫೀಲ್ಡ್ ಬೈಕ್​ಗಳೆಂದರೆ ಭಾರತದಲ್ಲಿ ವಿಚಿತ್ರವಾದ ವ್ಯಾಮೋಹ ಇದೆ. ಭಾರತದ ರಸ್ತೆಗಳಲ್ಲಿ ಗುಡುಗುಡು ಎಂದು ಈ ಬೈಕ್ ಗಜ ಗಾಂಭೀರ್ಯದಿಂದ ಸಾಗುತ್ತಿದ್ದರೆ ಅತ್ತ ಒಮ್ಮೆ ತಿರುಗಿನೋಡಬೇಕು ಅಂತ ಯಾರಿಗೆ ಅನಿಸಲ್ಲ ಹೇಳಿ? ಅಂದಹಾಗೆ ರಾಯಲ್ ಎನ್​ಫೀಲ್ಡ್ ಪ್ರೇಮಿಗಳೆಂದರೆ ಅದರ ಮೂಲ ಸ್ವರೂಪದಲ್ಲೇ ಸಂತೃಪ್ತರಾಗ್ತಾರಾ? ತಮ್ಮ ಅಭಿರುಚಿ ಹಾಗೂ ಆದ್ಯತೆಗೆ ತಕ್ಕಂತೆ ಬದಲಾವಣೆಗಳನ್ನು ತಂದು, ಬೈಕ್​ಗೆ ಇನ್ನಷ್ಟು ಸಿಂಗಾರ- ಬಂಗಾರ ಮಾಡ್ತಾರೆ. ರಸ್ತೆಯಲ್ಲಿ ತಮ್ಮ ಬೈಕ್ ಹೋಗ್ತಿದ್ದರೆ ಉಳಿದ ಎಲ್ಲಕ್ಕಿಂತ ಡಿಫರೆಂಟು ಅನ್ನಿಸಿಕೊಳ್ಳುವ ಆಸೆ ಅವರದು. ಒಂದು ವೇಳೆ ನಿಮ್ಮ ಬಳಿಯೂ ರಾಯಲ್ ಎನ್​ಫೀಲ್ಡ್ ಬೈಕ್ ಇದ್ದು, ಅದನ್ನು ನಿಮಗೆ ಬೇಕಾದಂತೆ ಮಾರ್ಪಾಟು ಮಾಡಿಸಿಕೊಳ್ಳುವ ಉದ್ದೇಶ ಇದ್ದಲ್ಲಿ MIG- 21 ಡಿಸೈನ್​ನ ಈ ಇಂಟರ್​ಸೆಪ್ಟರ್ 650 ಬೈಕ್​ನ ನೋಡಲೇಬೇಕು.

ಬೆಂಗಳೂರು ಮೂಲದ “ಬುಲೆಟೀರ್ ಕಸ್ಟಮ್ಸ್” MIG- 21 ಯುದ್ಧವಿಮಾನದಿಂದ ಸ್ಫೂರ್ತಿಗೊಂಡು, ಇಂಟರ್​ಸೆಪ್ಟರ್ 650 ರೂಪಿಸಿದ್ದಾರೆ. ಮೊದಲ ನೋಟದಲ್ಲೇ ಈ ಬೈಕ್ ಮೇಲೆ ನಿಮಗೆ ಲವ್ ಆಗಿ, ಮಾರ್ಪಾಟಾದ ಆ ಡಿಸೈನ್​ ಅನ್ನು ಮೆಚ್ಚಿಕೊಳ್ಳದಿದ್ದಲ್ಲಿ ಹೇಳಿ. ಈ ರಚನೆ ಮಾಡಿದವರು ಬಹಳ ಚಂದದ ಕೆಲಸ ಮಾಡಿದ್ದಾರೆ. ಇಂಟರ್​ಸೆಪ್ಟರ್ 650ರ ಮೂಲ ಸ್ವರೂಪಕ್ಕೆ ಸರಿಯಾಗಿ ಹೊಂದಾಣಿಕೆ ಆಗುವಂತೆಯೇ ರೂಪುಗೊಳಿಸಲಾಗಿದೆ. ಇದರ ಮುಂಭಾಗದ ರಚನೆಯು ಮತ್ತಷ್ಟು ಸೌಂದರ್ಯ ಹಾಗೂ ಹಳೆಯ ಅನುಭೂತಿಯನ್ನೂ ನೀಡಿದೆ. ಹಳೆಯ ಮತ್ತು ಹೊಸ ಡಿಸೈನ್​ನ ಸರಿಯಾದ ಮಿಶ್ರಣದಂತಿದೆ ಈ ಬೈಕ್.

ಇನ್ನು ಬೈಕ್​ಗೆ ಬಳಸಿರುವ ಬಣ್ಣದ ಕಾಂಬಿನೇಷನ್ ಮತ್ತು MIG- 21 ರಚನೆಯ ಲೇಬಲ್​ಗಳಿಂದ ಒಮ್ಮೆ ಕಣ್ಣು ತಾನಾಗಿಯೇ ಅತ್ತ ಹೋಗುತ್ತದೆ. ಮಿಲಿಟರಿ ಹಸಿರು ಬಣ್ಣದ ಪೆಟ್ರೋಲ್ ಟ್ಯಾಂಕ್​ಗೆ IND ಲೇಬಲ್ ಇದೆ. MIG- 21 ಯುದ್ಧ ವಿಮಾನದ ಎಂಜಿನಿಯರಿಂಗ್ ಮತ್ತು ಅಂಶಗಳನ್ನು ಒಳಗೊಂಡ ಕಸ್ಟಮೈಸ್ಡ್ ಮೋಟಾರ್ ಬೈಕ್ ಇದು. ಹೊಸ ಹಾಗೂ ಹಳೆ ಅಭಿರುಚಿಯ ಸರಿಯಾದ ಮಿಶ್ರಣದಂತೆಯೂ ಇದು ಕಾಣುತ್ತದೆ. ಈ ಬೈಕ್​ನ ಎಂಜಿನ್​ ಮಷೀನ್​ಗೆ ಯಾವ ಬದಲಾವಣೆಯೂ ಮಾಡಿಲ್ಲ. ಮೂಲ 650cc ಏರ್/ಆಯಿಲ್ ಕೂಲ್ಡ್ ಎಂಜಿನ್ ಮೂಲಕ 47ಎಚ್​ಪಿ ಪವರ್ ಮತ್ತು 52 ಎನ್​ಎಂ ಗರಿಷ್ಠ ಟಾರ್ಕ್ ಜನರೇಟ್ ಮಾಡುತ್ತದೆ.

ಬೈಕ್ ಸ್ಟೈಲ್​ ಆಗಿ ಕಾಣಲಿ ಎಂಬ ಕಾರಣಕ್ಕೆ ಹೊಸ ಒಂದು ಜೊತೆ ಹೊಗೆ ಹೊರಹೋಗುವ ಎಕ್ಸಾಸ್ಟ್ ಹಾಕಲಾಗಿದೆ. ಇನ್ನು ವ್ಹೀಲ್ ಸೆಟ್ ಅಪ್ ಬಗ್ಗೆ ಹೇಳುವುದಾದರೆ, 18 ಇಂಚಿನ ವೈರ್ ಸ್ಪೋಕ್ ಯೂನಿಟ್​ ಅನ್ನು 17 ಇಂಚಿನ ಅಲಾಯ್ ಅಪೋಲೋ ಟೈರ್​ಗೆ ಬದಲಾಯಿಸಲಾಗಿದೆ. ಈ ಬೈಕ್​ ಅನ್ನು ಗರಿಷ್ಠ ವೇಗ ಗಂಟೆಗೆ 180 ಕಿಲೋಮೀಟರ್​ ತನಕ ಪರೀಕ್ಷಿಸಿರುವುದಾಗಿ ಡಿಸೈನರ್​ಗಳು ಹೇಳಿದ್ದಾರೆ. ಅಂದಹಾಗೆ ಮಾರ್ಪಾಟು ಮಾಡಿದ ಈ ಬೈಕ್​ಗೆ Fearless 650 ಎಂದು ಹೆಸರಿಡಲಾಗಿದೆ. ಈಗ ನಿಮಗೆ ಏನನ್ನಿಸ್ತಾ ಇದೆ?

ಇದನ್ನೂ ಓದಿ: Bajaj Auto CT110X Launch: ಬಜಾಜ್ ಆಟೋ CT110X ಹೊಸ ಬೈಕ್ ಬಿಡುಗಡೆ, ಬೆಲೆ ರೂ. 55,494

(Bengaluru based Bulleteer Customs modified Royal Enfield Interceptor 650 bike with inspiration of MIG 21 war plane)

Published On - 7:03 pm, Mon, 10 May 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್