WhatsApp: ವಾಟ್ಸಾಪ್ ಖಾಸಗಿತನದ ನೀತಿ ಒಪ್ಪಿಕೊಳ್ಳುವುದು ಅನಿವಾರ್ಯ ಆಗಲಿದೆ ಏಕೆ ಗೊತ್ತಾ?

WhatsApp New Privacy Policy: ವಾಟ್ಸಾಪ್ ಖಾಸಗಿತನದ ನೀತಿಯನ್ನು ಬಳಕೆದಾರರು ಮೇ 15ನೇ ತಾರೀಕಿನೊಳಗೆ ಒಪ್ಪದಿದ್ದಲ್ಲಿ ಖಾತೆ ಡಿಲೀಟ್​ ಆಗಲ್ಲ. ಕ್ರಮೇಣ ಫಂಕ್ಷನಾಲಿಟಿ ನಿಲ್ಲುತ್ತದೆ ಎಲ್ಲ ಫೀಚರ್​ ಬಳಸಲು ಆಗಲ್ಲ. ಕೆಲ ವಾರಗಳ ನಂತರ ಅಕೌಂಟ್ ಬಳಸಲು ಆಗಲ್ಲ.

WhatsApp: ವಾಟ್ಸಾಪ್ ಖಾಸಗಿತನದ ನೀತಿ ಒಪ್ಪಿಕೊಳ್ಳುವುದು ಅನಿವಾರ್ಯ ಆಗಲಿದೆ ಏಕೆ ಗೊತ್ತಾ?
ವಾಟ್ಸ್​ಆ್ಯಪ್ ಪ್ರಾತಿನಿಧಿಕ ಚಿತ್ರ
Follow us
Srinivas Mata
| Updated By: Digi Tech Desk

Updated on:May 11, 2021 | 6:16 PM

ಹೊಸ ಖಾಸಗಿತನ ನಿಯಮಗಳನ್ನು ಮೇ 15ನೇ ತಾರೀಕಿನೊಳಗೆ ಒಪ್ಪದಿದ್ದರೂ ಖಾತೆದಾರರ ಅಕೌಂಟ್ ಡಿಲೀಟ್ ಮಾಡುವುದಿಲ್ಲ ಎಂದು ಕೆಲ ದಿನಗಳ ಹಿಂದೆ ವಾಟ್ಸಾಪ್ ತಿಳಿಸಿತ್ತು. ಆದರೆ ವಾಟ್ಸಾಪ್ ಅಪ್ಲಿಕೇಷನ್ ಫೀಚರ್​ಗಳನ್ನು ಬಳಸಬೇಕು ಅಂದರೆ ಯಾವುದೋ ಒಂದು ಸಂದರ್ಭದಲ್ಲಾದರೂ ಇದನ್ನು ಒಪ್ಪಿಕೊಳ್ಳಲೇಬೇಕು ಎಂಬಂತೆ ಇದೆ ಈಗಿನ ಪರಿಸ್ಥಿತಿ. “ಪರಿಶೀಲನೆ ಮಾಡುವುದಕ್ಕೆ ಎಲ್ಲರಿಗೂ ಸಮಯ ನೀಡಿದ ಮೇಲೆ, ಯಾರಿಗೆ ಅದನ್ನು ಪರಿಶೀಲಿಸಲು ಮತ್ತು ಒಪ್ಪಿಗೆ ನೀಡಲು ಅವಕಾಶ ಸಿಕ್ಕಿಲ್ಲವೋ ಅಂಥವರಿಗೆ ನೆನಪು ಮಾಡಿಕೊಡುತ್ತೇವೆ,” ಎಂದು ಕಂಪೆನಿ ಹೇಳಿದೆ. ಇನ್ನು ವಾಟ್ಸಾಪ್​ ಬಳಕೆದಾರರಿಗೆ ಎಲ್ಲ ಫೀಚರ್​ಗಳು ಬೇಕೆಂದರೆ ಹೊಸ ಖಾಸಗಿ ನೀತಿಗಳನ್ನು ಒಪ್ಪಬೇಕಾಗುತ್ತದೆ.

ವಾಟ್ಸಾಪ್ ಹೊಸ ಖಾಸಗಿತನದ ನೀತಿಯನ್ನು ಏಕೆ ಒಪ್ಪಿಕೊಳ್ಳಬೇಕು? ಹೊಸ ಖಾಸಗಿತನದ ನೀತಿಯನ್ನು ಒಪ್ಪಿಕೊಳ್ಳದಿದ್ದಲ್ಲಿ ಎಲ್ಲ ಫಂಕ್ಷನಾಲಿಟಿಯು ತಕ್ಷಣವೇ ಪೂರ್ತಿಯಾಗಿ ನಿಲ್ಲುವುದಿಲ್ಲ. ಕ್ರಮೇಣವಾಗಿ ಕಂಪೆನಿಯು ಎಲ್ಲ ಫೀಚರ್​ಗಳನ್ನು ಡಿಸೇಬಲ್ ಮಾಡುತ್ತದೆ. ಹೊಸ ನೀತಿಯನ್ನು ಸ್ವೀಕರಿಸುವಂತೆ ವಾಟ್ಸಾಪ್ ನಿರಂತರರವಾಗಿ ನೆನಪಿಸುತ್ತದೆ. ಹಲವು ವಾರಗಳ ನಂತರವೂ ಯಾರು ಅದನ್ನು ಒಪ್ಪಿಕೊಳ್ಳುವುದಿಲ್ಲವೋ ಅಂಥವರಿಗೆ ವಾಟ್ಸಾಪ್ ಫಂಕ್ಷನಾಲಿಟಿ ಮಿತಿಗೊಳ್ಳುತ್ತದೆ. ವಾಟ್ಸಾಪ್​ನಿಂದ ನಿರಂತರವಾಗಿ ನೆನಪುಗಳನ್ನು ಕಳುಹಿಸುವುದಕ್ಕೆ ಆರಂಭಿಸಿದ ಮೇಲೆ, ಆ ನಂತರ ಅವರು ಅಪ್​ಡೇಟ್​ಗಳನ್ನು ಒಪ್ಪಿಕೊಳ್ಳುವ ತನಕ ವಾಟ್ಸಾಪ್​ ಫಂಕ್ಷನಾಲಿಟಿ ಮಿತಿ ಆಗಿರುತ್ತದೆ.

ಎಲ್ಲ ಬಳಕೆದಾರರಿಗೂ ಒಂದೇ ಸಲಕ್ಕೆ ಹೀಗೆ ಆಗುವುದಿಲ್ಲ ಎಂದು ವಾಟ್ಸಾಪ್ ಹೇಳಿದೆ. ವಾಟ್ಸಾಪ್ ಚಾಟ್​ ಲಿಸ್ಟ್ ಬಳಕೆ ಮಾಡಲು ಆಗಲ್ಲ. ಆದರೆ ಹೊರಬರುವ ಹಾಗೂ ಒಳಹೋಗುವ ಆಡಿಯೋ- ವಿಡಿಯೋ ಕಾಲ್ ಮಾಡುವ ಅವಕಾಶ ಇರುತ್ತದೆ. ಒಂದು ವೇಳೆ ನೋಟಿಫಿಕೇಷನ್ ಎನೇಬಲ್ ಆಗಿದ್ದಲ್ಲಿ ಸಂದೇಶವನ್ನು ಓದಲು ಅಥವಾ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ. ಸೀಮಿತ ಫಂಕ್ಷನಾಲಿಟಿ ಜತೆಗೆ ಕೆಲವು ವಾರಗಳ ನಂತರ ಕಳೆದ ಮೇಲೆ ಆಗಲೂ ಖಾಸಗಿತನ ನೀತಿಗೆ ಸಮ್ಮತಿ ಸೂಚಿಸದಿದ್ದಲ್ಲಿ ಒಳಬರುವ ಹಾಗೂ ಹೊರಹೋಗುವ ಕರೆ ಕೂಡ ಸಾಧ್ಯವಾಗುವುದಿಲ್ಲ. ವಾಟ್ಸಾಪ್ ಕೂಡ ಸಂದೇಶ ಕಳುಹಿಸುವುದು ನಿಲ್ಲಿಸುತ್ತದೆ ಮತ್ತು ಕರೆಯು ಸಹ ನಿಲ್ಲುತ್ತದೆ. ಆದ್ದರಿಂದ ವಾಟ್ಸಾಪ್ ಫೀಚರ್​ಗಳು ಎಲ್ಲವನ್ನೂ ಬಳಸಬೇಕು ಎಂದಿದ್ದಲ್ಲಿ ಅದರ ಖಾಸಗಿತನದ ನೀತಿಗೆ ಸಮ್ಮತಿಸಬೇಕು.

ಒಪ್ಪಿಕೊಳ್ಳದಿದ್ದವರ ಖಾತೆನ್ನೇನೂ ಡಿಲೀಟ್ ಮಾಡುವುದಿಲ್ಲ ಎಂದು ವಾಟ್ಸಾಪ್ ಹೇಳಿದೆ. ಆದರೆ ಯಾವುದೇ ಫೀಚರ್​ಗಳನ್ನು ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದಿದೆ. ಅಲ್ಲಿಗೆ ಖಾತೆ ಇದ್ದರೆಷ್ಟು, ಇಲ್ಲದಿದ್ದರೆಷ್ಟು? ಇದರ ಜತೆಗೆ ಮೆಸೇಜಿಂಗ್ ಆ್ಯಪ್ ಬಳಕೆ ಮಾಡದಿದ್ದಲ್ಲಿ ಖಾತೆ ಡಿಲೀಟ್ ಆಗಿಹೋಗುತ್ತದೆ. 120 ದಿನಗಳ ಕಾಲ ಖಾತೆಯನ್ನು ಬಳಸದಿದ್ದಲ್ಲಿ ವಾಟ್ಸಾಪ್ ಸಾಮಾನ್ಯವಾಗಿ ಡಿಲೀಟ್ ಮಾಡುತ್ತದೆ.

ಇದನ್ನೂ ಓದಿ: WhatsApp privacy policy: ವಾಟ್ಸಾಪ್ ಖಾಸಗಿತನ ನೀತಿಗೆ ಮೇ 15ರೊಳಗೆ ಸಮ್ಮತಿಸದಿದ್ದಲ್ಲಿ ಮುಂದೆ ಏನಾಗುತ್ತದೆ?

(Why WhatsApp new privacy policy must accept by users? Here are the reasons)

Published On - 4:39 pm, Tue, 11 May 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್