ಕೆಲ ಬಿಜೆಪಿ ನಾಯಕರು ಯಾಕೆ ಅತೃಪ್ತರೋ ಗೊತ್ತಿಲ್ಲ, ಸೈದ್ಧಾಂತಿಕವಾಗಿ ನಾವೆಲ್ಲ ತೃಪ್ತರು: ಸಿಟಿ ರವಿ, ಎಮ್ಮೆಲ್ಸಿ
ಕೇಂದ್ರ ಸಚಿವ ವಿ ಸೋಮಣ್ಣ ಮತ್ತು ಬಿಜೆಪಿಯ ಕೆಲ ಅತೃಪ್ತ ನಾಯಕರು ಸಭೆ ನಡೆಸಿರುವ ಬಗ್ಗೆ ಕೇಳಿ ಪ್ರಶ್ನೆಗೆ ರವಿ, ಅವರು ಯಾವ ಕಾರಣಕ್ಕೆ ಅತೃಪ್ತರೋ ಗೊತ್ತಿಲ್ಲ, ತಾವೆಲ್ಲ ಸೈದ್ಧಾಂತಿಕ ಕಾರಣಕ್ಕೆ ಬಿಜೆಪಿಯಲ್ಲಿರೋದು, ವೈಯಕ್ತಿಕವಾಗಿ ತನಗೆ ಯಾವುದೇ ಅತೃಪ್ತಿ ಇಲ್ಲ, ಸೈದ್ಧಾಂತಿಕವಾಗಿ ತಾನು ತೃಪ್ತ ಎಂದು ಹೇಳಿದರು.
ಶಿವಮೊಗ್ಗ, ಜುಲೈ 7: ಬಿಜೆಪಿ ರಾಜ್ಯಾಧ್ಯಕ್ಷ (BJP state president) ಯಾರಾಗುತ್ತಾರೆ ಅಂತ ನನಗೆ ಗೊತ್ತಿಲ್ಲ, ಅಧ್ಯಕ್ಷನನ್ನು ಆರಿಸಲು ಪಕ್ಷವಿದೆ, ಪಕ್ಷದ ಸಂಸದೀಯ ಸಮಿತಿ ಇದೆ, ವರಿಷ್ಠರು ಸ್ಥಳೀಯ ಮುಖಂಡರಿಂದ ಮತ್ತು ಕಾರ್ಯಕರ್ತರಿಂದ ಫೀಡ್ಬ್ಯಾಕ್ ತೆಗೆದುಕೊಂಡು ಸೂಕ್ತವಾದ ನಾಯಕನನ್ನು ರಾಜ್ಯಾಧ್ಯಕ್ಷನಾಗಿ ಆರಿಸುತ್ತಾರೆ ಎಂದು ಎಮ್ಮೆಲ್ಸಿ ಸಿಟಿ ರವಿ ಹೇಳಿದರು. ಪಕ್ಷದ ಅಧ್ಯಕ್ಷ ಸ್ಥಾನ ಅನ್ನೋದು ಅಧಿಕಾರ ಅಲ್ಲ, ಅದೊಂದು ಜವಾಬ್ದಾರಿ, ಯಾರ ಹೆಗಲಿಗೆ ಜವಾಬ್ದಾರಿ ಹೊರೆಸಿದರೆ ಪಕ್ಷಕ್ಕೆ ಸಂಘಟನಾತ್ಮಕವಾಗಿ ಹೆಚ್ಚು ಪ್ರಯೋಜನವಾಗುತ್ತದೆ ಅನ್ನೋದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ, ಇದು ಸಾರ್ವಜನಿಕ ಚರ್ಚೆಯ ವಿಷಯವಲ್ಲ ಎಂದು ರವಿ ಹೇಳಿದರು.
ಇದನ್ನೂ ಓದಿ: ಸಂವಿಧಾನ ಪೀಠಿಕೆ: ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ರಲ್ಲಿ ತಪ್ಪೇನಿದೆ? ಸಿಟಿ ರವಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

