ನಮ್ಮಿಂದಾಗಿ ಬಿಜೆಪಿ ರಾಜ್ಯಾಧ್ಯಕ್ಷನ ಚುನಾವಣೆ ವಿಳಂಬವಾಗುತ್ತಿಲ್ಲ: ಅರವಿಂದ ಲಿಂಬಾವಳಿ
ತಾನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿಲ್ಲ ಎಂದು ಅರವಿಂದ ಲಿಂಬಾವಳಿ ಹೇಳಿದರು. ಯಡಿಯೂರಪ್ಪ ಮತ್ತು ಸಿದ್ದೇಶ್ವರ ಅವರು ಒಡಹುಟ್ಟಿದವರಂತಿದ್ದಾರೆ, ಕಷ್ಟಕಾಲದಲ್ಲಿ ಪರಸ್ಪರ ನೆರವಿಗೆ ಧಾವಿಸಿದ್ದಾರೆ, ಇಬ್ಬರ ನಡುವೆ ಆ ಪ್ರಮಾಣದ ಅನ್ಯೋನ್ಯತೆ ಇದ್ದಾಗ್ಯೂ ಸಿದ್ದೇಶ್ವರ ಬರ್ತ್ಡೇ ಆಚರಣೆಗೆ ಯಡಿಯೂರಪ್ಪ ಬಾರದೇ ಹೋಗಿದ್ದು ಅಕ್ಷಮ್ಯ ಅಪರಾಧ ಅಂತಷ್ಟೇ ಹೇಳಿದ್ದು ಅಂತ ಲಿಂಬಾವಳಿ ಹೇಳಿದರು.
ದಾವಣಗೆರೆ, ಜುಲೈ 8: ಬಿಜೆಪಿ ರಾಜ್ಯಾಧ್ಯಕ್ಷನ ಚುನಾವಣೆಗೆ ವಿಳಂಬವೇನೂ ಆಗಿಲ್ಲ, ಮೂರು ರಾಜ್ಯಗಳಿಗೆ ಬಿಜೆಪಿ ಅಧ್ಯಕ್ಷನನ್ನು ಅಯ್ಕೆ ಮಾಡುವುದಿದೆ, ಅವುಗಳಲ್ಲಿ ಕರ್ನಾಟಕವೂ ಒಂದು ಎಂದು ಹಿರಿಯ ಬಿಜೆಪಿ ನಾಯ ಅರವಿಂದ ಲಿಂಬಾವಳಿ ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ನ ಚುನಾವಣೆ (BJP state president election) ಕ್ರಮಬದ್ಧವಾಗಿ ನಡೆಯುತ್ತದೆ, ಪಕ್ಷದ್ದೇ ಆದ ಸಂವಿಧಾನವಿದೆ ಮತ್ತು ಚುನಾವಣೆಗೆ ಸಂಬಂಧಿಸಿದ ನೀತಿ ಸಂಹಿತೆ ಕೂಡ ಇದೆ. ತಮ್ಮ ಬಣದಿಂದಾಗಿ ಚುನಾವಣೆ ವಿಳಂಬಗೊಂಡಿದೆ ಅನ್ನೋದು ಸುಳ್ಳು, ಯಾವ ಬಣವೂ ಇಲ್ಲ ಎಂಥದ್ದೂ ಇಲ್ಲ ಎಂದು ಲಿಂಬಾವಳಿ ಹೇಳಿದರು. ಬಿಜೆಪಿಯ ರೆಬೆಲ್ ಶಾಸಕರು ಇವತ್ತು ಹಿರಿಯ ಬಿಜೆಪಿ ನಾಯಕ ಜಿಎಂ ಸಿದ್ದೇಶ್ವರ ಹುಟ್ಟಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾಯಿಸಿ: ಜೆಪಿ ನಡ್ಡಾಗೆ ಅರವಿಂದ ಲಿಂಬಾವಳಿ ಮನವಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

