AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಮುಂದೆಯೇ ಯಡಿಯೂರಪ್ಪರನ್ನು ಟೀಕಿಸಿದ ಬಿಜೆಪಿ ನಾಯಕ ಅರವಿಂದ ಲಿಂಬಾವಳಿ

ಸಿದ್ದರಾಮಯ್ಯ ಮುಂದೆಯೇ ಯಡಿಯೂರಪ್ಪರನ್ನು ಟೀಕಿಸಿದ ಬಿಜೆಪಿ ನಾಯಕ ಅರವಿಂದ ಲಿಂಬಾವಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 21, 2025 | 7:41 PM

ಹಿಂದಿನ ಸರ್ಕಾರದ ತಪ್ಪು ಅಂತ ಲಿಂಬಾವಳಿ ಹೇಳಿದಾಗ ಅವರ ಮುಂದೆ ನಿಂತಿದ್ದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮುಖದಲ್ಲಿ ದೊಡ್ಡ ಗೆಲುವಿನ ನಗೆ. ತಪ್ಪು ಯಾರದ್ದಾದರೂ ಇರಲಿ, ಮಳೆಯಿಂದ-ಪೀಡಿತ ಜನರ ಮುಂದೆ ಬೇರೆ ಸರ್ಕಾರದ ತಪ್ಪುಗಳನ್ನು ಎಣಿಸುತ್ತಾ ನಿಂತರೆ ನಗರದಾದ್ಯಂತ ಉದ್ಭವಿಸಿರುವ ಸಮಸ್ಯೆಗಳಿಗೆ ಪರಿಹಾರ ಸಿಕ್ಕೀತೇ? ಜನ ಸರ್ಕಾರದಿಂದ ಶಾಶ್ವತ ಪರಿಹಾರಗಳನ್ನು ನಿರೀಕ್ಷಿಸುತ್ತಿದ್ದಾರೆ.

ಬೆಂಗಳೂರು, ಮೇ 21: ಮಾಜಿ ಶಾಸಕ ಅರವಿಂದ ಲಿಂಬಾವಳಿ ಅವರು ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಬಣದಲ್ಲಿದ್ದವರು ಅಂತ ಕನ್ನಡಿಗರಿಗೆಲ್ಲ ಗೊತ್ತು. ಯತ್ನಾಳ್ ಬಣದಲ್ಲಿ ಗುರುತಿಸಿಕೊಳ್ಳಲು ಇದ್ದ ಮಾನದಂಡ ಅಥವಾ ಅರ್ಹತೆ ಎಂದರೆ ಬಿಎಸ್ ಯಡಿಯೂರಪ್ಪನವರ ವಿರೋಧಿಯಾಗಿರಬೇಕು ಮತ್ತು ವಿಜಯೇಂದ್ರರನ್ನು ಸಾರ್ವಜನಿಕವಾಗಿ ಟೀಕಿಸಬೇಕು. ಲಿಂಬಾವಳಿ ಎರಡನೇಯದನ್ನು ಮಾಡುತ್ತಿದ್ದಿದ್ದು ಅಪರೂಪ ಆದರೆ ಯಡಿಯೂರಪ್ಪರನ್ನು ಟೀಕಿಸುವ ಕೆಲಸ ಕಾಂಗ್ರೆಸ್ ನಾಯಕರ ಮುಂದೆಯೂ ಮಾಡುತ್ತಿದ್ದಾರೆ. ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳನ್ನು ಪರಿಶೀಲಿಸುತ್ತಾ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಪಟಾಲಂ ಅರವಿಂದ ಲಿಂಬಾವಳಿ ಅವರ ಏರಿಯಾ ತಲುಪಿ ಅಲ್ಲಿನ ಸಮಸ್ಯೆಗಳ ಬಗ್ಗೆ ಕೇಳಿದಾಗ ಲಿಂಬಾವಳಿ ಅವರು ಯಡಿಯೂರಪ್ಪ ಮಾಡಿದ ತಪ್ಪಿಗೆ ನಾವು ಅನುಭವಿಸುತ್ತಿದ್ದೇವೆ ಎಂದರು.

ಇದನ್ನೂ ಓದಿ: ಮಳೆಯಿಂದ ಪ್ರಭಾವಿತ ಪ್ರದೇಶಗಳ ಪರಿಶೀಲನೆಗೆ ಹೋಗುವ ಸಿದ್ದರಾಮಯ್ಯಗೆ ರೆಡ್ ಕಾರ್ಪೆಟ್ ಸ್ವಾಗತ?

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ