ಮಳೆಯಿಂದ ಪ್ರಭಾವಿತ ಪ್ರದೇಶಗಳ ಪರಿಶೀಲನೆಗೆ ಹೋಗುವ ಸಿದ್ದರಾಮಯ್ಯಗೆ ರೆಡ್ ಕಾರ್ಪೆಟ್ ಸ್ವಾಗತ?
ನಮ್ಮ ವರದಿಗಾರ ಸ್ಥಳೀಯ ವ್ಯಕ್ತಿಯೊಬ್ಬರೊಂದಿಗೆ ಮಾತಾಡಿದ್ದಾರೆ. ಅವರು ಸ್ಪಷ್ಟವಾಗಿ ಹೇಳುತ್ತಾರೆ, ಮಳೆಗಾಲದಲ್ಲಿ ನಮ್ಮ ಬದುಕನ್ನು ನರಕ ಮಾಡುವ ರಸ್ತೆ ಮತ್ತು ಚರಂಡಿಗಳಿಂದ ಶಾಶ್ವತವಾದ ಪರಿಹಾರ ಬೇಕಿದೆ, ಪರಿಹಾರವೆಂದರೆ ಹಣವಲ್ಲ, ಸಮಸ್ಯೆಗಳ ಪರಿಹಾರ, 15 ವರ್ಷಗಳಿಂದ ಹೆಚ್ಬಿಅರ್ ಲೇಔಟ್ನಲ್ಲಿ ವಾಸವಾಗಿದ್ದೇವೆ, ಪ್ರತಿವರ್ಷ ಅದೇ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಅವರ ಮಾತು ದೊರೆಗಳ ಕಿವಿಗೆ ಬೀಳುತ್ತಿದೆಯೇ?
ಬೆಂಗಳೂರು, ಮೇ 21: ಮಳೆಯಿಂದ ನಗರದಲ್ಲಾಗಿರುವ ಹಾನಿ, ಆಸ್ತಿಪಾಸ್ತಿ ನಷ್ಟ ವೀಕ್ಷಿಸಲು ಮುಖ್ಯಮಂತ್ರಿಯವರು (chief minister) ಹೊರಟರೆ ಅವರಿಗೆ ರೆಡ್ ಕಾರ್ಪೆಟ್ ಸ್ವಾಗತವೇ? ಸಿದ್ದರಾಮಯ್ಯನವರಿಗೆ ಇದು ಬೇಕೋ ಬೇಡ್ವೋ ಗೊತ್ತಿಲ್ಲ, ಅದರೆ ಬಿಬಿಎಂಪಿ ಅಧಿಕಾರಿಗಳ ಭಟ್ಟಂಗಿತನಕ್ಕೆ ಎಣೆಯಿಲ್ಲ ಮಾರಾಯ್ರೇ. ಇಲ್ನೋಡಿ, ಹೆಚ್ಬಿಅರ್ ಲೇ ಔಟ್ ಐದನೇ ಬ್ಲಾಕ್ನಲ್ಲಿ ರಾಜಾಕಾಲುವೆ ಪಕ್ಕದಲ್ಲೇ ಸಿಎಂಗಾಗಿ ಒಂದು ಸ್ಟೇಜು ಮತ್ತು ಅದರ ಮೇಲೆ ರೆಡ್ ಕಾರ್ಪೆಟ್! ಚರಂಡಿಯಿಂದ ದುರ್ನಾತ ಬರುತ್ತಿದೆ, ಇಲ್ಲಿನ ರಸ್ತೆಗಳಲ್ಲಿ ಹೊಂಡಗಳಂಥ ಗುಂಡಿಗಳು. ಜನ ಮಳೆಯಿಂದ ರೋಸಿಹೋಗಿದ್ದಾರೆ ಮತ್ತು ಮಳೆಗಾಲ ಶುರುವಾಗುವ ಮೊದಲು ಏನಾದರೂ ವ್ಯವಸ್ಥೆ ಮಾಡಿ ಅಂತ ಅಂಗಲಾಚುತ್ತಿದ್ದಾರೆ. ರಸ್ತೆಗಳನ್ನು ಸರಿ ಮಾಡದ ಅಧಿಕಾರಿಗಳು ರೆಡ್ ಕಾರ್ಪೆಟ್ ಹಾಸುತ್ತಿದ್ದಾರೆ!
ಇದನ್ನೂ ಓದಿ: ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ