ಅಪ್ರಾಪ್ತ ಹೆಣ್ಣು ಮಕ್ಕಳ ದೇಹಗಳು ರೇಲ್ವೇ ಹಳಿಗಳ ಬಳಿ ಸಿಗುತ್ತಿರೋದು ಪೋಷಕರಲ್ಲಿ ಆತಂಕ ಮೂಡಿಸಿದೆ
ಸೂಟ್ ಕೇಸನ್ನು ರೈಲುಗಾಡಿಯಿಂದ ಬ್ರಿಜ್ ಕೆಳಗೆ ಬಿಸಾಡಿದ ಸಾಧ್ಯತೆ ಇದೆ ಅನ್ನೋದು ಜನರ ಅಭಿಪ್ರಾಯ. ಸೂಟ್ಕೇಸನ್ನು ಬಿಸಾಡಿದ್ದಾರೋ ಅಥವಾ ಅಲ್ಲಿ ತಂದು ಇಟ್ಟಿದ್ದಾರೋ ಪ್ರಶ್ನೆ ಅದಲ್ಲ, ವಾರದಲ್ಲಿ ಎರಡನೇ ಸಲ ಅಪ್ರಾಪ್ತ ಹೆಣ್ಣುಮಗುವಿನ ಮೃತದೇಹ ಪತ್ತೆಯಾಗಿದೆ, ಪ್ರಶ್ನಿಸಬೇಕಿರುವುದು ನಮ್ಮ ಪೊಲೀಸ್ ವ್ಯವಸ್ಥೆಯನ್ನು, ನಮ್ಮ ಗೃಹ ಸಚಿವರನ್ನು ಮತ್ತು ಸರಕಾರವನ್ನು. ಅಪ್ರಾಪ್ತ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲವೆಂದರೆ ಹೇಗೆ ಸ್ವಾಮಿ?
ಬೆಂಗಳೂರು, ಮೇ 21: ಕಳೆದ ವಾರವಷ್ಟೇ ರಾಮನಗರ ಜಿಲ್ಲೆ ಬಿಡದಿಗೆ ಹತ್ತಿರದ ಭದ್ರಾಪುರದ ರೇಲ್ವೇ ಹಳಿಗಳ ಪಕ್ಕ ದಿವ್ಯಾಂಗೆ ಅಪ್ರಾಪ್ತೆಯೊಬ್ಬಳ ಮೃತದೇಹ ಸಿಕ್ಕಿತ್ತು, ಮಗುವಿನನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ತಾಯಿ ಹೇಳುತ್ತಿದ್ದಾರೆ. ಇವತ್ತು ಅತ್ತಿಬೆಲೆ ರಸ್ತೆಯಲ್ಲಿರುವ (Attibele road) ಚಂದಾಪುರ ರೇಲ್ವೇ ಬಳಿ ಯಾರೋ ಒಂದು ಸೂಟ್ಕೇಸ್ ಬಿಸಾಡಿದ್ದು ಅದರಲ್ಲಿ ಸುಮಾರು 10-ವರ್ಷದ ಒಂದು ಹೆಣ್ಣು ಮಗುವಿನ ಮೃತದೇಹ ಪತ್ತೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: ಗದಗ: ಅಪ್ರಾಪ್ತೆಯನ್ನು ಲಾಡ್ಜ್ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಇಬ್ಬರು ಸ್ನೇಹಿತರು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

