AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ಅಪ್ರಾಪ್ತೆಯನ್ನು ಲಾಡ್ಜ್​ಗೆ​ ಕರೆದೊಯ್ದು ಅತ್ಯಾಚಾರ ಎಸಗಿದ ಇಬ್ಬರು ಸ್ನೇಹಿತರು

ಮುದ ನೀಡುವ, ಬಾಂಧವ್ಯ ಬೆಸೆಯುವ ಪ್ರೀತಿಯನ್ನು ಅನೇಕ ಯುವಕ-ಯುವತಿಯರು ಉರುಳಾಗಿಸಿಕೊಳ್ಳುತ್ತಿದ್ದಾರೆ. ಹದಿಹರಿಯದ ವಯಸ್ಸಿನಲ್ಲೇ ದೈಹಿಕ ಆಕರ್ಷಣೆಗೆ ಒಳಗಾಗಿ ಒಂದಲ್ಲ ಒಂದು ಅನಾಹುತಗಳು ಮಾಡಿಕೊಳ್ಳುವವರ ಸಂಖ್ಯೆಯೇ ಹೆಚ್ಚು. ಅದರಂತೆ ಪ್ರೀತಿಯ ನಾಟಕವಾಡಿ ಇಬ್ಬರು ಸ್ನೇಹಿತರು ಅಪ್ರಾಪ್ತೆ ಹುಡುಗಿ ಮೇಲೆ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ಗದಗದಲ್ಲಿ ಬೆಳಕಿಗೆ ಬಂದಿದೆ.

ಗದಗ: ಅಪ್ರಾಪ್ತೆಯನ್ನು ಲಾಡ್ಜ್​ಗೆ​ ಕರೆದೊಯ್ದು ಅತ್ಯಾಚಾರ ಎಸಗಿದ ಇಬ್ಬರು ಸ್ನೇಹಿತರು
ಅಪ್ರಾಪ್ತೆ ಮೇಲೆ ಅತ್ಯಾಚಾರ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ರಮೇಶ್ ಬಿ. ಜವಳಗೇರಾ

Updated on:May 01, 2025 | 5:43 PM

ಗದಗ, (ಮೇ 01): ಯುವಕನೋರ್ವ ಪ್ರೀತಿಯ (Love) ನಾಟಕವಾಡಿ ಅಪ್ರಾಪ್ತೆ ಹುಡುಗಿಯನ್ನು ಬಲೆಗೆ ಬೀಳಿಸಿಕೊಂಡು ಅತ್ಯಾಚಾರ ಎಸಗಿರುವ ಘಟನೆ ಗದಗ (Gadag) ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯಕರ ತಾನು ಮಾತ್ರವಲ್ಲದೇ ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾರೆ. ಏಪ್ರಿಲ್ ‌19 ರಂದು ಬಾಲಕಿಯನ್ನು ಪುಸಲಾಯಿಸಿ ಲಾಡ್ಜ್​ಗೆ ಕರೆದುಕೊಂಡು ಹೋಗಿ ಇಬ್ಬರು ಸ್ನೇಹಿತರು ಒಬ್ಬರಾದ ಮೇಲೆ ಇಬ್ಬರು ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಸ್ನೇಹಿತ ಬಾಲಕಿ ಮೇಲೆ ಅತ್ಯಾಚಾರ ಎಸಗುವ ದೃಶ್ಯವನ್ನು ಮತ್ತೋರ್ವ ತನ್ನ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪ್ರಕರಣ ಬಯಲಿಗೆ ಬಂದಿದ್ದು, ಸದ್ಯ ಪೊಲೀಸರು, ಆರೋಪಿಗಳಾದ ಸಮೀರ್, ಉಮರ್ ಹಾಗೂ ಲಾಡ್ಜ್ ಬುಕ್ ಮಾಡಿ ಸಹಕರಿಸಿದ್ದ ಜಾಕೀರ್ ಹುಸೇನ್​ ನನ್ನು ಪೊಲೀಸರು ಬಂಧಿಸಿದ್ದಾರೆ.

ಅತ್ಯಾಚಾರದ ದೃಶ್ಯಗಳು ಸೆರೆ ಹಿಡಿದು ವೈರಲ್ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದು ಬಾಲಕಿ ಕುಟುಂಬಸ್ಥರಿಗೆ ಗೊತ್ತಾಗಿದೆ. ಇದರಿಂದ ಆತಂಕಗೊಂಡ ಪೋಷಕರು ಕೂಡಲೇ ಗದಗ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿ ಮೂರೇ ದಿನಕ್ಕೆ ಮೈದುನನಿಂದ ಅತ್ಯಾಚಾರಕ್ಕೊಳಗಾದ ಮಹಿಳೆ

ಇನ್ನು ಈ ಸಂಬಂಧ ಗದಗ ಎಸ್ಪಿ ಬಿ ಎಸ್ ನೇಮಗೌಡ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಈ ಪ್ರಕರಣದ ಮಾಹಿತಿ ನೀಡಿದ್ದಾರೆ. ಅಪ್ರಾಪ್ತೆ ಹುಡುಗಿಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ ಸಮೀರ್, ಏಪ್ರಿಲ್ ‌19ರಂದು ಆಕೆಯನ್ನಜು ಪುಸಲಾಯಿಸಿ ಲಾಡ್ಜ್​​ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಇದೇ ವೇಳೆ ಸಮೀರ್​ನ ಗೆಳೆಯ ಉಮರ್ ಸಹ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇನ್ನು ಜಾಕೀರ್ ಹುಸೇನ್ ಎನ್ನುವಾತ ಅತ್ಯಾಚಾರಿಗಳಾದ ಸಮೀರ್, ಉಮರ್​ಗೆ ಲಾಡ್ಜ್ ಬುಕ್ ಮಾಡಿ ಸಹಕರಿಸಿದ್ದ. ಸದ್ಯ ಪೋಕ್ಸೋ ಕಾಯ್ದೆಯಡಿ ಮೂವರನ್ನೂ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ
Image
ತಂದೆ ಜತೆ ರೈಲ್ವೆ ನಿಲ್ದಾಣದಲ್ಲಿ ಕುಳಿತಿದ್ದಾಗ ಯುವತಿ ಮೇಲೆ ಅತ್ಯಾಚಾರ
Image
ಬೇರೆ ಜಾತಿ ಹುಡುಗನ ಪ್ರೀತಿಸಿದ್ದಕ್ಕೆ ಮಗಳ ಕೊಲೆ ಮಾಡಿ ನದಿಗೆ ಎಸೆದ ತಂದೆ
Image
ವಾಲಿಬಾಲ್ ಆಟಗಾರನ ಕಾಮಕಾಂಡ ಬಯಲು, ಮೊಬೈಲ್​ನಲ್ಲಿತ್ತು ಸರಸ ಸಲ್ಲಾಪದ ವಿಡಿಯೋ
Image
ಒಡಿಶಾ: ಸಂಬಂಧಿಯಿಂದಲೇ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:53 pm, Thu, 1 May 25