AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ವಾಲಿಬಾಲ್ ಆಟಗಾರನ ಕಾಮಕಾಂಡ ಬಯಲು, ಮೊಬೈಲ್​ನಲ್ಲಿತ್ತು ನೂರಾರು ಹುಡುಗಿಯರ ಜೊತೆಗಿನ ಸರಸ ಸಲ್ಲಾಪದ ವಿಡಿಯೋ

ವಿದ್ಯಾರ್ಥಿನಿಗೆ ಮೆಸೇಜ್ ಮೂಲಕ ಲೈಂಗಿಕ ಕಿರುಕುಳ ಹಿನ್ನಲೆ ಅನ್ಯಕೋಮಿನ ಯುವಕನಿಗೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಹಲ್ಲೆ ಮಾಡಲಾಗಿದೆ. ಈ ವೇಳೆ ಆತನ ಮೊಬೈಲ್​ ಪರೀಕ್ಷಿಸಿದಾಗ ನೂರಾರು ಹುಡುಗಿಯರ ಜೊತೆಗಿನ ಸರಸ-ಸಲ್ಲಾಪದ ವಿಡಿಯೋಗಳು ಪತ್ತೆ ಆಗಿವೆ. ಆ ಮೂಲಕ ವಾಲಿಬಾಲ್ ಆಟಗಾರನ ಕಾಮಕಾಂಡ ಬಯಲಾಗಿದೆ.

ಮಂಗಳೂರು: ವಾಲಿಬಾಲ್ ಆಟಗಾರನ ಕಾಮಕಾಂಡ ಬಯಲು, ಮೊಬೈಲ್​ನಲ್ಲಿತ್ತು ನೂರಾರು ಹುಡುಗಿಯರ ಜೊತೆಗಿನ ಸರಸ ಸಲ್ಲಾಪದ ವಿಡಿಯೋ
ಸೈಯದ್
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ|

Updated on:Apr 28, 2025 | 11:23 AM

Share

ಮಂಗಳೂರು, ಏಪ್ರಿಲ್​ 28: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ಖಾಸಗಿ ಕಾಲೇಜಿನ ವಿದ್ಯಾರ್ಥಿ ಕಂ, ವಾಲಿಬಾಲ್ ಆಟಗಾರ (volleyball player) ಸೈಯದ್​​ ಎಂಬಾತನ ಕಾಮಕಾಂಡ ಬಯಲಾಗಿದೆ. ವಿದ್ಯಾರ್ಥಿನಿಗೆ ಮೆಸೇಜ್ ಮೂಲಕ ಲೈಂಗಿಕ ಕಿರುಕುಳ ಹಿನ್ನಲೆ ಹಿಂದೂ ಸಂಘಟನೆ ಕಾರ್ಯಕರ್ತರು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಸೈಯದ್ ಮೊಬೈಲ್ ಕಿತ್ತುಕೊಂಡು ನೋಡಿದಾಗ ನೂರಾರು ಹುಡುಗಿಯರ ಜೊತೆಗಿನ ಸರಸ ಸಲ್ಲಾಪದ ವಿಡಿಯೋಗಳು ಪತ್ತೆಯಾಗಿವೆ. ಸದ್ಯ ಬೆಳ್ತಂಗಡಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆತನನ್ನು ಬಂಧಿಸಿದ್ದಾರೆ.

ಅಶ್ಲೀಲ ವಿಡಿಯೋಗಳು ಪತ್ತೆ

ಸೈಯದ್​ ಮೂಲತಃ ಕಾರ್ಕಳ ನಿವಾಸಿ. ಬೆಳ್ತಂಗಡಿ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು, ವಾಲಿಬಾಲ್ ಆಟಗಾರ ಕೂಡ ಹೌದು. ಓರ್ವ ವಿದ್ಯಾರ್ಥಿನಿಗೆ ಸೈಯದ್ ಮೆಸೇಜ್ ಮೂಲಕ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ಆತನನ್ನು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಇನ್ಸ್ಟಾಗ್ರಾಮ್​ನಲ್ಲಿ ಪರಿಚಯವಾದ ಸುಂದರಿಗೆ 25 ಲಕ್ಷ ರೂ ಕೊಟ್ಟ: ಮುಂದೇನಾಯ್ತು?

ಇದನ್ನೂ ಓದಿ
Image
ರೈಲ್ವೆ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ತೆಗೆಸದಂತೆ ಸಚಿವ ಸೋಮಣ್ಣ ಸೂಚನೆ
Image
ರೈಲ್ವೆ ಪರೀಕ್ಷೆಯಲ್ಲಿ ಜನಿವಾರ ಮಾತ್ರವಲ್ಲ, ಮಂಗಳಸೂತ್ರವೂ ನಿಷಿದ್ಧ!
Image
ಮಂಗಳೂರಿನಲ್ಲಿ ತೇರು ಬಿದ್ದ ವಿಚಾರ: ಅವಘಡದ ಬಗ್ಗೆ ದೈವಗಳು ಆಕ್ರೋಶ
Image
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್

ಇನು ಈ ಘಟನೆ ವೇಳೆ ಸೈಯದ್​​ ಮೊಬೈಲ್ ಕಿತ್ತುಕೊಂಡು ನೋಡಿದಾಗ ಹಿಂದೂ ಸಂಘಟನೆ ಕಾರ್ಯಕರ್ತರು ಒಂದು ಕ್ಷಣ ಶಾಕ್​ ಆಗಿದ್ದಾರೆ. ಏಕೆಂದರೆ ಆತನ ಮೊಬೈಲ್​ ತುಂಬಾ ನೂರಾರು ಹುಡುಗಿಯರ ಜೊತೆಗಿನ ಸರಸ-ಸಲ್ಲಾಪದ ವಿಡಿಯೋಗಳನ್ನು ಕಂಡು ದಂಗಾಗಿದ್ದಾರೆ.

ಹಿಂದೂ ಕಾರ್ಯಕರ್ತರ ವಿರುದ್ಧವೂ FIR ದಾಖಲು

ಇತ್ತ ತನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಸೈಯದ್​​ ಕೂಡ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಹೀಗಾಗಿ ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧವೂ ಎಫ್​ಐಆರ್​ ದಾಖಲಾಗಿದೆ. ಉಜಿರೆಯ ಮನೋಜ್ ಮತ್ತು ಪ್ರಜ್ವಲ್ ಗೌಡ ಎಂಬುವವರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಕೆಎಸ್​ಆರ್​ಟಿಸಿ ಬಸ್ಸಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ

ಇನ್ನು ಇತ್ತೀಚೆಗೆ ಕೆಎಸ್​ಆರ್​ಟಿಸಿ ಬಸ್ಸಿನಲ್ಲಿ ನಿರ್ವಾಹಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಘಟನೆ ಮಂಗಳೂರಿನ ಮುಡಿಪು -ಸ್ಟೇಟ್‌ ಬ್ಯಾಂಕ್‌ ಭಾಗದಲ್ಲಿ ನಡೆದಿತ್ತು. ಈ ಬಗ್ಗೆ ಪ್ರಯಾಣಿಕರೊಬ್ಬರು ಮಾಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಆ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಪೊಲೀಸರು, ಬಾಗಲಕೋಟೆ ಮೂಲದ ಆರೋಪಿ ಪ್ರದೀಪ್‌ (40) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:10 am, Mon, 28 April 25