ಸರ್ವಜ್ಞನಗರದಲ್ಲಿ ಸಚಿವ ಜಾರ್ಜ್ ಪರ ಮಾತಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತೆಯ ಚಳಿ ಬಿಡಿಸಿದ ಸ್ಥಳೀಯರು
ಕಾಂಗ್ರೆಸ್ ಕಾರ್ಯಕರ್ತೆಯ ಉಡಾಫೆ ಮಾತು ಕೇಳಿ ಕೆರಳುವ ಸ್ಥಳೀಯರೊಬ್ಬರು, ಮಳೆಯಿಂದ ತಮ್ಮ ಮನೆ ಬಳಿ ಆಗಿರುವ ಅಧ್ವಾನ ನೋಡಲು ಅವರನ್ನು ಕರೆಯುತ್ತಾರೆ. ಆದರೆ ಅದುವರೆಗೆ ಸಚಿವರನ್ನು ವಹಿಸಿಕೊಂಡು ದೊಡ್ಡ ದೊಡ್ಡ ಮಾತಾಡುತ್ತಿದ್ದ ಕಾರ್ಯಕರ್ತೆ ಹೋಗಲು ನಿರಾಕರಿಸುತ್ತಾರೆ. ಆಕೆಯ ನಿರಾಕರಣೆಯಿಂದ ವ್ಯಗ್ರರಾಗುವ ಸ್ಥಳೀಯ ಏರಿದ ಧ್ವನಿಯಲ್ಲಿ ಮಾತಾಡತೊಡಗಿದಾಗ, ಅವರ ಜೊತೆಗಿದ್ದ ಸಚಿವನ ಕಡೆಯವರು ಕಾರ್ಯಕರ್ತೆಯನನ್ನು ಅಲ್ಲಿಂದ ಕರೆದೊಯ್ಯುತ್ತಾರೆ.
ಬೆಂಗಳೂರು, ಮೇ 21: ಇಂಧನ ಸಚಿವ ಕೆಜೆ ಜಾರ್ಜ್ ಬೆಂಗಳೂರು ಸರ್ವಜ್ಞ ನಗರ ವಿಧಾನ ಸಭಾ ಕ್ಷೇತ್ರವನ್ನು (Sarvagna Nagar Assembly constituency) ಪ್ರತಿನಿಧಿಸುತ್ತಾರೆ. ನಗರದಲ್ಲಿ ಕಳೆದೆರಡು-ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಸರ್ವಜ್ಞ ನಗರವನ್ನೂ ಅಧೋಗತಿಗೆ ತಳ್ಳಿದೆ. ಹೆಚ್ಬಿಅರ್ ಲೇಔಟ್ನಲ್ಲಿ ರಸ್ತೆಗಳು ಎಕ್ಕುಟ್ಟಿ ಹೋಗಿವೆ, ಮನೆಗಳಲ್ಲಿ ಚರಂಡಿ ನೀರಿನ ಜೊತೆ ಹುಳಹುಪ್ಪಡಿ ಹರಿದು ಬರುತ್ತಿವೆ ಮತ್ತು ಜನ ಭಯ ಭೀತರಾಗಿದ್ದಾರೆ. ಆದರೆ, ಈ ಕಾಂಗ್ರೆಸ್ ಕಾರ್ಯಕರ್ತೆಗೆ ಇದ್ಯಾವುದೂ ಕಾಣುತ್ತಿಲ್ಲ, ಜಾರ್ಜ್ ಮಿನಿಸ್ಟ್ರಾದ ಮೇಲೆ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಎಣಿಸುತ್ತಾರೆ. ನಮ್ಮ ವರದಿಗಾರ, ಆಕೆ ನಿಂತಿರುವ ಏರಿಯ ಕೂಡ ಕ್ಷೇತ್ರದ ಭಾಗವಾಗಿದೆ, ಇದ್ಯಾಕೆ ಹೀಗೆ ಅಂತ ಕೇಳಿದರೆ ಉತ್ತರವಿಲ್ಲ. ಹಿಂದಿನ ಬಿಜೆಪಿ ಸರ್ಕಾರವನ್ನು ಆಕೆ ದೂಷಿಸಲಾರಂಭಿಸುತ್ತಾರೆ ಮತ್ತು ಜನಸಾಮಾನ್ಯರಿಗೆ ಕಷ್ಟ ಇದ್ದಿದ್ದೇ ಎಂಬ ಉಡಾಫೆ ಮಾತನ್ನಾಡುತ್ತಾರೆ.
ಇದನ್ನೂ ಓದಿ: Bangalore Rains: ಬೆಂಗಳೂರು ಮಳೆ ಸೃಷ್ಟಿಸಿದ ಅಧ್ವಾನ ಒಂದೆರಡಲ್ಲ; ಎಲ್ಲೆಲ್ಲಿ ಏನೇನಾಯ್ತು ನೋಡಿ!
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ