Updated on:Oct 20, 2022 | 9:15 AM
Bangalore Rain Heavy rain in Bangalore Many areas are flooded bangalore news in Kannada
ಅರ್ಧಗಂಟೆ ಮಳೆಗೆ ಸುಲ್ತಾನ್ ಪೇಟೆ ಮುಖ್ಯರಸ್ತೆಯ ಸ್ಥಿತಿ ಇದು ಎನ್ನುತ್ತಾ ಕಮ್ರಾನ್ ಎಂಬವರು ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಈ ಬಗ್ಗೆಯೂ ಸಿಎಂ ತನಿಖೆಗೆ ಆದೇಶಿಸಬೇಕು ಎಂದು ಬರೆದುಕೊಂಡಿದ್ದಾರೆ.
ಶಿವಾಜಿನಗರದಲ್ಲಿ ಸುರಿದ ಧಾರಾಕಾರ ಮಳೆಗೆ ರಸ್ತೆಯಲ್ಲಿ ರಭಸದಿಂದ ನೀರು ಹರಿದು ಹೋಗಿದ್ದು, ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಈ ವೇಳೆ ರಸ್ತೆಗಿಳಿದ ಸವಾರರು ಮತ್ತು ಸಾರ್ವಜನಿಕರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವಾಹನಗಳನ್ನು ತಡೆದರು. (ಕ್ರೆಡಿಟ್: Kamran/Twitter)
ಎಚ್ಎಸ್ಆರ್ ಲೇಔಟ್, ಬೊಮ್ಮನಹಳ್ಳಿಯಲ್ಲಿಯೂ ಮಳೆರಾಯ ಅವಾಂತರ ಸೃಷ್ಟಿಸಿದ್ದು, ರಸ್ತೆಗಳಲ್ಲಿ ನೀರು ತುಂಬಿಕೊಂಡಿರುವ ವಿಡಿಯೋವನ್ನು Dr Karthik Narayanan ಎಂಬವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಪಾರ್ಟ್ಮೆಂಟ್ ಆವರಣದಲ್ಲಿ ತುಂಬಿದ ನೀರಿನ ಫೋಟೋ ಮತ್ತು ವಿಡಿಯೋವನ್ನು KismiBar ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಮಳೆಯ ಅಬ್ಬರಕ್ಕೆ ರಸ್ತೆಗಳಲ್ಲಿ ನೀರು ತುಂಬಿಕೊಂಡು ನದಿಯಂತೆ ಹರಿಯುತ್ತಿರುವ ದೃಶ್ಯವನ್ನು ಸೆರೆ ಹಿಡಿದು HomelanderBale ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಇನ್ನೊಂದೆಡೆ ಸುರಿದ ಮಳೆಗೆ ಪಾರ್ಕ್ ಮಾಡಿದ್ದ ಕಾರುಗಳ ಮೇಲೆ ಮರ ಉರುಳಿ ಬಿದ್ದಿದ್ದು, ನಾಲ್ಕೈದು ಕಾರುಗಳ ಮೇಲೆ ತಡೆಗೋಡೆ ಬಿದ್ದು ಹಾನಿಗೊಂಡಿವೆ. (ಕ್ರೆಡಿಟ್: Manoj Kumar/Twitter)
Published On - 9:15 am, Thu, 20 October 22