ಟಿ20 ವಿಶ್ವಕಪ್ಗೆ ಆತಿಥ್ಯವಹಿಸಿರುವ ಆಸ್ಟ್ರೇಲಿಯ ತಂಡಕ್ಕೆ ಈ ಬಾರಿ ಆಘಾತ ಎದುರಾಗಿದ್ದು, ತಂಡದ ಸ್ಫೋಟಕ ಆರಂಭಿಕ ಆಟಗಾರ ಜೋಶ್ ಇಂಗ್ಲಿಸ್ ಇಂಜುರಿಗೊಂಡು ಟಿ20 ಸರಣಿಯಿಂದ ಹೊರನಡೆದಿದ್ದಾರೆ. ಜೋಶ್ ಇಂಗ್ಲಿಸ್ ಗಾಲ್ಫ್ ಆಡುವಾಗ ತನ್ನ ಕೈಗೆ ಗಾಯಮಾಡಿಕೊಂಡಿದ್ದು, ಆ ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ವರದಿಯಾಗಿತ್ತು. ಆದರೆ ಇದೀಗ ಟೂರ್ನಿಯಿಂದಲೇ ಅವರು ಹೊರಬಿದ್ದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.