T20 World Cup 2022: ಒಂದೇ ದಿನ 3 ತಂಡಗಳ 4 ಆಟಗಾರರು ಟಿ20 ವಿಶ್ವಕಪ್ನಿಂದ ಔಟ್..!
T20 World Cup 2022: ಆಟಗಾರರ ಇಂಜುರಿ ಸರಣಿ ಎಲ್ಲ ತಂಡಗಳನ್ನು ಬಿಟ್ಟುಬಿಡದಂತೆ ಕಾಡುತ್ತಿದ್ದು ಅ.19 ರಂದು ಒಂದೇ ದಿನ 3 ತಂಡಗಳ 4 ಆಟಗಾರರು ಟಿ20 ವಿಶ್ವಕಪ್ನಿಂದ ಹೊರಹೋಗಿದ್ದಾರೆ.
Updated on:Oct 20, 2022 | 12:07 PM

ಟಿ20 ವಿಶ್ವಕಪ್ನ ಅರ್ಹತಾ ಸುತ್ತು ಈಗಾಗಲೇ ಆರಂಭವಾಗಿದೆ. ಸೂಪರ್ 12 ಸುತ್ತು ಇನ್ನೇನು ಆರಂಭವಾಗಲು ಕೆಲವೇ ದಿನಗಳು ಉಳಿದಿದ್ದು, ಎಲ್ಲಾ ತಂಡಗಳು ಅಂತಿಮ ಹಂತದ ಸಿದ್ದತೆಗಳನ್ನು ಮಾಡುತ್ತಿವೆ. ಆದರೆ ಇದರ ನಡುವೆ ಆಟಗಾರರ ಇಂಜುರಿ ಸರಣಿ ಎಲ್ಲ ತಂಡಗಳನ್ನು ಬಿಟ್ಟುಬಿಡದಂತೆ ಕಾಡುತ್ತಿದ್ದು ಅ.19 ರಂದು ಒಂದೇ ದಿನ 3 ತಂಡಗಳ 4 ಆಟಗಾರರು ಟಿ20 ವಿಶ್ವಕಪ್ನಿಂದ ಹೊರಹೋಗಿದ್ದಾರೆ.

ಇಂಜುರಿಯ ಶಾಕ್ ಎದುರಿಸಿದ ತಂಡದಲ್ಲಿ ಶ್ರೀಲಂಕಾ ತಂಡ ಪ್ರಮುಖವಾಗಿದ್ದು, ತಂಡದ ಇಬ್ಬರು ಆಟಗಾರರು ಟಿ20 ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ. ತಂಡದ ಸ್ಟಾರ್ ವೇಗದ ಬೌಲರ್ ದುಷ್ಮಂತ ಚಮೀರಾ ಇಂಜುರಿಯಿಂದ ತಂಡ ತೊರೆದಿದ್ದಾರೆ. ಈ ಹಿಂದೆ ಗಾಯದಿಂದಾಗಿ ಏಷ್ಯಾಕಪ್ಗೂ ಅಲಭ್ಯರಾಗಿದ್ದ ಚಮೀರಾ, ಗಾಯದಿಂದ ಚೇತರಿಸಿಕೊಂಡು ಟಿ20 ವಿಶ್ವಕಪ್ಗೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೀಗ ಮತ್ತೊಮ್ಮೆ ಗಾಯಗೊಂಡಿದ್ದು ಅವರ ಸ್ಥಾನಕ್ಕೆ ಕಸುನ್ ರಜಿತಾ ಅವರನ್ನು ಆಯ್ಕೆ ಮಾಡಲಾಗಿದೆ.

ಹಾಗೆಯೇ ಲಂಕಾ ತಂಡದ ಸ್ಟಾರ್ ಬ್ಯಾಟರ್ ದನುಷ್ಕ ಗುಣತಿಲಕ ಕೂಡ ಇಂಜುರಿಯಿಂದಾಗಿ ತಂಡ ತೊರೆದಿದ್ದು, ಅವರ ಸ್ಥಾನಕ್ಕೆ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದ ಅಶೇನ್ ಬಂಡಾರ ಅವರನ್ನು ಆಯ್ಕೆ ಮಾಡಲಾಗಿದೆ.

ಇಂಗ್ಲೆಂಡ್ ತಂಡದ ಸ್ಟಾರ್ ವೇಗದ ಬೌಲರ್ ರೀಸ್ ಟೋಪ್ಲಿ ಕೂಡ ಇಂಜುರಿಯಿಂದಾಗಿ ಟಿ20 ವಿಶ್ವಕಪ್ನಿಂದ ಹೊರನಡೆದಿದ್ದಾರೆ. ಈಗ ಅವರ ಸ್ಥಾನಕ್ಕೆ ಟೈಮಲ್ ಮಿಲ್ಸ್ ಅವರನ್ನು ಆಯ್ಕೆ ಮಾಡಲಾಗಿದೆ.

ಹಾಗೆಯೇ ಅರ್ಹತಾ ಸುತ್ತಿನ ಪಂದ್ಯಗಳನ್ನಾಡುತ್ತಿರುವ ಯುಎಇ ತಂಡದಲ್ಲೂ ಇಂಜುರಿ ಸಮಸ್ಯೆ ಕಾಣಿಸಿಕೊಂಡಿದ್ದು, ತಂಡದ ಆಲ್‌ರೌಂಡರ್ ಜವಾರ್ ಫರೀದ್ ಕೂಡ ಇಂಜುರಿಗೆ ಒಳಗಾಗಿದ್ದಾರೆ. ಇದೀಗ ಅವರ ಬದಲಿಯಾಗಿ ಫಹಾದ್ ನವಾಜ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
Published On - 12:07 pm, Thu, 20 October 22



















