- Kannada News Photo gallery Cricket photos ICC T20 Rankings: Suryakumar retains no.2 spot in ICC batters’ rankings
ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಏಕೈಕ ಆಟಗಾರನಿಗೆ ಸ್ಥಾನ
ICC T20 Rankings: ಟಿ20 ಬ್ಯಾಟ್ಸ್ಮನ್ಗಳ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಟಾಪ್-10 ನಲ್ಲಿರುವ ಬ್ಯಾಟ್ಸ್ಮನ್ಗಳು ಯಾರೆಲ್ಲಾ ನೋಡೋಣ...
Updated on: Oct 19, 2022 | 6:10 PM

ICC T20 Rankings: ಐಸಿಸಿ ನೂತನ ಟಿ20 ರ್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಆದರೆ ಸೌತ್ ಆಫ್ರಿಕಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ ಆಟಗಾರ ಸೂರ್ಯಕುಮಾರ್ ಯಾದವ್ ಪಾಕ್ ಆಟಗಾರನಿಗೆ ಭರ್ಜರಿ ಪೈಪೋಟಿ ನೀಡುತ್ತಿರುವುದು ವಿಶೇಷ.

ಸದ್ಯ ಸೂರ್ಯಕುಮಾರ್ ಯಾದವ್ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಆದರೆ ರಿಜ್ವಾನ್ ಹಾಗೂ ಸೂರ್ಯಕುಮಾರ್ ಯಾದವ್ನ ನಡುವಣ ಪಾಯಿಂಟ್ ವ್ಯತ್ಯಾಸ ಕೇವಲ 23 ಮಾತ್ರ. ಹೀಗಾಗಿ ಟಿ20 ವಿಶ್ವಕಪ್ನಲ್ಲಿ ಮಿಂಚಿದ್ರೆ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನಕ್ಕೇರಬಹುದು.

ಹಾಗಿದ್ರೆ ಐಸಿಸಿ ಪ್ರಕಟಿಸಿರುವ ನೂತನ ಟಿ20 ಟಾಪ್ 10 ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಆಟಗಾರರು ಯಾರೆಲ್ಲಾ ನೋಡೋಣ...

2- ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್) - 836 ಅಂಕ

2- ಸೂರ್ಯಕುಮಾರ್ ಯಾದವ್ (ಭಾರತ) - 838 ರೇಟಿಂಗ್

4- ಬಾಬರ್ ಆಜಂ (ಪಾಕಿಸ್ತಾನ್) - 778 ಅಂಕ

5- ಐಡೆನ್ ಮಾರ್ಕ್ರಾಮ್ (ಸೌತ್ ಆಫ್ರಿಕಾ) - 748 ಅಂಕ

3- ಡೆವೊನ್ ಕಾನ್ವೇ (ನ್ಯೂಜಿಲೆಂಡ್)- 788 ಅಂಕ

6- ಡೇವಿಡ್ ಮಲಾನ್ (ಇಂಗ್ಲೆಂಡ್) - 719 ಅಂಕ

9- ಆರೋನ್ ಫಿಂಚ್ (ಆಸ್ಟ್ರೇಲಿಯಾ) - 688 ಅಂಕ

10- ಪಾತುಂ ನಿಸಂಕಾ (ಶ್ರೀಲಂಕಾ) - 673 ಅಂಕ

9- ಮೊಹಮ್ಮದ್ ವಾಸಿಂ (ಯುಎಇ) - 612 ರೇಟಿಂಗ್

10- ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) - 611 ರೇಟಿಂಗ್
