ತಡವಾಗಿ ಕಾರ್ಯಕ್ರಮಕ್ಕೆ ಬಂದ ಶಿವಕುಮಾರ್ರನ್ನು ಭಾಷಣ ನಿಲ್ಲಿಸಿ ಹೋಗಿ ತಬ್ಬಿಕೊಂಡ ಪವನ್ ಕಲ್ಯಾಣ್
ದೆಹಲಿಯ ಏರ್ಪೋರ್ಟ್ನಲ್ಲಿ ಶಿವಕುಮಾರ್ ಅವರನ್ನು ಹಲವು ಬಾರಿ ನೋಡಿದ್ದೆ, ಅದರೆ ಮಾತಾಡಿರಲಿಲ್ಲ, ಇವತ್ತು ಆ ಅವಕಾಶ ಸಿಕ್ಕಿತು ಎಂದು ಪವನ್ ಕಲ್ಯಾಣ್ ತಮ್ಮ ಭಾಷಣದಲ್ಲಿ ಹೇಳುತ್ತಾರೆ. ಆನೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರಲ್ಲದೆ ಸಿಎಂ ಸಿದ್ದರಾಮಯ್ಯ, ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ ಮತ್ತು ಸಚಿವ ಸಂಪುಟದ ಹಲವಾರು ಸದಸ್ಯರು ಭಾಗಿಯಾಗಿದ್ದರು.
ಬೆಂಗಳೂರು, ಮೇ 21: ಕನ್ನಡದ ಸಿನಿಮಾಸಕ್ತರಿಗೆ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅಪರಚಿತರೇನೂ ಅಲ್ಲ. ರಾಜಕೀಯಕ್ಕೆ ಬರುವ ಮೊದಲು ಅವರು ತೆಲುಗು ಚಿತ್ರರಂಗದ (Tollywood) ಸೂಪರ್ಸ್ಟಾರ್ಗಳಲ್ಲಿ ಒಬ್ಬರಾಗಿದ್ದರು. ರಾಜ್ಯದಲ್ಲಿ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಇವತ್ತು ವಿಧಾನ ಸೌಧ ಆವರಣದಲ್ಲಿ ಕುಮ್ಕಿಯ ಆನೆ ಮತ್ತು ಅವುಗಳನ್ನು ಆಂಧ್ರ ಪ್ರದೇಶಕ್ಕೆ ತೆಗೆದುಕೊಂಡು ಹೋಗಲು ಅವಶ್ಯವಿರುವ ಕಾಗದಪತ್ರಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ತಡವಾಗಿ ಬಂದ ಶಿವಕುಮಾರ್ ಅವರನ್ನು ಪವನ್ ಕಲ್ಯಾಣ್ ತಮ್ಮ ಭಾಷಣ ನಿಲ್ಲಿಸಿ ಅವರಲ್ಲಿಗೆ ಹೋಗಿ ತಬ್ಬಿಕೊಳ್ಳುತ್ತಾರೆ. ನಂತರ ತಮ್ಮ ಭಾಷಣದಲ್ಲಿ ಅವರು ಶಿವಕುಮಾರ್ ಅವರನ್ನು ಡೈನಾಮಿಕ್ ನಾಯಕ ಅಂತ ಬಣ್ಣಿಸುತ್ತಾರೆ.
ಇದನ್ನೂ ಓದಿ: ನಿಮ್ಮ ಜೊತೆ ನಾವಿದ್ದೇವೆ; ಪಹಲ್ಗಾಮ್ ದಾಳಿ ವಿರುದ್ಧ ಪ್ರಧಾನಿ ಮೋದಿಗೆ ಸಿಎಂ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಬೆಂಬಲ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ