ಬಮೂಲ್ ಅಧ್ಯಕ್ಷನಾಗಲು ಚುನಾವಣೆ ಎದುರಿಸಬೇಕು ಮತ್ತು ಪಕ್ಷದ ನಾಯಕರ ಸಮ್ಮತಿ ಬೇಕು: ಡಿಕೆ ಸುರೇಶ್
ನಿನ್ನೆ ಹೊಸಪೇಟೆಯಲ್ಲಿ ಕರ್ನಾಟಕ ಸರ್ಕಾರ ನಡೆಸಿದ ಸಾಧನಾ ಸಮಾವೇಶದ ಬಗ್ಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮಾಡಿರುವ ಕಟುವಾದ ಟ್ವೀಟ್ಗೆ ಪ್ರತಿಕ್ರಿಯಿಸಿದ ಸುರೇಶ್, ಅವರು ಹೇಳಿರುವುದಕ್ಕೆ ಏನು ಪ್ರತಿಕ್ರಿಯೆ ನೀಡೋದು, ಅವರೊಬ್ಬ ಕಳ್ಸಾಮಿ, ಅವರಂಥ ಹಿಟ್ ಅಂಡ್ ರನ್ ಗಿರಾಕಿಯನ್ನು ಎಲ್ಲೂ ನೋಡಿಲ್ಲ ಎಂದು ಸುರೇಶ್ ಹೇಳಿದರು.
ಬೆಂಗಳೂರು, ಮೇ 21: ಕಾಂಗ್ರೆಸ್ ಧುರೀಣ ಡಿಕೆ ಸುರೇಶ್ ಬಮೂಲ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟದ್ದರೆ ಅದನ್ನು ಗಿಟ್ಟಿಸುವ ದಿಶೆಯಲ್ಲಿ ಒಂದು ಹಂತ ದಾಟಿದ್ದಾರೆ. ಕನಕಪುರ ಹಾಲು ಉತ್ಪಾದಕರ ನಿರ್ದೇಶಕನ (director) ಸ್ಥಾನಕ್ಕೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮಾಧ್ಯಮಗಳೊಂದಿಗೆ ಮಾತಾಡಿದ ಸುರೇಶ್, ಹಾಲು ಒಕ್ಕೂಟದ ಅಧ್ಯಕ್ಷನ ಸ್ಥಾನಕ್ಕೆ ತನ್ನನ್ನು ಪರಿಗಣಿಸುವ ಬಗ್ಗೆ ಮಾಹಿತಿ ಇಲ್ಲ, ಅದಕ್ಕೆ ಚುನಾವಣೆ ನಡೆಯಬೇಕು, 14 ನಿರ್ದೇಶಕರ ಪೈಕಿ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಅಧ್ಯಕ್ಷನ ಚುನಾವಣೆ 25 ರಂದು ನಡೆಯಲಿದೆ, ಬಮೂಲ್ ಅಧ್ಯಕ್ಷನಾಗಬೇಕಾದರೆ ಆಯ್ಕೆಯಾಗುವ ನಿರ್ದೇಶಕರು ಮತ್ತು ಪಕ್ಷದ ನಾಯಕರ ಸಮ್ಮತಿ ಬೇಕಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಚಿನ್ನ ವಂಚನೆ ಕೇಸ್! ಐಶ್ವರ್ಯಾ ಗೌಡ ವಿರುದ್ಧ ಪೊಲೀಸ್ ಆಯುಕ್ತರಿಗೆ ಡಿಕೆ ಸುರೇಶ್ ದೂರು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

