ಉಡುಪಿಯಲ್ಲಿ ರೆಡ್ ಅಲರ್ಟ್, ಮಲ್ಪೆ ಬೀಚ್ನಲ್ಲಿ ಸಮುದ್ರಕ್ಕಿಳಿಯದಂತೆ ಪ್ರವಾಸಿಗರಿಗೆ ಎಚ್ಚರಿಕೆ
ಜೂನ್ ತಿಂಗಳು ಅರಂಭವಾಗುತ್ತಿದ್ದಂತೆಯೇ ಉಡುಪಿ ಮತ್ತು ಇತರ ಕರಾವಳಿ ಪ್ರದೇಶಗಳಲ್ಲಿ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿ ಮೀನುಗಾರಿಕೆ ಮೇಲೆ 90 ದಿನಗಳ ನಿರ್ಬಂಧ ಹೇರಲಾಗುತ್ತದೆ. ಉಡುಪಿ ಜಿಲ್ಲಾಡಳಿತ ಅಂಥ ನಿರ್ಬಂಧ ಹೇರಿಲ್ಲವಾದರೂ ಅಲೆಗಳ ಅಬ್ಬರ ನೋಡಿ ಮೀನುಗಾರರು ಸಮುದ್ರಕ್ಕಳಿಯುವ ದುಸ್ಸಾಹಸ ಮಡುತ್ತಿಲ್ಲ. ನಾವೆ ದೋಣಿಗಳನ್ನು ಅವರು ದಡದಲ್ಲೇ ಕಟ್ಟಿಹಾಕಿದ್ದಾರೆ.
ಉಡುಪಿ, ಮೇ 21: ಎರಡು ಮೂರುವಾರಗಷ್ಟು ಮೊದಲೇ ಆರಂಭವಾದಂತಿರುವ ಮಾನ್ಸೂನ್ ಸೀಸನ್ ಕರಾವಳಿಯ ಪ್ರವಾಸಿ ತಾಣಗಳ ಮೇಲೆ ಅಡ್ಡ ಪರಿಣಾಮವನ್ನು ಬೀರಿದೆ. ನಮ್ಮ ಉಡುಪಿ ವರದಿಗಾರ ನಗರಕ್ಕೆ ಹತ್ತಿರದ ಮಲ್ಪೆ ಬೀಚ್ಗೆ ತೆರಳಿ ಅಲ್ಲಿರುವ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಕರಾವಳಿ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದ್ದು ಪ್ರವಾಸಿಗರನ್ನು ಸಮುದ್ರದಲ್ಲಿ ಇಳಿಯದಂತೆ ನಿರ್ಬಂಧಿಸಲಾಗಿದೆ. ಇವತ್ತು ಮತ್ತು ಮುಂದಿನ ಕೆಲ ದಿನಗಳಲ್ಲಿ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಇಲಾಖೆ ನೀಡಿದೆ.
ಇದನ್ನೂ ಓದಿ: ಮಲ್ಪೆ ಬೀಚ್, ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ