‘ಸರಿಗಮಪ’ ಸೆಮಿ ಫೈನಲ್; ನಾಲ್ಕು ಸ್ಥಾನಕ್ಕೆ 9 ಸ್ಪರ್ಧಿಗಳ ಮಧ್ಯೆ ಬಿಗ್ ಫೈಟ್
ಜೀ ಕನ್ನಡದ ‘ಸರಿಗಮಪ’ ಫಿನಾಲೆಗೆ ದಿನಗಣನೆ ಶುರುವಾಗಿದೆ. ಸದ್ಯ 9 ಸ್ಪರ್ಧಿಗಳು ಇದ್ದು ಸೆಮಿಫೈನಲ್ ನಡೆಯುತ್ತಿದೆ. ಈ ಸೆಮಿಫೈನಲ್ನಲ್ಲಿ ಬರೋಬ್ಬರಿ 9 ಸ್ಪರ್ಧಿಗಳು ಇದ್ದು, ಈ ಪೈಕಿ ಯಾರೆಲ್ಲ ಫಿನಾಲೆ ತಲುಪುತ್ತಾರೆ ಎನ್ನುವ ಕುತೂಹಲ ಮೂಡಿದೆ. ಆ ಬಗ್ಗೆ ಇಲ್ಲಿದೆ ವಿವರ.
ಜೀ ಕನ್ನಡದ ‘ಸರಿಗಮಪ’ (Saregamapa) ವೇದಿಕೆ ಸೆಮಿಫೈನಲ್ಗೆ ಸಜ್ಜಾಗಿದೆ. 9 ಸ್ಪರ್ಧಿಗಳ ಮಧ್ಯೆ ಸ್ಪರ್ಧೆ ನಡೆಯುತ್ತಿದೆ. ಫೈನಲ್ಗೆ ಆರು ಮಂದಿ ಮಾತ್ರ ಆಯ್ಕೆ ಆಗಲಿದ್ದಾರೆ. ಈಗಾಗಲೇ ಎರಡು ಸ್ಪರ್ಧಿಗಳ ಆಯ್ಕೆ ನಡೆದಿದೆ. ಉಳಿದ ನಾಲ್ಕು ಸ್ಥಾನದಲ್ಲಿ ಯಾರು ಇರುತ್ತಾರೆ ಎಂಬುದು ಈ ವೀಕೆಂಡ್ನಲ್ಲಿ ತಿಳಿಯಲಿದೆ. ಶನಿವಾರ ಹಾಗೂ ಭಾನುವಾರ ಸಂಜೆ 7.30ಕ್ಕೆ ಫಿನಾಲೆ ಎಪಿಸೋಡ್ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

