ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ ಪುಷ್ಪ
ಖ್ಯಾತ ನಟ ಶರಣ್ ಅವರಿಗೆ ಯಶ್ ತಂದೆ-ತಾಯಿ ಮೊದಲಿನಿಂದಲೂ ಫ್ಯಾನ್ಸ್. ಹಾಗಾಗಿ ಶರಣ್ ನಟನೆಯ ಸಿನಿಮಾಗೆ ತಾವು ಬಂಡವಾಳ ಹೂಡುವುದಾಗಿ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಅವರು ಹೇಳಿದ್ದಾರೆ. ‘ಕೊತ್ತಲವಾಡಿ’ ಸಿನಿಮಾದ ಟೀಸರ್ ಬಿಡುಗಡೆ ಸಂದರ್ಭದಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ನಟ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ (Pushpa Arunkumar) ಅವರು ನಿರ್ಮಾಪಕಿ ಆಗಿದ್ದಾರೆ. ಅವರು ನಿರ್ಮಿಸಿದ ಮೊದಲ ಸಿನಿಮಾ ‘ಕೊತ್ತಲವಾಡಿ’ ಟೀಸರ್ ಅನ್ನು ಶರಣ್ ಬಿಡುಗಡೆ ಮಾಡಿದ್ದಾರೆ. ಈ ವೇದಿಕೆಯಲ್ಲಿ ಪುಷ್ಪ ಅವರು ಹೊಸ ಸುದ್ದಿ ನೀಡಿದರು. ‘ನಾವು ಶರಣ್ ಅವರ ಅಭಿಮಾನಿ. ನಮ್ಮ ಸಂಸ್ಥೆಯಿಂದ 2ನೇ ಸಿನಿಮಾವನ್ನು ಶರಣ್ ಜೊತೆ ಮಾಡುತ್ತೇವೆ. ಮೊದಲ ಚಿತ್ರವನ್ನೇ ಅವರ ಜೊತೆ ಮಾಡಬೇಕಿತ್ತು. ಆದರೆ ನನಗೆ ಧೈರ್ಯ ಇರಲಿಲ್ಲ. ಈಗ ಒಂದು ಸಿನಿಮಾವನ್ನು ಬೇರೆಯವರ ಜೊತೆ ಮಾಡಿದ್ದೇನೆ. 2ನೇ ಸಿನಿಮಾವನ್ನು ಶರಣ್ (Sharan) ಜೊತೆ ಮಾಡುತ್ತೇನೆ ಎಂಬುದನ್ನು ಈ ವೇದಿಕೆಯಲ್ಲಿ ಹೇಳುತ್ತಿದ್ದೇನೆ’ ಎಂದಿದ್ದಾರೆ ಪುಷ್ಪ ಅರುಣ್ ಕುಮಾರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos