ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ ಪುಷ್ಪ
ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಅವರು ನಿರ್ಮಾಪಕಿಯಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ‘ಕೊತ್ತಲವಾಡಿ’ ಚಿತ್ರಕ್ಕೆ ಪುಷ್ಪ ಅವರು ಬಂಡವಾಳ ಹೂಡಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ಇದು ಅವರಿಗೆ ಮೊದಲ ಅನುಭವ. ಈ ಬಗ್ಗೆ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
ನಟ ಯಶ್ (Yash) ಮತ್ತು ಅವರ ಪತ್ನಿ ರಾಧಿಕಾ ಪಂಡಿತ್ (Radhika Pandit) ಅವರು ಚಿತ್ರರಂಗದಲ್ಲಿ ಪಳಗಿದವರು. ಆದರೆ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಅವರಿಗೆ ನಿರ್ಮಾಣದಲ್ಲಿ ಇದೇ ಮೊದಲ ಅನುಭವ. ‘ಕೊತ್ತಲವಾಡಿ’ ಚಿತ್ರವನ್ನು ಪುಷ್ಪ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಧೈರ್ಯ ಮಾಡಿ ಈ ನಿರ್ಮಾಣ ಸಂಸ್ಥೆ ಆರಂಭಿಸಿದ್ದೇವೆ. ನಾವು ಚಿತ್ರರಂಗದಿಂದ ಊಟ ಮಾಡಿದ್ದೇವೆ. ಹಾಗಾಗಿ ಇಲ್ಲಿಗೆ ನಾವು ಏನಾದರೂ ಮಾಡಬೇಕು. ಆರಾಮಾಗಿ ಇರಮ್ಮ ಅಂತ ಯಶ್ ಹೇಳುತ್ತಾನೆ. ರಾಧಿಕಾ ಇನ್ನೂ ಏನೂ ಹೇಳಿಲ್ಲ. ಅತ್ತೆ ಚೆನ್ನಾಗಿ ಮಾಡಿದ್ದಾರೆ ಅಂತ ಅವಳಿಂದ ಗುಡ್ ಎನಿಸಿಕೊಳ್ಳಬೇಕು ಎಂಬುದು ನನ್ನ ಆಸೆ’ ಎಂದು ಪಷ್ಪ ಅರುಣ್ ಕುಮಾರ್ (Pushpa Arunkumar) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos