ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಕಾಡಿ ಬೇಡಿ ಪ್ರೀತಿಸಿ ಬಳಿಕ ಆಕೆಯೊಂದಿಗೆ ಸಪ್ತಪದಿ ತುಳಿದಿದ್ದ ಪತಿರಾಯ ಪವನ್ ಇದೀಗ ಮತ್ತೊಂದು ಮದುವೆಯಾಗಿದ್ದಾನೆ. ಇದರಿಂದ ಪ್ರೀತಿಯನ್ನು ನಂಬಿ ಪವನ್ ನನ್ನು ಮದುವೆಯಾಗಿದ್ದ ಪಂಕಜಾಳಿಗೆ ದಿಕ್ಕುತೋಚದಂತಾಗಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಡಬನಕಟ್ಟೆ ಗ್ರಾಮದ ಪಂಕಜಾ ಬಾಲಕಿ ಆಗಿದ್ದಾಗಲೇ ಅದೇ ಗ್ರಾಮದ ಪವನ್ ಪ್ರೀತ್ಸೆ ಪ್ರೀತ್ಸೆ ಎಂದು ಬೆನ್ನುಬಿದ್ದಿದ್ದ. ಬಳಿಕ ಪಂಕಜಾಳನ್ನು ನಂಬಿಸಿ ವಿವಾಹವಾಗಿ ಚಿತ್ರದುರ್ಗದಲ್ಲಿ ಮನೆ ಮಾಡಿದ್ದ.
ಚಿತ್ರದುರ್ಗ, (ಜುಲೈ 08): ಕಾಡಿ ಬೇಡಿ ಪ್ರೀತಿಸಿ ಬಳಿಕ ಆಕೆಯೊಂದಿಗೆ ಸಪ್ತಪದಿ ತುಳಿದಿದ್ದ ಪತಿರಾಯ ಪವನ್ ಇದೀಗ ಮತ್ತೊಂದು ಮದುವೆಯಾಗಿದ್ದಾನೆ. ಇದರಿಂದ ಪ್ರೀತಿಯನ್ನು ನಂಬಿ ಪವನ್ ನನ್ನು ಮದುವೆಯಾಗಿದ್ದ ಪಂಕಜಾಳಿಗೆ ದಿಕ್ಕುತೋಚದಂತಾಗಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಡಬನಕಟ್ಟೆ ಗ್ರಾಮದ ಪಂಕಜಾ ಬಾಲಕಿ ಆಗಿದ್ದಾಗಲೇ ಅದೇ ಗ್ರಾಮದ ಪವನ್ ಪ್ರೀತ್ಸೆ ಪ್ರೀತ್ಸೆ ಎಂದು ಬೆನ್ನುಬಿದ್ದಿದ್ದ. ಬಳಿಕ ಪಂಕಜಾಳನ್ನು ನಂಬಿಸಿ ವಿವಾಹವಾಗಿ ಚಿತ್ರದುರ್ಗದಲ್ಲಿ ಮನೆ ಮಾಡಿದ್ದ. ಆದ್ರೆ, ನಾಲ್ಕು ವರ್ಷದಲ್ಲೇ ಕುಟುಂಬದವರ ಜತೆ ಸೇರಿಕೊಂಡು ವರದಕ್ಷಿಣೆ ಕಿರುಕುಳ ಆರಂಭಿಸಿದ್ದಾನೆ. ಆಗಾಗ ಹೊಡೆದು ಬಡಿದು ಮಾಡಿ ದೌರ್ಜನ್ಯ ಎಸಗಿದ್ದಾಬೆ. ಅಲ್ಲದೇ ಮೂರು ತಿಂಗಳ ಹಿಂದಷ್ಟೇ ಮತ್ತೊಬ್ಬಳ ಜತೆ ಪವನ್ ಮದುವೆ ಆಗಿದ್ದಾನಂತೆ. ನಿನ್ನೆಯಷ್ಟೇ ವಿಷಯ ತಿಳಿದ ಪಂಕಜಾ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಪಂಕಜಾಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ನ್ಯಾಯಕ್ಕಾಗಿ ಪೊಲೀಸರಿಗೆ ಮನವಿ ಮಾಡಿದ್ದಾಳೆ.
Published On - 10:00 pm, Tue, 8 July 25