WhatsApp privacy policy: ವಾಟ್ಸಾಪ್ ಖಾಸಗಿತನ ನೀತಿಗೆ ಮೇ 15ರೊಳಗೆ ಸಮ್ಮತಿಸದಿದ್ದಲ್ಲಿ ಮುಂದೆ ಏನಾಗುತ್ತದೆ?

ವಾಟ್ಸಾಪ್ ಖಾಸಗಿತನದ ನೀತಿಯನ್ನು ಸಮ್ಮತಿ ಸೂಚಿಸದ ಬಳಕೆದಾರರಿಗೆ ಮೇ 15ರ ಗಡುವಿನ ನಂತರ ಏನಾಗುತ್ತದೆ ಎಂಬುದರ ವಿವರ ಇಲ್ಲಿದೆ.

WhatsApp privacy policy: ವಾಟ್ಸಾಪ್ ಖಾಸಗಿತನ ನೀತಿಗೆ ಮೇ 15ರೊಳಗೆ ಸಮ್ಮತಿಸದಿದ್ದಲ್ಲಿ ಮುಂದೆ ಏನಾಗುತ್ತದೆ?
ವಾಟ್ಸಾಪ್ (ಪ್ರಾತಿನಿಧಿಕ ಚಿತ್ರ)
Follow us
Srinivas Mata
|

Updated on: May 08, 2021 | 7:02 PM

ಈ ಹಿಂದೆ ಘೋಷಣೆ ಮಾಡಿದಂತೆ ಮೇ 15ನೇ ತಾರೀಕಿನ ಗಡುವಿನಂದೇ ಇನ್​ಸ್ಟಂಟ್ ಮೆಸೇಜಿಂಗ್ ಪ್ಲಾಟ್​ಫಾರ್ಮ್ ಸಂಪೂರ್ಣವಾಗಿ ಬಳಕೆದಾರರಿಗೆ ದೊರೆಯದಿರುವಂತೆ ಆಗುವುದಿಲ್ಲ ಎಂದು ವಾಟ್ಸಾಪ್​ (WhatsApp) ಶುಕ್ರವಾರದಂದು ಸ್ಪಷ್ಟಪಡಿಸಿದೆ. ಖಾಸಗಿತನದ ನೀತಿ ಅಪ್​ಡೇಟ್ ಆಗಿಲ್ಲ ಎಂಬ ಕಾರಣಕ್ಕೆ ಯಾವ ಗ್ರಾಹಕರಿಗೂ ವಾಟ್ಸಾಪ್ ಕಾರ್ಯ ನಿರ್ವಹಣೆ ನಿಲ್ಲುವುದಿಲ್ಲ. ಆದರೆ ಅಪ್ಲಿಕೇಷನ್​ನಲ್ಲಿ ದೊರೆಯುವ ಸೇವೆಗಳು ಮಿತಿಗೊಳ್ಳಬಹುದು. ಫೇಸ್​ಬುಕ್ ಮಾಲೀಕತ್ವದ ಅಪ್ಲಿಕೇಷನ್ ಆದ ವಾಟ್ಸಾಪ್, ಬಳಕೆದಾರರಿಗೆ ಹೊಸ ಖಾಸಗಿತನದ ನೀತಿಗೆ ಸಮ್ಮತಿ ಸೂಚಿಸುವಂತೆ ನೆನಪಿಸುವುದನ್ನು ಮುಂದುವರಿಸುತ್ತದೆ. ವಾಟ್ಸಾಪ್ ಹೇಳುವ ಪ್ರಕಾರ, ಹಲವು ವಾರಗಳ ನಂತರವೂ ನೆನಪು ಮಾಡಿಕೊಡುವುದು ನಿರಂತರವಾಗಿ ಮುಂದುವರಿಯಲಿದೆ.

ಒಂದು ಸಲ ಬಳಕೆದಾರರಿಗೆ ಪದೇಪದೇ ನೆನಪು ಮಾಡಿಸಲು ಆರಂಭವಾದರೆ, ಆ ಗ್ರಾಹಕರು ಅಪ್​ಡೇಟ್​ಗೆ ಸಮ್ಮತಿ ಸೂಚಿಸುವ ತನಕ ವಾಟ್ಸಾಪ್​ನಲ್ಲಿ ಸೀಮಿತ ಕಾರ್ಯನಿರ್ವಹಣೆ ಮಾತ್ರ ಸಾಧ್ಯವಾಗುತ್ತದೆ. ಇದು ಎಲ್ಲ ಬಳಕೆದಾರರಿಗೂ ಒಂದೇ ಸಲಕ್ಕೆ ಆಗುವುದಿಲ್ಲ ಎಂದು ವಾಟ್ಸಾಪ್ ತಿಳಿಸಿದೆ. ವಾಟ್ಸಾಪ್ ಬಳಕೆದಾರರಿಗೆ ಚಾಟ್​ ಲಿಸ್ಟ್​ ಬಳಕೆ ಸಾಧ್ಯವಾಗದಿರಬಹುದು. ಆದರೆ ಒಳಬರುವ ಕರೆಗಳು ಮತ್ತು ವಿಡಿಯೋ ಕಾಲ್​ಗಳಿಗೆ ಉತ್ತರಿಸುವುದಕ್ಕೆ ಸಾಧ್ಯವಿದೆ. ಒಂದು ವೇಳೆ ಬಳಕೆದಾರರು ನೋಟಿಫಿಕೇಷನ್ ಎನೇಬಲ್ ಮಾಡಿದ್ದಲ್ಲಿ ಅದರ ಮೂಲಕ ಸಂದೇಶ ಓದಲು ಅಥವಾ ಪ್ರತಿಕ್ರಿಯಿಸಲು ಸಾಧ್ಯ. ಅಥವಾ ಮಿಸ್ಡ್ ಫೋನ್ ಅಥವಾ ವಿಡಿಯೋ ಕಾಲ್ ಪುನಃ ಕಾಲ್ ಮಾಡಲು ಸಾಧ್ಯ.

ಇನ್ನೂ ಕೆಲ ವಾರಗಳು ಕಳೆದ ಮೇಲೆ ಬಳಕೆದಾರರಿಗೆ ಒಳಬರುವ ಕರೆಗಳು ಅಥವಾ ನೋಟಿಫಿಕೇಷನ್​ಗಳು ಸ್ವೀಕರಿಸಲು ಆಗಲ್ಲ. ವಾಟ್ಸಾಪ್​ನಿಂದ ಅವರ ಫೋನ್​ಗೆ ಸಂದೇಶಗಳು ಮತ್ತು ಕರೆಗಳನ್ನು ಕಳುಹಿಸುವುದು ನಿಲ್ಲಿಸುತ್ತದೆ. ಖಾತೆ ಡಿಲೀಟ್ ಆಗಿಮ ಮೆಸೇಜ್ ಹಿಸ್ಟರಿ ಅಳಸಿಹೋಗುತ್ತದೆ. ಎಲ್ಲ ಇತರ ವಾಟ್ಸಾಪ್ ಗ್ರೂಪ್​ನಿಂದ ತೆಗೆಯಲಾಗುತ್ತದೆ. ಜತೆಗೆ ಅವರ ವಾಟ್ಸಾಪ್ ಬ್ಯಾಕ್​ಅಪ್ ಕೂಡ ಅಳಿಸಲಾಗುತ್ತದೆ.

ಇದನ್ನೂ ಓದಿ: ವಾಟ್ಸಾಪ್ ಖಾಸಗಿತನ ನಿಯಮಾವಳಿಗಳ ಅಪ್​ಡೇಟ್​ಗೆ ದೆಹಲಿ ಹೈಕೋರ್ಟ್​ನಲ್ಲಿ ತಡೆ ಕೋರಿದ ಸರ್ಕಾರ

(If WhatsApp privacy policy not accepted by users by May 15 deadline, what will happen? Here are the details)

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ