Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಟ್ಸಾಪ್ ಖಾಸಗಿತನ ನಿಯಮಾವಳಿಗಳ ಅಪ್​ಡೇಟ್​ಗೆ ದೆಹಲಿ ಹೈಕೋರ್ಟ್​ನಲ್ಲಿ ತಡೆ ಕೋರಿದ ಸರ್ಕಾರ

ವಾಟ್ಸಾಪ್​ನಿಂದ ಖಾಸಗಿತನ ನಿಯಮಾವಳಿಗಳಲ್ಲಿ ಅಪ್​ಡೇಟ್ ಮಾಡುವುದಕ್ಕೆ ತಡೆ ನೀಡಬೇಕು ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್​ನಲ್ಲಿ ಕೇಳಿಕೊಂಡಿದೆ. ಈ ಬಗ್ಗೆ ಅಫಿಡವಿಟ್ ಅನ್ನು ಸಲ್ಲಿಸಿದೆ.

ವಾಟ್ಸಾಪ್ ಖಾಸಗಿತನ ನಿಯಮಾವಳಿಗಳ ಅಪ್​ಡೇಟ್​ಗೆ ದೆಹಲಿ ಹೈಕೋರ್ಟ್​ನಲ್ಲಿ ತಡೆ ಕೋರಿದ ಸರ್ಕಾರ
ದೆಹಲಿ ಹೈ ಕೋರ್ಟ್
Follow us
Srinivas Mata
|

Updated on:Mar 20, 2021 | 4:38 PM

ನವದೆಹಲಿ: ವಾಟ್ಸಾಪ್​​ನಿಂದ ಖಾಸಗಿತನ ನಿಯಮಾವಳಿಗಳ ಅಪ್​ಡೇಟ್ ಮಾಡುವುದಕ್ಕೆ ತಡೆ ನೀಡಬೇಕು. ಅವುಗಳು ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತಕ್ಕಂತೆ ಇಲ್ಲ ಎಂದು ಕೇಂದ್ರ ಸರ್ಕಾರವು ಶುಕ್ರವಾರ ದೆಹಲಿ ಹೈಕೋರ್ಟ್​​ನಲ್ಲಿ ಕೇಳಿಕೊಂಡಿದೆ. ಈ ಬಗ್ಗೆ ಅಫಿಡವಿಟ್ ಸಲ್ಲಿಸಿರುವ ಸರ್ಕಾರ, ಪ್ರಸ್ತಾವಿತ ದತ್ತಾಂಶ ಸುರಕ್ಷತಾ ಮಸೂದೆ, 2019ಕ್ಕೆ ಇನ್ನೂ ಸಂಸತ್​​ನಲ್ಲಿ ಅನುಮೋದನೆ ಪಡೆಯಬೇಕಿದೆ. ಈ ಮಸೂದೆಯು ವಾಟ್ಸಾಪ್​ನಂಥ ಸೇವಾ ಪೂರೈಕೆದಾರರು ಖಾಸಗಿತನ ನಿಯಮವನ್ನು ನೀಡುವ ಸಾಮರ್ಥ್ಯ ಮಿತಿಗೊಳಿಸುತ್ತದೆ. ಅವುಗಳು ಸೂಕ್ತ ಗುಣಮಟ್ಟದ ಭದ್ರತೆ ಹಾಗೂ ದತ್ತಾಂಶ ರಕ್ಷಣಾ ವ್ಯವಸ್ಥೆಯನ್ನು ಹೊಂದಿಲ್ಲ ಎಂದು ತಿಳಿಸಲಾಗಿದೆ.

ವಾಟ್ಸಾಪ್​ನ ಪ್ರಸ್ತಾವಿತ ಖಾಸಗಿತನ ನಿಯಮಗಳ ಬದಲಾವಣೆಗೆ ತಡೆ ಕೋರಿ ಹಾಕಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರದಿಂದ ಅಫಿಡವಿಟ್ ಸಲ್ಲಿಸಲಾಗಿದೆ. ಬಳಕೆದಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಭಾರತದಲ್ಲಿ ವಾಟ್ಸಾಪ್ ಕಂಪೆನಿಯು ಬದಲಾವಣೆಯನ್ನು ಮುಂದೂಡಿತ್ತು. ಅಪ್​ಡೇಟ್​ನಿಂದ ಪ್ಲಾಟ್​ಫಾರ್ಮ್​ನಲ್ಲಿ ಮೂಲಭೂತವಾದ ಬದಲಾವಣೆ ಆಗಲ್ಲ. ಒಂದೋ ವಾಟ್ಸಾಪ್, ಇಲ್ಲ ಫೇಸ್​ಬುಕ್ ಅಥವಾ ಥರ್ಡ್ ಪಾರ್ಟಿ ಯಾರಿಗೆ ಸಂಪರ್ಕಕ್ಕೆ ಅವಕಾಶ ಇದೆಯೋ ಅವುಗಳಿಂದ (ಫೋನ್​ನಲ್ಲಿ ಸ್ಪೈವೇರ್ ಯಾವುದೂ ಇಲ್ಲದ ಪಕ್ಷದಲ್ಲಿ) ಮೊದಲಿಂದ ಕೊನೆ ತನಕ ಎನ್​ಕ್ರಿಪ್ಟ್ ಆಗುತ್ತದೆ. ಆದರೆ ಪಾವತಿ ಅಥವಾ ಖರೀದಿ ಮಾಹಿತಿ (ಉದ್ಯಮಕ್ಕಾಗಿ ವಾಟ್ಸಾಪ್​ನಲ್ಲಿ ಮಾಡಿದ್ದು) ಫೇಸ್​ಬುಕ್​ನೊಂದಿಗೆ ಹಂಚಿಕೆಯಾಗುತ್ತದೆ.

ಆದರೆ, ಈಚೆಗೆ ಕೇಂದ್ರ ಸರ್ಕಾರದಿಂದ ಪರಿಚಯಿಸಿದ ನೀತಿಗಳು ಆನ್​ಲೈನ್ ಬಳಕೆದಾರರ ಖಾಸಗಿತನ ಮತ್ತು ಎನ್​ಕ್ರಿಪ್ಷನ್​ಗೆ ಅಪಾಯ ತಂದೊಡ್ಡುತ್ತದೆ ಎನ್ನಲಾಗಿದೆ. ಸಾಮಾಜಿಕ ಮಾಧ್ಯಮಗಳು, ಡಿಜಿಟಲ್ ಸುದ್ದಿ ಮಾಧ್ಯಮ ಹಾಗೂ ಸ್ಟ್ರೀಮಿಂಗ್ ಸೇವೆಗಳ ಮೇಲೆ ನಿಯಂತ್ರಣ ಹೇರುವ ಸಲುವಾಗಿ ಸರ್ಕಾರ ಹೊಸ ಸಂಹಿತೆಯೊಂದನ್ನು ತಂದಿದೆ. ಉದಾಹರಣೆಗೆ, ವಾಟ್ಸಾಪ್​ನಂಥ ಪ್ಲಾಟ್​ಫಾರ್ಮ್​ಗಳಲ್ಲಿ ಮಾಹಿತಿಯ ಮೊದಲ ಮೂಲ ಎಲ್ಲಿಂದ ಬಂದಿದ್ದು ಎಂದು ವಿಚಾರಣೆ ನಡೆಸುವುದಕ್ಕೆ ಸರ್ಕಾರಕ್ಕೆ ವಾಟ್ಸಾಪ್​ನಿಂದ ಸಹಾಯ ಮಾಡಬೇಕಾಗುತ್ತದೆ.

ವಾಟ್ಸಾಪ್ ಸಂದೇಶವನ್ನು ಮೊದಲಿಂದ ಕೊನೆ ತನಕ ಎನ್​ಕ್ರಿಪ್ಷನ್ ಮುರಿಯದ ಹೊರತು ಸರ್ಕಾರದಿಂದ ಹೇಳುತ್ತಿರುವುದು ಪಾಲನೆ ಮಾಡಲು ಸಾಧ್ಯವೇ ಇಲ್ಲ ಎಂದು ಡೈಲಾಗ್ ತಂತ್ರಜ್ಞಾನ ನಿಯಮಾವಳಿಯ ಥಿಂಕ್ ಟ್ಯಾಂಕ್ ಸ್ಥಾಪಕರಾದ ಕಜೀಂ ರಿಜ್ವಿ ಹೇಳಿದ್ದಾರೆ.

ಇದನ್ನೂ ಓದಿ: WhatsApp Features: ಈ ಐದು ವಾಟ್ಸ್​​ಆ್ಯಪ್​ ಫೀಚರ್​ ಬಗ್ಗೆ ನೀವು ತಿಳಿದಿರಲೇಬೇಕು

Published On - 3:52 pm, Sat, 20 March 21

ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು