WhatsApp Features: ಈ ಐದು ವಾಟ್ಸ್ಆ್ಯಪ್ ಫೀಚರ್ ಬಗ್ಗೆ ನೀವು ತಿಳಿದಿರಲೇಬೇಕು
ಪ್ರತಿ ಬಾರಿಯೂ ಹೊಸ ಹೊಸ ಅಪ್ಡೇಟ್ಗಳನ್ನು ಬಿಡುವ ಮೂಲಕ ತನ್ನ ಬಳಕೆದಾರರಿಗೆ ಸುಲಭವಾಗುವಂತೆ ಮಾಡುತ್ತಿದೆ ವಾಟ್ಸಾಪ್. ಹಾಗಾದರೆ ವಾಟ್ಸ್ಆ್ಯಪ್ನಲ್ಲಿರುವ ಹಿಡೆನ್ ಫೀಚರ್ಗಳು ಯಾವವು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಗೌಪ್ಯತಾ ನೀತಿ ಬದಲಾವಣೆ ನಿರ್ಧಾರದಿಂದ ವಾಟ್ಸ್ಆ್ಯಪ್ ಒಂದಷ್ಟು ಬಳಕೆದಾರರನ್ನು ಕಳೆದುಕೊಂಡಿದ್ದಂತೂ ಸತ್ಯ. ಆದರೆ, ಇದು ವಾಟ್ಸ್ಆ್ಯಪ್ಗೆ ದೊಡ್ಡ ಮಟ್ಟದಲ್ಲಿ ಹೊಡೆತ ನೀಡಿಲ್ಲ. ವಾಟ್ಸ್ಆ್ಯಪ್ ವಿಶ್ವಾದ್ಯಂತ ಬರೋಬ್ಬರಿ 200 ಕೋಟಿ ಬಳಕೆದಾರರನ್ನು ಹೊಂದಿದೆ. ಪ್ರತಿ ಬಾರಿಯೂ ಹೊಸ ಹೊಸ ಅಪ್ಡೇಟ್ಗಳನ್ನು ಬಿಡುವ ಮೂಲಕ ತನ್ನ ಬಳಕೆದಾರರಿಗೆ ಸುಲಭವಾಗುವಂತೆ ಮಾಡುತ್ತಿದೆ ವಾಟ್ಸ್ಆ್ಯಪ್. ಹಾಗಾದರೆ ವಾಟ್ಸ್ಆ್ಯಪ್ನಲ್ಲಿರುವ ಹಿಡೆನ್ ಫೀಚರ್ಗಳು ಯಾವವು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಬ್ಲ್ಯೂ ಟಿಕ್ ಹೈಡ್ ವಾಟ್ಸ್ಆ್ಯಪ್ನಲ್ಲಿ ನೀವು ಕಳುಹಿಸಿದ ಮೆಸೇಜ್ ಅನ್ನು ಮತ್ತೊಂದು ಕಡೆಯಲ್ಲಿದ್ದವರು ಓದಿದರೆ ಬ್ಲ್ಯೂ ಟಿಕ್ ಬರುತ್ತದೆ. ಕೆಲವೊಮ್ಮೆ ಕಳುಹಿಸಿದ ಮೆಸೇಜ್ಗೆ ಬ್ಲ್ಯೂ ಟಿಕ್ ಬಂದರೂ ರಿಪ್ಲೈ ಮಾಡುತ್ತಿಲ್ಲ ಎಂದು ಜಗಳ ಮಾಡಿದ ಉದಾಹರಣೆ ಇರಬಹುದು. ಹೀಗಾಗಿ ಬ್ಲ್ಯೂ ಟಿಕ್ ತೆಗೆದು ಬಿಟ್ಟರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹಾಗಾದರೆ ಇದನ್ನು ತೆಗೆಯೋದು ಹೆಗೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ವಾಟ್ಸ್ಆ್ಯಪ್ ಸೆಟ್ಟಿಂಗ್ > ಅಕೌಂಟ್ > ಪ್ರವೈಸಿ > Read Receipts ಅನ್ನು ಅನ್ಟಿಕ್ ಮಾಡಿ. (ಇದು ಗ್ರೂಪ್ ಚ್ಯಾಟ್ಗೆ ಅಪ್ಲೈ ಆಗುವುದಿಲ್ಲ)
ಪ್ರೊಫೈಲ್ ಪಿಕ್ಚರ್ ಹೈಡ್ ಮಾಡೋದು ಹೇಗೆ? ನೀವು ಕೆಲವೊಮ್ಮೆ ಪ್ರೊಫೈಲ್ ಪಿಕ್ಚರ್ ತೆಗೆಯದೆಯೂ ಅದನ್ನು ಹೈಡ್ ಮಾಡಬಹುದು. ಅದು ಹೇಗೆ ಎನ್ನುವುದಕ್ಕೆ ಇಲ್ಲಿದೆ ಉತ್ತರ. ಅದಕ್ಕೆ ನೀವು ಹೀಗೆ ಮಾಡಿ. ಸೆಟ್ಟಿಂಗ್ > ಅಕೌಂಟ್ > ಪ್ರೈವೆಸಿ > ಪ್ರೊಫೈಲ್ ಫೋಟೊಗೆ ಹೋಗಿ. ಈ ವೇಳೆ ನಿಮಗೆ ಎವರಿವನ್, ಮೈ ಕಾಂಟ್ಯಾಕ್ಟ್ಸ್, ನೋಬಡಿ ಎನ್ನುವ ಆಯ್ಕೆ ಸಿಗುತ್ತದೆ. ಈ ವೇಳೆ ನೋಬಡಿ ಎನ್ನುವ ಆಯ್ಕೆ ಕ್ಲಿಕ್ ಮಾಡಿದರೆ ಪ್ರೊಫೈಲ್ ಪಿಕ್ಚರ್ ಯಾರಿಗೂ ಕಾಣುವುದಿಲ್ಲ.
ಗ್ರೂಪ್ ಮೆಸೇಜ್ಗಳಿಗೆ ಪ್ರೈವೇಟ್ ಆಗಿ ರಿಪ್ಲೈ ಮಾಡೋದು ಹೇಗೆ? ಯಾರೋ ಏನನ್ನೋ ಗ್ರೂಪ್ನಲ್ಲಿ ಹಾಕುತ್ತಾರೆ. ಅದರ ಬಗ್ಗೆ ನಿಮಗೆ ಗ್ರೂಪ್ನಲ್ಲೇ ರಿಪ್ಲೈ ಮಾಡಲು ಇಷ್ಟವಿರುವುದಿಲ್ಲ. ಈ ವೇಳೆ ಸಹಾಯಕ್ಕೆ ಬರುವುದೇ ಖಾಸಗಿಯಾಗಿ ಉತ್ತರಿಸಿ (Reply Privately) ಎನ್ನುವ ಆಯ್ಕೆ. ಗ್ರೂಪ್ನಲ್ಲಿ ಬಂದ ಚ್ಯಾಟ್ ಮೇಲೆ ಕ್ಲಿಕ್ ಮಾಡಿ. ಈ ವೇಳೆ ಅಲ್ಲಿ Reply Privately ಎನ್ನುವ ಆಯ್ಕೆ ಸಿಗುತ್ತದೆ.
ಆಟೋ ಡೌನ್ಲೋಡ್ ಕೆಲ ಗ್ರೂಪ್ಗಳಲ್ಲಿ ನೀವು ಅನಿವಾರ್ಯವಾಗಿ ಇರಬೇಕಾಗುತ್ತದೆ. ಆದರೆ, ಮೀಡಿಯಾ ಆಟೋ ಡೌನ್ಲೋಡ್ ಆಯ್ಕೆಯಿಂದ ಈ ಗ್ರೂಪ್ನ ಮೀಡಿಯಾ ಡೌನ್ಲೋಡ್ ಆಗುತ್ತದೆ. ಇದರಿಂದ ನಿಮ್ಮ ಸ್ಟೋರೇಜ್ಗೆ ಸಮಸ್ಯೆ ಉಂಟಾಗಬಹುದು. ಈ ಆಟೋ ಡೌನ್ಲೋಡ್ ಆಯ್ಕೆಯನ್ನು ತೆಗೆದು ಹಾಕಬಹುದು. ವಾಟ್ಸ್ಆ್ಯಪ್ ಸೆಟ್ಟಿಂಗ್ > ಮೀಡಿಯಾ ಆಟೋ ಡೌನ್ಲೋಡ್ > ಆಟೋ ಡೌನ್ಲೋಡ್ ಡಿಸೇಬಲ್
ಬ್ಲಾಕ್ ಮಾಡುವುದು ಹೇಗೆ? ನಿಮಗೆ ಸಂಬಂಧ ಇಲ್ಲದವರು ವಾಟ್ಸ್ ಆ್ಯಪ್ನಲ್ಲಿ ನಿಮಗೆ ತೊಂದರೆ ಕೊಡುತ್ತಿದ್ದಾರೆ ಎಂದಾದರೆ ಆಗ ಸಿಗುವ ಆಯ್ಕೆಯೇ ಬ್ಲಾಕ್. ನಿಮಗೆ ಯಾವ ಕಾಂಟ್ಯಾಕ್ಟ್ ಬ್ಲಾಕ್ ಮಾಡಬೇಕೋ ಅಲ್ಲಿಗೆ ತೆರಳಿ. ಅಲ್ಲಿ ಕಾಂಟ್ಯಾಕ್ಟ್ ಬ್ಲಾಕ್ ಆಯ್ಕೆಯನ್ನು ಒತ್ತಿ.
ಇದನ್ನೂ ಓದಿ: WhatsApp Privacy: ವಾಟ್ಸ್ಆ್ಯಪ್ ಗೌಪ್ಯತೆ ನೀತಿಯನ್ನು ಗ್ರಾಹಕರು ಪಾಲಿಸದೇ ಇದ್ದರೆ ಏನಾಗುತ್ತೆ?