ಸ್ಟಾರ್ ನಟ ನಟಿಯರೆಲ್ಲ ಇಂಥ ಸನ್ನಿವೇಶ ಸೃಷ್ಟಿಯಾದಾಗ ಯಾಕೆ ಒಂದಾಗಲ್ಲವೋ ಗೊತ್ತಿಲ್ಲ: ರಮ್ಯಾ, ಚಿತ್ರನಟಿ
ದರ್ಶನ್ ಅಭಿಮಾನಗಳ ವಿರುದ್ಧ ರಮ್ಯಾ ನಡೆಸುತ್ತಿರುವ ಹೋರಾಟದಲ್ಲಿ ಕೆಲ ಕನ್ನಡಪರ ಸಂಘಟನೆಗಳು ಕೈ ಜೋಡಿಸಿವೆ. ಅವರೆಲ್ಲರಿಗೆ ನಟಿ ಧನ್ಯವಾದ ಸಲ್ಲಿಸಿದರು. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧುರಿ ಅವರಿಗೂ ಚಿತ್ರನಟಿ ಧನ್ಯವಾದ ಹೇಳಿದರು. ಸೈಬರ್ ಕ್ರೈಮ್ ಸೆಲ್ಗೆ ನೀಡಿರುವ ದೂರಿನಲ್ಲಿ ರಮ್ಯಾ, ದರ್ಶನ್ ಅಭಿಮಾನಿಗಳು ತಮ್ಮ ವಿರುದ್ಧ ಕೆಟ್ಟ ಮತ್ತು ಅಶ್ಲೀಲ ಪದಗಳನ್ನು ಬಳಸಿದ್ದಾರೆಂದು ಹೇಳಿದ್ದಾರೆ.
ಬೆಂಗಳೂರು, ಜುಲೈ 28: ಚಿತ್ರನಟಿ ರಮ್ಯಾ ಇಂದು ಸಾಯಂಕಾಲ ದರ್ಶನ್ ಫ್ಯಾನ್ ಗಳ (Darshan fans) ಅಶ್ಲೀಲ ಮೆಸೇಜುಗಳ ವಿರುದ್ಧ ಪೊಲೀಸ್ ಕಮೀಷನರ್ ಕಚೇರಿಗೆ ಬಂದು ದೂರು ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತಾಡಿದರು. ಇಂಥ ಸಂದರ್ಭಗಳು ಎದುರಾದಾಗ ಸನ್ನಿವೇಶಗಳು ಸೃಷ್ಟಿಯಾದಾಗ ಯಾಕೆ ಸ್ಟಾರ್ ನಟರೆಲ್ಲ ಒಂದಾಗಲ್ಲ ಕೇಳಿದ ಪ್ರಶ್ನೆಗೆ ರಮ್ಯಾ, ಎಲ್ಲರೂ ಒಂದಾಗಬೇಕು ನಿಜ, ಆದರೆ ಯಾಕೆ ಆಗುತ್ತಿಲ್ಲವೋ ಗೊತ್ತಿಲ್ಲ, ಕೆಲವರಿಗೆ ತಮ್ಮ ಚಿತ್ರಗಳ ಎಲ್ಲಿ ಪ್ರಭಾವ ಬೀಳುತ್ತದೋ ಅಂತ ಆತಂಕವಿರಬಹುದು, ಅಭಿಮಾನಿಗಳ ನಡುವೆ ಸಂಘರ್ಷ ಶುರುವಾಗಬಹುದು ಅಂತ ಕೆಲವರು ಅಂದುಕೊಳ್ಳುತ್ತಿರಬಹುದು, ಇನ್ನೂ ಕೆಲವರು ಮೌನವಾಗಿರೋದೇ ಒಳ್ಳೆಯದು ಅಂದುಕೊಂಡಿರಬಹುದು, ಉಳಿದವರಿಗೆ ಇದು ಎಲ್ಲಿಯವರೆಗೆ ಹೋಗುತ್ತೋ ನೋಡೋಣ ಎಂಬ ಕುತೂಹಲ ಇರಬಹುದು ಎಂದು ಹೇಳಿದರು.
ಇದನ್ನೂ ಓದಿ: ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇಲ್ಲಿದೆ ಮುಖ್ಯ ಕಾರಣ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

