AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Airplane Mode: ಏರ್‌ಪ್ಲೇನ್ ಮೋಡ್‌ನ ಈ ಐದು ಹಿಡನ್ ಫೀಚರ್ಸ್ ಬಗ್ಗೆ ನಿಮಗೆ ತಿಳಿದಿದೆಯೇ?

ಮಕ್ಕಳು ಫೋನ್ ಬಳಸುವಾಗ ಈ ವೈಶಿಷ್ಟ್ಯವು ವಿಶೇಷವಾಗಿ ಉಪಯುಕ್ತವಾಗಿದೆ. ನಿಮ್ಮ ಫೋನ್‌ನಲ್ಲಿ ಗೇಮ್ಗಳನ್ನು ಆಡುವಾಗ ನಿಮ್ಮ ಮಕ್ಕಳನ್ನು ಇಂಟರ್ನೆಟ್‌ನಿಂದ ದೂರವಿಡಲು ಈ ವೈಶಿಷ್ಟ್ಯವು ನಿಮಗೆ ಸಹಾಯ ಮಾಡುತ್ತದೆ. ಅವರಿಗೆ ಫೋನ್ ನೀಡುವ ಮೊದಲು, ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿ ಅವರಿಗೆ ನೀಡಿ.

Airplane Mode: ಏರ್‌ಪ್ಲೇನ್ ಮೋಡ್‌ನ ಈ ಐದು ಹಿಡನ್ ಫೀಚರ್ಸ್ ಬಗ್ಗೆ ನಿಮಗೆ ತಿಳಿದಿದೆಯೇ?
Airplane Mode
ಮಾಲಾಶ್ರೀ ಅಂಚನ್​
| Edited By: |

Updated on:Jul 30, 2025 | 8:09 PM

Share

ಬೆಂಗಳೂರು (ಜು. 28): ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ (Smartphone) ಏರ್‌ಪ್ಲೇನ್ ಮೋಡ್ ಎಂಬ ಫೀಚರ್ ಇರುವುದು ಎಲ್ಲರಿಗೂ ತಿಳಿದಿದೆ. ಆದರೆ, ಇಂದಿಗೂ ಸಹ ಅನೇಕ ಜನರು ಈ ಮೋಡ್ ವಿಮಾನ ಪ್ರಯಾಣದ ಸಮಯದಲ್ಲಿ ಮಾತ್ರ ಉಪಯುಕ್ತ ಎಂದು ಭಾವಿಸುತ್ತಾರೆ, ಆದರೆ ಈ ಮೋಡ್ ನಿಮ್ಮ ದೈನಂದಿನ ಜೀವನದಲ್ಲಿ ಅನೇಕ ವಿಷಯಗಳನ್ನು ಸುಲಭಗೊಳಿಸುತ್ತದೆ ಎಂದು ನಿಮಗೆ ತಿಳಿದಿದೆಯೇ. ನಾವು ನಮ್ಮ ಮೊಬೈಲ್‌ನಲ್ಲಿ ಹೆಚ್ಚು ಕೆಲಸ ಮಾಡದಿದ್ದಾಗ, ಈ ಮೋಡ್ ಅನ್ನು ಆನ್ ಮಾಡುವುದರಿಂದ ನೆಟ್‌ವರ್ಕ್‌ಗಳು, ವೈ-ಫೈ, ಬ್ಲೂಟೂತ್‌ನಂತಹ ಸಾಧನದ ಎಲ್ಲಾ ವೈರ್‌ಲೆಸ್ ಸಂಪರ್ಕಗಳನ್ನು ತಾತ್ಕಾಲಿಕವಾಗಿ ಆಫ್ ಮಾಡುತ್ತದೆ. ಇದು ಬ್ಯಾಟರಿ ಬಳಕೆಯನ್ನು ಕಡಿಮೆ ಮಾಡುವುದಲ್ಲದೆ, ಅದರ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಏರ್‌ಪ್ಲೇನ್ ಮೋಡ್‌ನ ಇತರ ಪ್ರಯೋಜನಗಳೇನು ಎಂದು ನೋಡೋಣ.

ಮೊಬೈಲ್ ಬೇಗನೆ ಚಾರ್ಜ್ ಆಗುವುದು

ನಿಮ್ಮ ಫೋನ್ ಚಾರ್ಜ್​ಗೆ ಇಟ್ಟಾಗ ಅದು ನಿಧಾನವಾಗಿ ಚಾರ್ಜ್ ಆಗುತ್ತಿದ್ದರೆ, ಈ ಮೋಡ್ ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ನಿಮ್ಮ ಮೊಬೈಲ್ ಅನ್ನು ವೇಗವಾಗಿ ಚಾರ್ಜ್ ಮಾಡಲು ಬಯಸಿದರೆ, ಏರ್‌ಪ್ಲೇನ್ ಮೋಡ್ ಆನ್ ಇರಿಸಿ. ಹೀಗೆ ಮಾಡುವುದರಿಂದ, ಚಾಲನೆಯಲ್ಲಿರುವ ನೆಟ್‌ವರ್ಕ್ ಚಟುವಟಿಕೆ ಸಂಪೂರ್ಣವಾಗಿ ನಿಲ್ಲುತ್ತದೆ. ಇದು ಫೋನ್‌ನ ಚಾರ್ಜಿಂಗ್ ವೇಗವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ
Image
ಅಮೆಜಾನ್​ ಅತಿ ದೊಡ್ಡ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2025 ದಿನಾಂಕ ಘೋಷಣೆ
Image
ನಿಮ್ಮ ಫೋನ್ ಹಾಳಾಗುವ ಮುನ್ನ ನೀಡುವ ಸೂಚನೆ ಇದು: ನಿರ್ಲಕ್ಷಿಸಬೇಡಿ
Image
ನಿಮ್ಮಲ್ಲಿರುವುದು ಕಳ್ಳತನವಾದ ಸೆಕೆಂಡ್ ಹ್ಯಾಂಡ್ ಫೋನ್?
Image
ಬರುತ್ತಿದೆ ಆಪಲ್‌ನ ಮೊದಲ ಮಡಿಸಬಹುದಾದ ಐಫೋನ್: ಇದರ ಬೆಲೆ ಎಷ್ಟು ಲಕ್ಷ?

ಬ್ಯಾಟರಿಯನ್ನೂ ಉಳಿಸುತ್ತದೆ

ನೀವು ಕಳಪೆ ನೆಟ್‌ವರ್ಕ್ ಕವರೇಜ್ ಹೊಂದಿರುವ ಪ್ರದೇಶದಲ್ಲಿದ್ದರೆ, ನಿಮ್ಮ ಫೋನ್ ನಿರಂತರವಾಗಿ ಸಿಗ್ನಲ್‌ಗಾಗಿ ಹುಡುಕುತ್ತಿರುತ್ತದೆ, ಇದು ನಿಮ್ಮ ಬ್ಯಾಟರಿಯನ್ನು ಬೇಗನೆ ಖಾಲಿ ಮಾಡಬಹುದು. ಆದಾಗ್ಯೂ, ಅಂತಹ ಸಂದರ್ಭಗಳಲ್ಲಿಯೂ ಸಹ, ನೀವು ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡುವ ಮೂಲಕ ಬ್ಯಾಟರಿಯನ್ನು ಉಳಿಸಬಹುದು.

Tech Tips: ನಿಮ್ಮ ಫೋನ್ ಹಾಳಾಗುವ ಮುನ್ನ ನೀಡುವ ಸೂಚನೆ ಇದು: ನಿರ್ಲಕ್ಷಿಸಬೇಡಿ

ಗಮನ ಕೇಂದ್ರೀಕರಿಸಲು

ನಾವು ಯಾವುದಾದರೂ ಪ್ರಮುಖ ಕೆಲಸ ಮಾಡುವಾಗ ಅಥವಾ ಅಧ್ಯಯನ ಮಾಡುವಾಗ.. ನಿಮ್ಮ ಫೋನ್‌ನಲ್ಲಿ ನಿರಂತರ ನೋಟಿಫಿಕೇಷನ್ ಬಂದಾಗ ಆಗ ಏಕಾಗ್ರತೆಯನ್ನು ಕಳೆದುಕೊಳ್ಳುತ್ತೀರಿ. ಅಂತಹ ಸಮಯದಲ್ಲಿ, ನೀವು ಏರ್‌ಪ್ಲೇನ್ ಮೋಡ್ ಅನ್ನು ಬಳಸಬಹುದು. ನೀವು ಅದನ್ನು ಆನ್ ಮಾಡಿದ ನಂತರ, ನಿಮಗೆ ಯಾವುದೇ ಕರೆಗಳು ಬರುವುದಿಲ್ಲ ಅಥವಾ ಇತರ ಸಂದೇಶಗಳು ಸಹ ನಿಮ್ಮನ್ನು ತೊಂದರೆಗೊಳಿಸುವುದಿಲ್ಲ.

ಮಕ್ಕಳನ್ನು ಇಂಟರ್ನೆಟ್‌ನಿಂದ ದೂರವಿಡುತ್ತದೆ

ಮಕ್ಕಳು ಫೋನ್ ಬಳಸುವಾಗ ಈ ವೈಶಿಷ್ಟ್ಯವು ವಿಶೇಷವಾಗಿ ಉಪಯುಕ್ತವಾಗಿದೆ. ನಿಮ್ಮ ಫೋನ್‌ನಲ್ಲಿ ಗೇಮ್​ಗಳನ್ನು ಆಡುವಾಗ ನಿಮ್ಮ ಮಕ್ಕಳನ್ನು ಇಂಟರ್ನೆಟ್‌ನಿಂದ ದೂರವಿಡಲು ಈ ವೈಶಿಷ್ಟ್ಯವು ನಿಮಗೆ ಸಹಾಯ ಮಾಡುತ್ತದೆ. ಅವರಿಗೆ ಫೋನ್ ನೀಡುವ ಮೊದಲು, ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿ ಅವರಿಗೆ ನೀಡಿ.

ಫೋನ್ ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳುತ್ತದೆ

ಕೆಲವೊಮ್ಮೆ ಸಿಗ್ನಲ್ ಕೊರತೆ ಅಥವಾ ಹೆಚ್ಚಿನ ಕೆಲಸದ ಹೊರೆಯಿಂದಾಗಿ ನಿಮ್ಮ ಫೋನ್ ಬಿಸಿಯಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡುವುದರಿಂದ ಪ್ರೊಸೆಸರ್ ಮೇಲಿನ ಲೋಡ್ ಕಡಿಮೆಯಾಗುತ್ತದೆ, ನಿಮ್ಮ ಮೊಬೈಲ್ ಅನ್ನು ತಂಪಾಗಿಸುತ್ತದೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.

ಗಮನಿಸಿ: ಮೇಲೆ ಸೂಚಿಸಲಾದ ಎಲ್ಲಾ ತಂತ್ರಗಳನ್ನು ನಿಮಗೆ ನಿಮ್ಮ ಫೋನ್ ಹೆಚ್ಚು ಅಗತ್ಯವಿಲ್ಲದಿದ್ದಾಗ ಬಳಸಬಹುದು, ನೆಟ್‌ವರ್ಕ್ ಸಮಸ್ಯೆಗಳಿದ್ದಾಗ, ತುರ್ತು ಸಮಯಗಳಿಂದ ಅವುಗಳನ್ನು ಹೊರಗಿಡುವುದು ಉತ್ತಮ. (ಅಂದರೆ ರಾತ್ರಿ ನಾವು ಮಲಗಿದಾಗ, ವಿಶ್ರಾಂತಿ ಪಡೆಯುವಾಗ)

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Mon, 28 July 25