Redmi Note 14 SE 5G: ಭಾರತದಲ್ಲಿ ರೆಡ್ಮಿ ನೋಟ್ 14 SE 5G ಬಿಡುಗಡೆ: ಬೆಲೆ ಕೇವಲ 14,999 ರೂ.
ರೆಡ್ಮಿ ನೋಟ್ 14 SE 5G ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದೆ, ಇದರಲ್ಲಿ 50-ಮೆಗಾಪಿಕ್ಸೆಲ್ ಸೋನಿ LYT-600 ಪ್ರಾಥಮಿಕ ಸಂವೇದಕ ಜೊತೆಗೆ 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಸೇರಿವೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು (ಜು. 29): ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿ ತನ್ನ ಸಬ್ಬ್ರ್ಯಾಮಡ್ ರೆಡ್ಮಿ ಅಡಿಯಲ್ಲಿ ಹೊಸ ರೆಡ್ಮಿ ನೋಟ್ 14 SE 5G (Redmi Note 14 SE 5G) ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮನ್ಸಿಟಿ 7025 ಅಲ್ಟ್ರಾ ಚಿಪ್‌ಸೆಟ್ ಮತ್ತು 5,110mAh ಬ್ಯಾಟರಿಯೊಂದಿಗೆ ಬರುತ್ತದೆ. 50-ಮೆಗಾಪಿಕ್ಸೆಲ್ ಸೋನಿ LYT-600 ಸಂವೇದಕವನ್ನು ಹೊಂದಿರುವ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಇದರಲ್ಲಿದೆ. ಇದು ಡಿಸೆಂಬರ್ 2024 ರಲ್ಲಿ ಅನಾವರಣಗೊಂಡ ಇತರ Note 14 5G ಸರಣಿಯ ಫೋನ್‌ಗಳಿಗೆ ಸೇರುತ್ತದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ರೆಡ್ಮಿ ನೋಟ್ 14 SE 5G ಬೆಲೆ, ಲಭ್ಯತೆ:
ಭಾರತದಲ್ಲಿ ರೆಡ್ಮಿ ನೋಟ್ 14 SE 5G ಬೆಲೆಯನ್ನು 6GB + 128GB ಗೆ 14,999 ರೂ. ನಿಗದಿಪಡಿಸಲಾಗಿದೆ. ಇದು ಆಗಸ್ಟ್ 7 ರಿಂದ ದೇಶದಲ್ಲಿ ಫ್ಲಿಪ್ಕಾರ್ಟ್, ಶವೋಮಿ ಇಂಡಿಯಾ ಇ-ಸ್ಟೋರ್, ಶವೋಮಿಯ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳು ಮತ್ತು ಇತರ ಅಧಿಕೃತ ಪಾಲುದಾರರ ಮೂಲಕ ಮಾರಾಟಕ್ಕೆ ಬರಲಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ ಗ್ರಾಹಕರು 1,000 ರೂ. ರಿಯಾಯಿತಿಯನ್ನು ಪಡೆಯಬಹುದು.
ರೆಡ್ಮಿ ನೋಟ್ 14 SE 5G ಫೀಚರ್ಸ್
ರೆಡ್ಮಿ ನೋಟ್ 14 SE 5G ಫೋನ್ 6.67-ಇಂಚಿನ ಪೂರ್ಣ-HD+ (1,080×2,400 ಪಿಕ್ಸೆಲ್‌ಗಳು) AMOLED ಪರದೆಯನ್ನು ಹೊಂದಿದೆ. ಡಿಸ್ಪ್ಲೇ HDR10+ ಮತ್ತು ಡಾಲ್ಬಿ ವಿಷನ್ ಅನ್ನು ಸಹ ಬೆಂಬಲಿಸುತ್ತದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನೊಂದಿಗೆ ರಕ್ಷಿಸಲ್ಪಟ್ಟಿದೆ. ಈ ಹ್ಯಾಂಡ್‌ಸೆಟ್ 6GB RAM ಮತ್ತು 128GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಯಾಗಿರುವ ಮೀಡಿಯಾಟೆಕ್ ಡೈಮನ್ಸಿಟಿ 7025 Ultra SoC ನಿಂದ ಚಾಲಿತವಾಗಿದೆ. ಇದು ಆಂಡ್ರಾಯ್ಡ್ 15-ಆಧಾರಿತ HyperOS 2.0 ನೊಂದಿಗೆ ಬರುತ್ತದೆ.
Tech Tips: ನೀವು ಕೂಡ ಮೋದಿ ಜೊತೆ ಶೇಕ್ ಹ್ಯಾಂಡ್ ಮಾಡಬೇಕಾ?: ಈ ವಿಡಿಯೋ ಹೇಗೆ ಮಾಡುವುದು ನೋಡಿ
ಕ್ಯಾಮೆರಾ ವಿಭಾಗದಲ್ಲಿ, ರೆಡ್ಮಿ ನೋಟ್ 14 SE 5G ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದೆ, ಇದರಲ್ಲಿ 50-ಮೆಗಾಪಿಕ್ಸೆಲ್ ಸೋನಿ LYT-600 ಪ್ರಾಥಮಿಕ ಸಂವೇದಕ ಜೊತೆಗೆ 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಸೇರಿವೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ, ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 20-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ. ಇದು ಡಾಲ್ಬಿ ಆಡಿಯೊ ಬೆಂಬಲದೊಂದಿಗೆ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳನ್ನು ಹೊಂದಿದೆ.
ರೆಡ್ಮಿ ನೋಟ್ 14 SE 5G 5,110mAh ಬ್ಯಾಟರಿಯನ್ನು ಹೊಂದಿದ್ದು, 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಸಂಪರ್ಕ ಆಯ್ಕೆಗಳಲ್ಲಿ 5G, 4G, Wi-Fi, ಬ್ಲೂಟೂತ್, GPS, 3.5mm ಆಡಿಯೊ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಸೇರಿವೆ. ಹ್ಯಾಂಡ್‌ಸೆಟ್ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP64 ರೇಟಿಂಗ್ ಅನ್ನು ಹೊಂದಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








