AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Foldable iPhone: ಬರುತ್ತಿದೆ ಆಪಲ್‌ನ ಮೊದಲ ಮಡಿಸಬಹುದಾದ ಐಫೋನ್: ಇದರ ಬೆಲೆ ಎಷ್ಟು ಲಕ್ಷ ಗೊತ್ತೇ?

Apple's first foldable iPhone: ಮಡಚಬಹುದಾದ ಐಫೋನ್ 5.5-ಇಂಚಿನ ಕವರ್ ಡಿಸ್ಪ್ಲೇ ಮತ್ತು 7.8-ಇಂಚಿನ ಒಳಗಿನ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಈ ಪರದೆಯ ಗಾತ್ರವನ್ನು ನೋಡಿದಾಗ, ಮಡಚಬಹುದಾದ ಐಫೋನ್‌ನಲ್ಲಿರುವ ಎರಡು ಡಿಸ್ಪ್ಲೇಗಳು ಇತ್ತೀಚೆಗೆ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 7 ಗಿಂತ ಚಿಕ್ಕದಾಗಿ ಕಾಣುತ್ತವೆ.

Foldable iPhone: ಬರುತ್ತಿದೆ ಆಪಲ್‌ನ ಮೊದಲ ಮಡಿಸಬಹುದಾದ ಐಫೋನ್: ಇದರ ಬೆಲೆ ಎಷ್ಟು ಲಕ್ಷ ಗೊತ್ತೇ?
Apple Foldable Iphone
ಪ್ರೀತಿ ಭಟ್​, ಗುಣವಂತೆ
| Updated By: Vinay Bhat|

Updated on:Jul 30, 2025 | 8:01 PM

Share

ಬೆಂಗಳೂರು (ಜು. 25): ಆಪಲ್ ಐಫೋನ್.. (Apple iPhone) ಕ್ರೇಜ್ ಇಂದು ಬೇರೆ ಲೆವೆನ್​ನಲ್ಲಿದೆ. ಎಲ್ಲರೂ ನಾನೊಂದು ಐಫೋನ್ ಬಳಸಬೇಕು ಕನಸು ಕಾಣುತ್ತಾರೆ. ಆದರೆ ಹೆಚ್ಚಿನ ದರದಿಂದಾಗಿ ಅನೇಕ ಜನರು ಒಂದು ಹೆಜ್ಜೆ ಹಿಂದಕ್ಕೆ ಇಡುತ್ತಾರೆ. ಭದ್ರತಾ ವೈಶಿಷ್ಟ್ಯಗಳು ಉತ್ತಮವಾಗಿರುವುದರಿಂದ ಎಲ್ಲರೂ ಆಪಲ್ ಫೋನ್‌ನಲ್ಲಿ ಆಸಕ್ತಿ ಹೊಂದಿದ್ದಾರೆ. ಕೆಲವೇ ದಿನಗಳಲ್ಲಿ ಹೊಸ ಆವೃತ್ತಿಯ ಐಫೋನ್ 17 ಏರ್ ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ, ಆಪಲ್ ಶೀಘ್ರದಲ್ಲೇ ಮಡಚಬಹುದಾದ ಸ್ಮಾರ್ಟ್‌ಫೋನ್ ವಿಭಾಗವನ್ನು ಪ್ರವೇಶಿಸಲಿದೆ. ಕಂಪನಿಯ ಮೊದಲ ಮಡಚಬಹುದಾದ ಐಫೋನ್ ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆಯಿದೆ. ಮಡಚಬಹುದಾದ ಐಫೋನ್ ಬಗ್ಗೆ ತಿಳಿದುಕೊಳ್ಳಲು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಫೋನ್ ಬಗ್ಗೆ ಇದೀಗ ಇನ್ನಷ್ಟು ಕೆಲವು ಸೋರಿಕೆಗಳು ಬರುತ್ತಿವೆ.

ಮಡಿಸಬಹುದಾದ ಐಫೋನ್ ಡಿಸ್​ಪ್ಲೇ ಗಾತ್ರ

ಟ್ರೆಂಡ್‌ಫೋರ್ಸ್ ವರದಿಯ ಪ್ರಕಾರ, ಮಡಚಬಹುದಾದ ಐಫೋನ್ 5.5-ಇಂಚಿನ ಕವರ್ ಡಿಸ್​ಪ್ಲೇ ಮತ್ತು 7.8-ಇಂಚಿನ ಒಳಗಿನ ಡಿಸ್​ಪ್ಲೇಯನ್ನು ಹೊಂದಿರುತ್ತದೆ. ಈ ಪರದೆಯ ಗಾತ್ರವನ್ನು ನೋಡಿದಾಗ, ಮಡಚಬಹುದಾದ ಐಫೋನ್‌ನಲ್ಲಿರುವ ಎರಡು ಡಿಸ್​ಪ್ಲೇಗಳು ಇತ್ತೀಚೆಗೆ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 7 ಗಿಂತ ಚಿಕ್ಕದಾಗಿ ಕಾಣುತ್ತವೆ.

ಇದನ್ನೂ ಓದಿ
Image
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪದೇ ಪದೇ ನೆಟ್‌ವರ್ಕ್ ಸಮಸ್ಯೆ ಆಗುತ್ತಾ?
Image
ಮಾರುಕಟ್ಟೆಯನ್ನೇ ಬೆಚ್ಚಿಬೀಳಿಸಿದ 10,000mAh ಬ್ಯಾಟರಿಯ ಸ್ಮಾರ್ಟ್‌ಫೋನ್‌
Image
ರಿಯಲ್ ಮಿಯಿಂದ ಐಕ್ಯೂ ವರೆಗೆ: ಈ ವಾರ ಬಿಡುಗಡೆಯಾಗಲಿರುವ 5 ಹೊಸ ಫೋನ್‌ಗಳು
Image
ಫೋನ್ ಪೇ, ಗೂಗಲ್ ಪೇ ಮೂಲಕ ನಿಮಿಷಗಳಲ್ಲಿ ಸಾಲ ಪಡೆಯುವುದು ಹೇಗೆ?

ಗ್ಯಾಲಕ್ಸಿ Z ಫೋಲ್ಡ್ 7 ಬಗ್ಗೆ ಮಾತನಾಡಿದರೆ, ಸ್ಯಾಮ್‌ಸಂಗ್‌ನ ಈ ಮಡಚಬಹುದಾದ ಫೋನ್ 8-ಇಂಚಿನ ಒಳಗಿನ ಡಿಸ್​​​​​​ಪ್ಲೇಯನ್ನು ಹೊಂದಿರುತ್ತದೆ. ಕವರ್ ಡಿಸ್ಪ್ಲೇ 6.5-ಇಂಚಿನ ಪೂರ್ಣ HD ಪ್ಲಸ್ ರೆಸಲ್ಯೂಶನ್ AMOLED ನೊಂದಿಗೆ ಹೊಂದಿರುತ್ತದೆ. ಈ ಹ್ಯಾಂಡ್‌ಸೆಟ್ ಉತ್ತಮ ಗುಣಮಟ್ಟಕ್ಕಾಗಿ ಲೋಹದ ಹಿಂಜ್ ಮತ್ತು ಬ್ಯಾಕ್‌ಪ್ಲೇಟ್ ಅನ್ನು ಹೊಂದಿರುತ್ತದೆ. ಇದನ್ನು ಫೈನ್ ಎಂ-ಟೆಕ್ ತಯಾರಿಸುತ್ತದೆ. ಮಡಚಬಹುದಾದ ಐಫೋನ್ ಆಪಲ್‌ನ ಆಪ್ಟಿಮೈಸ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

Tech Tips: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪದೇ ಪದೇ ನೆಟ್‌ವರ್ಕ್ ಸಮಸ್ಯೆ ಆಗುತ್ತಾ?: ಈ ಸುಲಭ ವಿಧಾನಗಳಿಂದ ಸರಿಪಡಿಸಿ

ಮಡಿಸಬಹುದಾದ ಐಫೋನ್ ಬೆಲೆ (ಅಂದಾಜು)

ಮಡಚಬಹುದಾದ ಐಫೋನ್‌ನ ಬೆಲೆಯನ್ನು ಕಂಪನಿ ಇನ್ನೂ ಆಧಕೃತವಾಗಿ ಬಹುರಂಗ ಪಡಿಸಿಲ್ಲ. ಆದಾಗ್ಯೂ, ಕೆಲವು ವರದಿಗಳ ಪ್ರಕಾರ, ಇದರ ಆರಂಭಿಕ ಬೆಲೆ 1,93,000 ರೂ. ಆಗಿರುತ್ತದೆ. 512GB ಅಥವಾ 1TB ಸಂಗ್ರಹಣೆಯೊಂದಿಗೆ ಮಡಚಬಹುದಾದ ಐಫೋನ್ ಖರೀದಿಸಲು ಬಯಸುವ ಗ್ರಾಹಕರು ಕ್ರಮವಾಗಿ 2,17,200 ಮತ್ತು 2,41,400 ರೂ. ಖರ್ಚು ಮಾಡಬೇಕಾಗುತ್ತದೆ. ಸ್ಯಾಮ್​ಸಂಗ್ ಗ್ಯಾಲಕ್ಸಿ Z Fold 7 ನ ಅದೇ ಶೇಖರಣಾ ರೂಪಾಂತರಗಳ ಬೆಲೆ 1,81,000 ಮತ್ತು 2,11,300 ರೂ. ಆಗಿದೆ.

ಈ ಸ್ಮಾರ್ಟ್‌ಫೋನ್‌ಗಳೊಂದಿಗೆ ಸ್ಪರ್ಧೆ

ಇದುವರೆಗಿನ ಹಲವಾರು ವರದಿಗಳು ಈ ಫೋನ್ ಅನ್ನು 2026 ರಲ್ಲಿ ಬಿಡುಗಡೆ ಮಾಡಬಹುದು ಎಂದು ಸೂಚಿಸಿವೆ. ಈ ಫೋನ್ ಬಿಡುಗಡೆಯಾದರೆ, ಇದು ಸ್ಯಾಮ್​ಸಂಗ್ ಗ್ಯಾಲಕ್ಸಿ Z Fold 7, ಹಾಗೆಯೇ ವಿವೋ X Fold 5 ನಂತಹ ಮಾದರಿಗಳೊಂದಿಗೆ ಸ್ಪರ್ಧಿಸುತ್ತದೆ.

ಸದ್ಯ ಆಪಲ್ ತನ್ನ ಹೊಸ ಐಫೋನ್ 17 ಸರಣಿಯನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಿದೆ. ಈ ಸರಣಿಯಲ್ಲಿ ಐಫೋನ್ 17, ಐಫೋನ್ 17 ಪ್ರೊ, ಐಫೋನ್ 17 ಪ್ರೊ ಮ್ಯಾಕ್ಸ್ ಮತ್ತು ಐಫೋನ್ 17 ಏರ್ ಎಂಬ ನಾಲ್ಕು ಮಾದರಿಗಳು ಬಿಡುಗಡೆಯಾಗಲಿವೆ. ಈ ಸರಣಿಯ ಆಪಲ್ ಅನ್ನು ಸೆಪ್ಟೆಂಬರ್ 8 ರಿಂದ 11 ರ ನಡುವೆ ಬಿಡುಗಡೆ ಮಾಡಬಹುದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:50 am, Fri, 25 July 25

ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ
‘ಅದೃಷ್ಟ ದೇವತೆ ಬಟ್ಟೆ ಬಿಚ್ಚಿಸುವವರು ದೇವರಿಗೆ ವಂದಿಸುತ್ತಾರೆ’; ಪ್ರಥಮ್
‘ಅದೃಷ್ಟ ದೇವತೆ ಬಟ್ಟೆ ಬಿಚ್ಚಿಸುವವರು ದೇವರಿಗೆ ವಂದಿಸುತ್ತಾರೆ’; ಪ್ರಥಮ್
ಜನರ ಸಮಸ್ಯೆ ಪರಿಹಾರಕ್ಕೆ ಆ್ಯಪ್​: ವಿನೂತನ ಪ್ರಯತ್ನಕ್ಕೆ ಕೈಹಾಕಿದ ಶಾಸಕ
ಜನರ ಸಮಸ್ಯೆ ಪರಿಹಾರಕ್ಕೆ ಆ್ಯಪ್​: ವಿನೂತನ ಪ್ರಯತ್ನಕ್ಕೆ ಕೈಹಾಕಿದ ಶಾಸಕ