10000mAh Battery Smartphones: ಮಾರುಕಟ್ಟೆಯನ್ನೇ ಬೆಚ್ಚಿಬೀಳಿಸಿದ 10,000mAh ಬ್ಯಾಟರಿಯ ಸ್ಮಾರ್ಟ್‌ಫೋನ್
ಹಾನರ್ ಇತ್ತೀಚೆಗೆ ದೊಡ್ಡ ಬ್ಯಾಟರಿ ಹೊಂದಿರುವ 7.76mm ತೆಳುವಾದ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತು. ಚೀನಾದ ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್, ಮುಂದಿನ ವರ್ಷ ಮಧ್ಯಮ ಬಜೆಟ್ ಶ್ರೇಣಿಯಲ್ಲಿ 10000mAh ಬ್ಯಾಟರಿ ಹೊಂದಿರುವ ಫೋನ್ ಅನ್ನು ಬಿಡುಗಡೆ ಮಾಡಲಿದೆ ಎಂದು ಚೀನಾದ ಮೈಕ್ರೋಬ್ಲಾಗಿಂಗ್ ಸೈಟ್ ವೀಬೊದಲ್ಲಿ ವರದಿ ಮಾಡಿದೆ.

ಬೆಂಗಳೂರು (ಜು. 24): ಪ್ರೀಮಿಯಂ ಫೋನ್ ಉತ್ಪಾದನಾ ಬ್ರಾಂಡ್‌ಗಳಾದ ಆಪಲ್ ಮತ್ತು ಸ್ಯಾಮ್ಸಂಗ್ಗೆ ಈ ನಡುಕ ಶುರುವಾಗಿದೆ. ಚೀನಾದ ಕಂಪನಿಗಳು ಈಗ 10,000 mAh ಬ್ಯಾಟರಿಗಳನ್ನು ಹೊಂದಿರುವ ಶಕ್ತಿಶಾಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿವೆ. ರಿಯಲ್ ಮಿ ಈಗಾಗಲೇ 10000 mAh ಬ್ಯಾಟರಿಯನ್ನು ಹೊಂದಿರುವ ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಅಲ್ಲದೆ, ಈಗ ಒಪ್ಪೋ (Oppo Smartphone), ಹಾನರ್, ವಿವೋ, ಶಿಯೋಮಿಯಂತಹ ಚೀನಾದ ಕಂಪನಿಗಳು ಮುಂದಿನ ವರ್ಷ ಅಂದರೆ 2026 ರಲ್ಲಿ ದೊಡ್ಡ ಬ್ಯಾಟರಿಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ವರದಿ ಆಗಿದೆ.
ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್‌ಗಳಲ್ಲಿ ದೊಡ್ಡ ಬ್ಯಾಟರಿಗಳ ಕ್ರೇಜ್ ಹೆಚ್ಚುತ್ತಿದೆ. ಕೆಲವು ಸಮಯದ ಹಿಂದೆ, ಹಾನರ್ X70 ಅನ್ನು 8300mAh ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಾಯಿತು. ಹಾನರ್ ಹೊರತುಪಡಿಸಿ, ಇತ್ತೀಚೆಗೆ ಪೋಕೋ F7 5G ಅನ್ನು 7550mAh ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಾಯಿತು. ಇದು ಕಂಪನಿಯ ಇದುವರೆಗಿನ ಅತ್ಯಂತ ಶಕ್ತಿಶಾಲಿ ಗೇಮಿಂಗ್ ಫೋನ್ ಆಗಿದೆ. ವರದಿಗಳ ಪ್ರಕಾರ, ಕೆಲವು ಚೀನೀ ಕಂಪನಿಗಳು ಶೀಘ್ರದಲ್ಲೇ 7000mAh ಬ್ಯಾಟರಿಯೊಂದಿಗೆ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಬಹುದು.
ಹಾನರ್ ಇತ್ತೀಚೆಗೆ ದೊಡ್ಡ ಬ್ಯಾಟರಿ ಹೊಂದಿರುವ 7.76mm ತೆಳುವಾದ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತು. ಚೀನಾದ ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್, ಮುಂದಿನ ವರ್ಷ ಮಧ್ಯಮ ಬಜೆಟ್ ಶ್ರೇಣಿಯಲ್ಲಿ 10000mAh ಬ್ಯಾಟರಿ ಹೊಂದಿರುವ ಫೋನ್ ಅನ್ನು ಬಿಡುಗಡೆ ಮಾಡಲಿದೆ ಎಂದು ಚೀನಾದ ಮೈಕ್ರೋಬ್ಲಾಗಿಂಗ್ ಸೈಟ್ ವೀಬೊದಲ್ಲಿ ವರದಿ ಮಾಡಿದೆ.
Smartphones: ರಿಯಲ್ ಮಿಯಿಂದ ಐಕ್ಯೂ ವರೆಗೆ: ಈ ವಾರ ಬಿಡುಗಡೆಯಾಗಲಿರುವ 5 ಹೊಸ ಸ್ಮಾರ್ಟ್‌ಫೋನ್‌ಗಳು
ಹಿಂದೆ, ಅನೇಕ ಕಂಪನಿಗಳು ದೊಡ್ಡ ಬ್ಯಾಟರಿಗಳನ್ನು ಹೊಂದಿರುವ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರಲಿಲ್ಲ. ಏಕೆಂದರೆ ದೊಡ್ಡ ಬ್ಯಾಟರಿಗಳು ಫೋನ್‌ನ ತೂಕವನ್ನು ಹೆಚ್ಚಿಸುತ್ತವೆ. ಆದರೆ ಈಗ ಚೀನಾದ ಕಂಪನಿಗಳು ಸಿಲಿಕಾನ್-ಕಾರ್ಬನ್ ಬ್ಯಾಟರಿಗಳನ್ನು ಬಳಸಲು ಪ್ರಾರಂಭಿಸಿವೆ. ಈ ಬ್ಯಾಟರಿಯ ಪ್ರಯೋಜನವೆಂದರೆ ಹೆಚ್ಚಿನ ಸಾಮರ್ಥ್ಯದ (mAh) ಬ್ಯಾಟರಿಗಳು ಕಾಂಪ್ಯಾಕ್ಟ್ ವಿನ್ಯಾಸದ ಫೋನ್‌ಗಳಲ್ಲಿ ಸುಲಭವಾಗಿ ಹೊಂದಿಕೊಳ್ಳುತ್ತವೆ. ಸ್ಮಾರ್ಟ್‌ಫೋನ್ PCB ಅನ್ನು ಚಿಕ್ಕದಾಗಿ ಮಾಡಬಹುದು. ಅಲ್ಲದೆ, ಅದೇ ತಂತ್ರಜ್ಞಾನವನ್ನು ಹಾನರ್ ತನ್ನ ಹೊಸ ಫೋನ್‌ನಲ್ಲಿ ಬಳಸಿದೆ.
ಮತ್ತೊಂದೆಡೆ, ಗೂಗಲ್, ಸ್ಯಾಮ್‌ಸಂಗ್ ಮತ್ತು ಆಪಲ್‌ನಂತಹ ಬ್ರ್ಯಾಂಡ್‌ಗಳು ಇನ್ನೂ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಬಳಸುತ್ತವೆ. ಈ ಬ್ಯಾಟರಿಗಳು ಭಾರವಾಗಿದ್ದು, ಕಾಂಪ್ಯಾಕ್ಟ್ ಫೋನ್‌ಗಳನ್ನು ತಯಾರಿಸಲು ಅಸಾಧ್ಯವಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 25 ಬೆಲೆ ಸುಮಾರು 75,000 ರೂ. ಈ ಫೋನ್ 4000 mAh ಬ್ಯಾಟರಿಯನ್ನು ಹೊಂದಿದೆ. ಮತ್ತೊಂದೆಡೆ, ಚೀನಾದ ಕಂಪನಿಗಳು 6000mAh ವರೆಗಿನ ಬ್ಯಾಟರಿಗಳನ್ನು ಹೊಂದಿರುವ ಫೋನ್‌ಗಳನ್ನು 10,000 ರೂ. ಗೆ ಮಾರಾಟ ಮಾಡುತ್ತಿವೆ. ದೊಡ್ಡ ಬ್ಯಾಟರಿಯ ಪ್ರಯೋಜನವೆಂದರೆ ಬಳಕೆದಾರರು ಫೋನ್ ಅನ್ನು ಮತ್ತೆ ಮತ್ತೆ ಚಾರ್ಜ್ ಮಾಡುವ ಬಗ್ಗೆ ಚಿಂತಿಸಬೇಕಾಗಿಲ್ಲ. ಹೀಗಾಗಿ ಅಧಿಕ ಬ್ಯಾಟರಿಯ ಫೋನುಗಳ ಬೇಡಿಕೆ ಇಂದು ಹೆಚ್ಚಾಗುತ್ತಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








