AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಜೂನ್ 3ರಂದು ಇಂಧನ ದರ ಎಷ್ಟಿದೆ? ವಿವಿಧ ನಗರಗಳ ಪೆಟ್ರೋಲ್, ಡೀಸೆಲ್​ ಬೆಲೆ ಇಲ್ಲಿದೆ

Petrol diesel Price Today: ಇಂದು ಗುರವಾರ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಸತತ ಮೂರು ದಿನಗಳ ಕಾಲ ಇಂಧನ ದರ ಸ್ಥಿರವಾಗಿದೆ. ಕಳೆದ ಸೋಮವಾರ ಲೀಟರ್​ ಪೆಟ್ರೋಲ್​ ದರದಲ್ಲಿ 26 ಪೈಸೆ ಹಾಗೂ ಲೀಟರ್​ ಡೀಸೆಲ್​ ದರದಲ್ಲಿ 23 ಪೈಸೆ ಏರಿಕೆ ಮಾಡಲಾಯಿತು.

Petrol Price Today: ಜೂನ್ 3ರಂದು ಇಂಧನ ದರ ಎಷ್ಟಿದೆ? ವಿವಿಧ ನಗರಗಳ ಪೆಟ್ರೋಲ್, ಡೀಸೆಲ್​ ಬೆಲೆ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Digi Tech Desk

Updated on:Jun 03, 2021 | 10:18 AM

ದೆಹಲಿ: ಇಂದು (ಜೂನ್ 3) ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಗಳಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಕಳೆದ ಸೋಮವಾರ ಲೀಟರ್​ ಪೆಟ್ರೋಲ್​ ದರದಲ್ಲಿ 26 ಪೈಸೆ ಹಾಗೂ ಲೀಟರ್​ ಡೀಸೆಲ್​ ದರದಲ್ಲಿ 23 ಪೈಸೆ ಏರಿಕೆ ಮಾಡಲಾಯಿತು. ಆದಾದ ಬಳಿಕ ಸತತ ಎರಡು ಮೂರು ದಿನಗಳ ಕಾಲ ಇಂಧನ ದರ ಸ್ಥಿರವಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ ಬೆಲೆ 94.49 ರೂ ಹಾಗೂ ಲೀಟರ್​ ಡೀಸೆಲ್​ ದರ 85.38 ರೂಪಾಯಿ ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್​ ಪೆಟ್ರೊಲ್​ ದರ 100.72 ರೂಪಾಯಿ ಇದೆ. ಚೆನ್ನೈನಲ್ಲಿ ಲೀಟರ್​ ಪೆಟ್ರೋಲ್​ಗೆ 95.99 ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು, ಕೋಲ್ಕತ್ತಾದಲ್ಲಿ ಲೀಟರ್​ ಪೆಟ್ರೋಲ್​ ದರ 94.50 ರೂ. ದಾಖಲಾಗಿದೆ.

ಜೂನ್​ ತಿಂಗಳ ಪ್ರಾರಂಭದಿಂದಲೇ ಇಂಧನ ದರ ಏರಿಕೆ ಕಾಣಲು ಪ್ರಾರಂಭಿಸು. ಏರುತ್ತಲೇ ಇರುವ ಇಂಧನ ದರದಿಂದಾಗಿ ಕೆಲವು ನಗರಗಳಲ್ಲಿ ಲೀಟರ್​ ಪೆಟ್ರೋಲ್​ ದರ ಶತಕ ಬಾರಿಸಿ ಮುನ್ನುಗ್ಗಿದೆ. ಇನ್ನು ಕೆಲವು ನಗರಗಳು ಶತಕದ ಗಡಿಯಲ್ಲಿವೆ.

ಕಳೆದ ಮೇ ತಿಂಗಳ 4ನೇ ತಾರೀಕಿನಿಂದ ತಿಂಗಳ ಕೊನೆಯವರೆಗೆ ಒಟ್ಟು 16 ಬಾರಿ ಇಂಧನ ದರವನ್ನು ಏರಿಕೆ ಮಾಡಲಾಗಿತ್ತು. ಇದೀಗ ಜೂನ್​ ತಿಂಗಳ ಮೊದಲನೇ ದಿನವೇ ಇಂಧನ ದರ ಏರಿಕೆ ಕಂಡಿತು. ತದನಂತರ ಸತತ ಮೂರು ದಿನಗಳ ಕಾಲ ಇಂಧನ ದರದಲ್ಲಿ ಏರಿಕೆ ಕಂಡು ಬಂದಿಲ್ಲ. ಇಂದು ಗುರವಾರ ತೈಲ ದರದಲ್ಲಿ ಯಾವುದೇ ಬದಲಾವಣೆಗಳಿಲ್ಲ.

ದೆಹಲಿಯಲ್ಲಿ ಲೀಟರ್​ ಡೀಸೆಲ್​ ಬೆಲೆ 85.38 ರೂಪಾಯಿ ಇದೆ. ಅದೇರೀತಿ ಮುಂಬೈ ನಗರದಲ್ಲಿ 92.69 ರೂ. ನಿಗದಿ ಮಾಡಲಾಗಿದೆ. ಚೆನ್ನೈನಲ್ಲಿ 95.99 ರೂಪಾಯಿ ಇದ್ದರೆ, ಕೋಲ್ಕತ್ತಾದಲ್ಲಿ 88.23 ರೂ. ದಾಖಲಿಸಲಾಗಿದೆ. ಇನ್ನು ಬೆಂಗಳೂರು ನಗರದಲ್ಲಿ ಲೀಟರ್ ಡೀಸೆಲ್​ ದರ ರೂಪಾಯಿಗೆ ಏರಿಕೆಯಾಗಿದೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ: ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

Published On - 10:10 am, Thu, 3 June 21

ನೈಟ್ ರೈಡರ್ಸ್ ವಿರುದ್ಧ 11 ರನ್​ಗಳಿಂದ ಗೆದ್ದ ಗ್ಲೆನ್ ಮ್ಯಾಕ್ಸ್​ವೆಲ್..!
ನೈಟ್ ರೈಡರ್ಸ್ ವಿರುದ್ಧ 11 ರನ್​ಗಳಿಂದ ಗೆದ್ದ ಗ್ಲೆನ್ ಮ್ಯಾಕ್ಸ್​ವೆಲ್..!
ಉಡುಪಿ: ಶರವೇಗದ ನದಿಯಲ್ಲಿ ದೋಣಿ ನಡೆಸುವ ಧೀರ ಮಹಿಳೆ, ವಿಡಿಯೋ ನೋಡಿ
ಉಡುಪಿ: ಶರವೇಗದ ನದಿಯಲ್ಲಿ ದೋಣಿ ನಡೆಸುವ ಧೀರ ಮಹಿಳೆ, ವಿಡಿಯೋ ನೋಡಿ
ಯುವಮುಖಂಡರನ್ನು ಸೆಳೆಯುವಲ್ಲಿ ಈಶ್ವರಪ್ಪ ವಿಫಲರಾದಂತೆ ಕಾಣಿಸುತ್ತದೆ
ಯುವಮುಖಂಡರನ್ನು ಸೆಳೆಯುವಲ್ಲಿ ಈಶ್ವರಪ್ಪ ವಿಫಲರಾದಂತೆ ಕಾಣಿಸುತ್ತದೆ
ನಮ್ಮಿಂದ ಆದ ಅಗೌರವವನ್ನು ರಚಿತಾ ರಾಮ್ ಸ್ಪಷ್ಟಪಡಿಸಬೇಕು; ರಾಜಶೇಖರ್
ನಮ್ಮಿಂದ ಆದ ಅಗೌರವವನ್ನು ರಚಿತಾ ರಾಮ್ ಸ್ಪಷ್ಟಪಡಿಸಬೇಕು; ರಾಜಶೇಖರ್
ಅರಬ್ಬೀ ಸಮುದ್ರದಲ್ಲಿ ಭಾರೀ ಅಲೆಗಳು: ಮಂಗಳೂರಿನ ಎಲ್ಲಾ ಬೀಚ್​ಗಳಿಗೆ ನಿರ್ಬಂಧ
ಅರಬ್ಬೀ ಸಮುದ್ರದಲ್ಲಿ ಭಾರೀ ಅಲೆಗಳು: ಮಂಗಳೂರಿನ ಎಲ್ಲಾ ಬೀಚ್​ಗಳಿಗೆ ನಿರ್ಬಂಧ
‘ಥಗ್ ಲೈಫ್’ ಬಿಡುಗಡೆ ಆದರೆ, ಪರೋಕ್ಷ ಎಚ್ಚರಿಕೆ ಕೊಟ್ಟ ಪ್ರವೀಣ್ ಶೆಟ್ಟಿ
‘ಥಗ್ ಲೈಫ್’ ಬಿಡುಗಡೆ ಆದರೆ, ಪರೋಕ್ಷ ಎಚ್ಚರಿಕೆ ಕೊಟ್ಟ ಪ್ರವೀಣ್ ಶೆಟ್ಟಿ
ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ವಂಚನೆ ಮಾಡಿದ ಆರೋಪ
ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ವಂಚನೆ ಮಾಡಿದ ಆರೋಪ
ರಾಮೋಜಿ ಫಿಲ್ಮ್​ಸಿಟಿಯಲ್ಲಿ 16 ಮಹಾನಟಿಯರ ಭರ್ಜರಿ ಫೋಟೋಶೂಟ್
ರಾಮೋಜಿ ಫಿಲ್ಮ್​ಸಿಟಿಯಲ್ಲಿ 16 ಮಹಾನಟಿಯರ ಭರ್ಜರಿ ಫೋಟೋಶೂಟ್
ಸಕಲೇಶಪುರ: ರಸ್ತೆಯಲ್ಲೇ ಕಾಡಾನೆಗಳ ಪರೇಡ್! ಬೆಚ್ಚಿಬಿದ್ದ ಗ್ರಾಮಸ್ಥರು
ಸಕಲೇಶಪುರ: ರಸ್ತೆಯಲ್ಲೇ ಕಾಡಾನೆಗಳ ಪರೇಡ್! ಬೆಚ್ಚಿಬಿದ್ದ ಗ್ರಾಮಸ್ಥರು
ಸಚಿವ ಶಿವರಾಜ್ ತಂಗಡಗಿ ಬೆಂಗಾವಲು ಪಡೆ ವಾಹನ ಅಪಘಾತ, ಇಬ್ಬರಿಗೆ ಗಾಯ
ಸಚಿವ ಶಿವರಾಜ್ ತಂಗಡಗಿ ಬೆಂಗಾವಲು ಪಡೆ ವಾಹನ ಅಪಘಾತ, ಇಬ್ಬರಿಗೆ ಗಾಯ