Wipro FY21 Q4 results: ಜನವರಿಯಿಂದ ಮಾರ್ಚ್ ತ್ರೈಮಾಸಿಕಕ್ಕೆ ವಿಪ್ರೋ ಲಾಭ ರೂ. 2972 ಕೋಟಿ

ಸಾಫ್ಟ್​ವೇರ್ ಕಂಪೆನಿ ವಿಪ್ರೋದಿಂದ 2020- 21ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಜನವರಿಯಿಂದ- ಮಾರ್ಚ್​ ತನಕದ ಫಲಿತಾಂಶವನ್ನು ಘೋಷಿಸಿದ್ದು, 2,972 ಕೋಟಿ ರೂಪಾಯಿ ಲಾಭವನ್ನು ದಾಖಲಿಸಿದೆ.

Wipro FY21 Q4 results: ಜನವರಿಯಿಂದ ಮಾರ್ಚ್ ತ್ರೈಮಾಸಿಕಕ್ಕೆ ವಿಪ್ರೋ ಲಾಭ ರೂ. 2972 ಕೋಟಿ
ವಿಪ್ರೋ (ಸಾಂದರ್ಭಿಕ ಚಿತ್ರ)
Follow us
Srinivas Mata
|

Updated on: Apr 15, 2021 | 5:56 PM

ಸಾಫ್ಟ್​ವೇರ್ ಕಂಪೆನಿ ವಿಪ್ರೋದಿಂದ ಏಪ್ರಿಲ್ 15ರಂದು FY21 Q4 (ಜನವರಿಯಿಂದ ಮಾರ್ಚ್ ತ್ರೈಮಾಸಿಕ) ಫಲಿತಾಂಶ ಘೋಷಣೆ ಮಾಡಲಾಗಿದೆ. ಶೇ 0.1ರಷ್ಟು ಸತತ ಬೆಳವಣಿಗೆ ದಾಖಲಿಸಿ, ರೂ. 2,972.3 ಕೋಟಿ ಲಾಭವನ್ನು ಗಳಿಸಿದ್ದು, ಈ ಮೂಲಕ ವಿಶ್ಲೇಷಕರ ನಿರೀಕ್ಷೆಯನ್ನು ತಲುಪಿದೆ. ಐ.ಟಿ. ಸೇವೆಗಳ ಉದ್ಯಮವನ್ನು ವಿಶ್ಲೇಷಕರು ದೊಡ್ಡ ಪ್ರಮಾಣದಲ್ಲಿ ಅನುಸರಿಸುತ್ತಾರೆ. 2020- 21ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪೆನಿಯು 16,334 ಕೋಟಿ ರೂಪಾಯಿ ಆದಾಯ ಗಳಿಸಿದೆ. ಕಳೆದ ತ್ರೈಮಾಸಿಕದಲ್ಲಿ ಗಳಿಸಿದ್ದಕ್ಕಿಂತ ಶೇ 3.9ರಷ್ಟು ಬೆಳವಣಿಗೆ ಸಾಧಿಸಿದೆ. ನಾಲ್ಕನೇ ತ್ರೈಮಾಸಿಕದ ಫಲಿತಾಂಶವು ಕಳೆದ 10 ವರ್ಷಗಳಲ್ಲೇ ಅತ್ಯುತ್ತಮವಾದದ್ದು ಎಂದು ವಿಪ್ರೋ ಹೇಳಿರುವುದಾಗಿ ಸಿಎನ್​ಬಿಸಿ- ಟಿವಿ 18 ವರದಿ ಮಾಡಿದೆ.

ಐ.ಟಿ. ಸೇವೆಗಳ ಸೆಗ್ಮೆಂಟ್ ಮಾರ್ಚ್ ತ್ರೈಮಾಸಿಕದಲ್ಲಿ 2,152.4 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ ಗಳಿಸಿದ್ದು, ಕಳೆದ ವರ್ಷದಲ್ಲಿನ ಇದೇ ಅವಧಿಗಿಂತ ಶೇ 3.8ರಷ್ಟು ಏರಿಕೆ ದಾಖಲಿಸಿದೆ. “ನಾವು ಸತತವಾಗಿ ಮೂರನೇ ತ್ರೈಮಾಸಿಕ ಪ್ರಬಲ ಆದಾಯ ಬೆಳವಣಿಗೆ, ಹೊಸ ವ್ಯವಹಾರಗಳ ಪಡೆದುಕೊಳ್ಳುವುದು ಮತ್ತು ಕಾರ್ಯ ನಿರ್ವಹಣೆ ಮಾರ್ಜಿನ್ ದಾಖಲಿಸಿದ್ದೇವೆ. ಜಾಗತಿಕ ಹಣಕಾಸು ವಲಯದಲ್ಲಿ ಉತ್ತೇಜನ ನೀಡುವ, ನಮ್ಮ ಅತಿ ದೊಡ್ಡ ವ್ಯವಹಾರ ಕ್ಯಾಪ್ಕೋ ಖರೀದಿಯನ್ನು ಮಾಡಿದ್ದೇವೆ,” ಎಂದು ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಒ ಥಿಯೆರಿ ಡೆಲಾಪೊರ್ಟೆ ಹೇಳಿದ್ದಾರೆ.

ಲಾಭದ ಪ್ರಮಾಣದ ಮೇಲೆ ವೇತನ ಹೆಚ್ಚಳದ ಪ್ರಭಾವ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ 344 ಬಿಪಿಎಸ್ ವಿಸ್ತರಣೆ ಆಗಿದೆ. ಈ ವರ್ಷಕ್ಕೆ ಶೇ 20.3 ಆಗಿದ್ದು, ವರ್ಷದಿಂದ ವರ್ಷಕ್ಕೆ 218 ಬಿಪಿಎಸ್ ವಿಸ್ತರಣೆ ಆಗಿದೆ. ವಿಪ್ರೋ ಹೇಳಿರುವ ಪ್ರಕಾರ, 100 ಮಿಲಿಯನ್ ಡಾಲರ್ ವಿಭಾಗದಲ್ಲಿ ಒಬ್ಬ ಗ್ರಾಹಕರು, 75 ಮಿಲಿಯನ್ ಡಾಲರ್ ಮೇಲ್ಪಟ್ಟ ಬ್ಯಾಂಡ್​ನಲ್ಲಿ ಒಬ್ಬರು, 50 ಮಿಲಿಯನ್ ಯುಎಸ್​ಡಿಗೂ ಹೆಚ್ಚಿನ ವಿಭಾಗದಲ್ಲಿ ಇಬ್ಬರು ಗ್ರಾಹಕರು ಸೇರ್ಪಡೆಯಾಗಿದ್ದಾರೆ. ಈ ತ್ರೈಮಾಸಿಕದಲ್ಲಿ ಕಂಪೆನಿಗೆ 52 ಗ್ರಾಹಕರು ಸೇರ್ಪಡೆ ಆಗಿದ್ದಾರೆ. ಮಾರ್ಚ್ 2021ಕ್ಕೆ ಒಟ್ಟಾರೆ ಸಕ್ರಿಯ ಗ್ರಾಹಕರ ಸಂಖ್ಯೆ 1120 ಆಗಿದೆ. ಡಿಸೆಂಬರ್ 2020ರಲ್ಲಿ ಈ ಸಂಖ್ಯೆ 1136 ಇತ್ತು.

ಇದನ್ನೂ ಓದಿ: ಇನ್ಫೋಸಿಸ್ ಲಾಭದಲ್ಲಿ ಶೇ 17ರಷ್ಟು ಏರಿಕೆ; ಪ್ರತಿ ಷೇರಿಗೆ 15 ರೂ. ಡಿವಿಡೆಂಡ್, 9,200 ಕೋಟಿ ತನಕ ಷೇರು ಬೈಬ್ಯಾಕ್

ಇದನ್ನೂ ಓದಿ: TCS FY21 Q4 results: ಟಿಸಿಎಸ್ ಲಾಭ ರೂ. 9246 ಕೋಟಿ; ಪ್ರತಿ ಷೇರಿಗೆ ತಲಾ 15 ರೂ. ಡಿವಿಡೆಂಡ್

(Bengaluru based software company announced FY21 Q4 results, profit at Rs 2,972 crore.)

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್